ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪ / ವಾಗರ್ಥ
ಇದೇ ರೀತಿಯಲ್ಲಿ ಪೂರ್ವರಂಗದ ಕೆಲವು ಸಂದರ್ಭಗಳಲ್ಲಿ ನಿಶ್ಚಿತ ವಾದ ಮಾತುಗಳು ಬರುತ್ತವೆ. ಇವೆಲ್ಲ ಮುಖ್ಯವಾಗಿ ಆಚರಣಾತ್ಮಕ.
ಕೋಡಂಗಿಯ ಮಾತುಗಳ ಕುರಿತು ಗಮನಿಸಬೇಕಾದ ವಿಷಯ ವೆಂದರೆ, ಅವು ಭಕ್ತಿಪರವಾಗಿ, ಆ ಆ ದೇವತೆಗಳ ಹೊಗಳಿಕೆ ಯನ್ನುಳ್ಳದ್ದಾಗಿ ಇರುವುದಾದರೂ, ಜತೆಯಲ್ಲಿ ಅವು ದೇವರನ್ನು ಸಹ ಹಾಸ್ಯಮಾಡುತ್ತವೆ. ಪೌರಾಣಿಕತೆಯೊಂದಿಗೆ ಲೌಕಿಕತೆಯನ್ನೂ, ಸ್ಥಳೀಯ ಕರಣವನ್ನೂ (regionalisation) ಸಾಧಿಸುತ್ತವೆ. ಇಲ್ಲಿ ಭಕ್ತಿ ಯೊಂದಿಗೆ ವಿನೋದ, ತುಂಟತನಗಳೂ ಪ್ರಾದೇಶಿಕತೆಗಳೂ ಬೆರೆತು ಕೊಂಡಿರುತ್ತವೆ.
ಹಿಂದಣ ಪೂರ್ವರಂಗದ ಇನ್ನೊಂದು ಅಂಗವಾಗಿದ್ದುದು ಕಟ್ಟು ಹಾಸ್ಯಗಳೆಂಬ ವಿವಿಧ ವೇಷಗಳ ಪ್ರಹಸನ ಭಾಗ. (ಈಗ ಇದು ಲುಪ್ತ ವಾಗಿದೆ), ಇದರಲ್ಲಿ ಬ್ರಾಹ್ಮಣ, ಮಡಿವಾಳ, ವಿಶ್ವಕರ್ಮ, ಮುಸಲ್ಮಾನ, ಬೈರಾಗಿ ಮೊದಲಾದ ವೇಷಗಳೂ, ಗಂಡ-ಹೆಂಡತಿ, ವ್ಯಾಪಾರಿ ಮೊದಲಾದ ಸಂಗತಿಗಳೂ ಇವೆ. ಇವು ಪ್ರಾಯಃ ಆಚರಣಾತ್ಮಕ (ritual) ಅಲ್ಲ, ರಂಜನಾತ್ಮಕ, ಈ ವೇಷಗಳಿಗೆ ಪದ್ಯಗಳಾಗಲಿ, ಹಿಮ್ಮೇಳವಾಗಲಿ ಮುಖ್ಯವಲ್ಲ.

ಆದುದರಿಂದಲೇ ಬಹುಶಃ ಇವುಗಳಿಗೆ ಕಟ್ಟುಹಾಸ್ಯ (ಕಟ್ಟು ಕಟ್ಟಿದ್ದು, ಕೃತಕ, ಮೌಲಿಕವಲ್ಲದ್ದು)ಗಳೆಂದು ಹೆಸರು. ಈ ವೇಷಗಳ ಮಾತುಗಳು ತೀರ ನಿಶ್ಚಿತವಲ್ಲ. ತೀರ ಪರಿವರ್ತನಶೀಲವೂ ಅಲ್ಲ. ಈ ಮಾತುಗಳಿಗೆ ಭಾಗವತನ ಪೂರಕ ಮಾತುಗಳಿರುತ್ತವೆ. ಉದಾ ಬ್ರಾಹ್ಮಣ ಹಾಸ್ಯವು ಪ್ರವೇಶಿಸಿದೊಡನೆ 'ಭಟ್ರೇ ಎಲ್ಲಿಗೆ ಸವಾರಿ?' ಎಂದೋ, 'ಯಾವೂರಿಂದ ಬಂದ್ರಿ, ಭಟ್ರೆ?' ಇತ್ಯಾದಿಯಾಗಿ ತೊಡಗಿ ಆ ಆ ಹಾಸ್ಯದ ಕೊನೆಯ ವರೆಗೆ ಅಲ್ಲಲ್ಲಿ ಮಾತುಗಳಿರುತ್ತವೆ. ಕಟ್ಟುಹಾಸ್ಯ ಗಳು ಏಕಪಾತ್ರಗಳಾಗಿದ್ದರೆ, ಆಗ ಭಾಗವತನ ಮಾತು ಹೆಚ್ಚು. ಹೆಚ್ಚು ಪಾತ್ರಗಳದ್ದಾದರೆ, ಕಡಿಮೆ.

ಈಗ, ಭಾಗವತನು ಆಡುವ ಮಾತುಗಳ ವಿಷಯವನ್ನು ನೋಡಬಹುದು. ಚೌಕಿಯಲ್ಲಿ ರಂಗಸ್ಥಳಕ್ಕೆ ಅಪ್ಪಣೆ ಪಡೆಯುವಲ್ಲಿಂದ, ಆಟವು ಕೊನೆಗೊಳ್ಳುವ ತನಕ, ಅಲ್ಲಲ್ಲಿ ಭಾಗವತನ ಮಾತುಗಳು