ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನದ ವಾಚಿಕಾಭಿನಯ : ಅಭಿವ್ಯಕ್ತಿ ಮತ್ತು ತಂತ್ರ / ೧೧

ಗೊಂಡಲ್ಲಿ, ಮಾತುಗಳನ್ನು ಬೆಳೆಸಿ, ನಂತರ ಮುಂದಿನ ಪದ್ಯಕ್ಕೆ ಸಾಗುವು ದಾಗಿತ್ತು. ಇನ್ನೊಂದು ಕ್ರಮದಂತೆ, ಒಂದು ಪಾತ್ರದ ಪದ್ಯದ ಅರ್ಥ ವನ್ನು ಮಾತಾಡುತ್ತಿದ್ದಂತೆ, ಇನ್ನೊಂದು ಪಾತ್ರವು ಮಧ್ಯೆ ಪ್ರಶ್ನೆ, ಪ್ರತಿಕ್ರಿಯೆ ನೀಡಿ ಸಂವಾದವನ್ನು ಬೆಳೆಸುವುದು. ಉದಾ: ಪಂಚವಟಿ- ರಾವಣ-ಮಾರೀಚ ಸಂವಾದ.

ಪೀಠಿಕೆಯನ್ನು ಸಂವಾದ ಮೂಲಕವೂ ಅಭಿವ್ಯಕ್ತಿಸುವ ಕ್ರಮವುಂಟು. ಉದಾ: ದೇವೀಮಹಾತ್ಮೆ ಪ್ರಸಂಗದಲ್ಲಿ ಮಧು-ಕೈಟಭರ ಪ್ರವೇಶದ ಪೀಠಿಕೆ, ಪಂಚವಟಿಯಲ್ಲಿ ರಾಮನ ಪೀಠಿಕೆ- “ನೋಡಿ ನಿರ್ಮಲ ಜಲಸಮೀಪದಿ | ಮಾಡಿಕೊಂಡರು ಪರ್ಣಶಾಲೆಯ" ಎಂಬ ಪದ್ಯಕ್ಕೆ ರಾಮ ಲಕ್ಷ್ಮಣರು ಸಂವಾದ ಮೂಲಕ ಪೀಠಿಕೆ ಹೇಳುವುದು.

ಎತ್ತುಗಡೆ ಅಥವಾ ಸಂದರ್ಭ ಕೊಡುವಿಕೆ ಎಂದರೆ, ಪದ್ಯ-ಅರ್ಥ- ಅನುಕ್ರಮವನ್ನು ವ್ಯವಸ್ಥೆಗೊಳಿಸುವ ತಂತ್ರ. ಯಕ್ಷಗಾನ ಪ್ರದರ್ಶನ ದಲ್ಲಿ ಪ್ರಸಂಗದ ಪದ್ಯಗಳನ್ನು ಭಾಗವತನು ಹಾಡುತ್ತಿದ್ದಂತೆ, ವೇಷಗಳು ಕುಣಿದು, ಅಭಿನಯಿಸಿ ಅನಂತರ ಅರ್ಥವನ್ನು ಹೇಳಿದ ಬಳಿಕ, ಪುನಃ ಭಾಗವತನು ಪದ್ಯವನ್ನು ಹಾಡುವುದು ಪದ್ಧತಿ. ಹೀಗೆ ಸಾಗುವಾಗ, ಒಂದು ಪದ್ಯದಿಂದ ಇನ್ನೊಂದು ಪದ್ಯಕ್ಕೆ ದಾಟಲು ಒಂದು ವ್ಯವಸ್ಥೆ ಬೇಕಷ್ಟೆ? ಅದೇ ಎತ್ತುಗಡೆ ಅಥವಾ ಸಂದರ್ಭ ಕೊಡುವಿಕೆ, ಒಂದು ಪದ್ಯದ ಹಾಡುವಿಕೆ, ಕುಣಿತ, ಮಾತು ಮುಗಿದು ಮುಂದೆ ಸಾಗುವುದಕ್ಕೆ ಇದು 'ಕ್ಯೂವರ್ಡ್' (Cueword). ಇದನ್ನೆ ಟಚ್ಚು' (touch) ಎಂದೂ ಕರೆಯುವುದುಂಟು.

ಈ ಎತ್ತುಗಡೆಯನ್ನು ಮೂರು ರೀತಿಗಳಲ್ಲಿ ನಿರ್ವಹಿಸಬಹುದು. ಪಾತ್ರಧಾರಿಯು ಮುಂದಿನ ತನ್ನ ಪಾತ್ರದ ಪದ್ಯಕ್ಕೆ ತಾನೇ ಸಂದರ್ಭ ವನ್ನು ಕೊಡುವುದು. ಇದಕ್ಕೆ 'ಯಾಕೆಂದರೆ', 'ಕೇಳು' ಮೊದಲಾದ ಮಾಮೂಲು ಶಬ್ದಗಳನ್ನು ಹೇಳುವುದು ಅಥವಾ ಮುಂದಿನ ಪದ್ಯದ ಒಂದೆರಡು ಶಬ್ದಗಳನ್ನು ಹೇಳುವುದು; ಅಥವಾ ಹಾಡುವುದೂ ಉಂಟು. ಒಂದು ಪಾತ್ರದ ಇದಿರು ಪಾತ್ರವು ಎತ್ತುಗಡೆ ಮಾಡಿಕೊಡುವುದು ಇನ್ನೊಂದು ಕ್ರಮ. 'ಹಾಗಾದರೆ ನೀನಾರು?', 'ಏನು ನಿನ್ನ ವಿಕ್ರಮ?', 'ಏಕೆ ಹಾಗೆ ಮಾಡಿದೆ?' ಮೊದಲಾಗಿ ಪ್ರಶ್ನೆ ಕೇಳುವುದರ ಮೂಲಕ ಈ ನಿರ್ವಹಣೆ. ಮೂರನೆಯ ವಿಧಾನದಲ್ಲಿ ಭಾಗವತನು ಒಂದು ಪ್ರಶ್ನೆ ಕೇಳಿ, : : ಪದ್ಯಕ್ಕೆ, ಸಂದರ್ಭವನ್ನು ಒದಗಿಸಬಹುದು. ಹಾಗಾದರೆ