ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮ / ವಾಗರ್ಥ

ಒಳಗಿನ ಕಲಾವಿದತ್ವ- 'ಇವೆರಡೂ' ಹೇತುಗಳೇ, ಅವುಗಳ ಸಂಘಟನ ವಾದಾಗ ಪ್ರಸಂಗದ ಯಥಾವತ್ ಅನುವಾದ ಮಾತ್ರ : ರೂಪುಗೊಳ್ಳು ವುದು ಅಸಂಭವ. ಅಲ್ಲದೆ ಯಕ್ಷಗಾನ ಪ್ರಸಂಗಗಳು ತಿಳಿಸುವ ಆಶಯ ಗಳಾಗಲಿ, ಅಲ್ಲಿನ ಕಪ್ಪು-ಬಿಳುಪಿನ ಪಾತ್ರ ಪ್ರಪಂಚವಾಗಲಿ, ಆಧುನಿಕ ಸಂಸ್ಕಾರದ ಅರ್ಥದಾರಿಗೆ ಇದ್ದಕ್ಕಿದ್ದಂತೆ ಸಮ್ಮತವಾಗುವ ಸಂಭವವಿಲ್ಲ. ಹಾಗಾಗಿ, ಹೊಸ. ಹೊಂದಾಣಿಕೆಗಳ: ಮತ್ತು ಸಂಸ್ಕೃತಿಯ ಹೊಸ ಅರ್ಥವಂತಿಕೆಗಳ ಅಗೆತ-ಬಗೆತಗಳು ಸಾಧ್ಯವಾಗುವುದು ಮತ್ತು ಅಂತಹ ಸಾಧ್ಯತೆಯ ಅಸೀಮ ಅವಕಾಶ ಇರುವುದೇ ತಾಳಮದ್ದಳೆಯ ಜೀವಂತಿಕೆ, ಪ್ರಸಂಗದ ಅಂದರೆ ಈ ವರೆಗೆ ವ್ಯಾಪಕವಾಗಿ ಬಳಕೆಯಲ್ಲಿ ಇರುವಂತೆ ಮುಖ್ಯವಾಗಿ ಪ್ರಾಚೀನ ಕಾವ್ಯ, ಪುರಾಣವಸ್ತು ಆಧರಿತ ಪಾತ್ರ, ಘಟನೆ, ಮೌಲ್ಯಗಳ ಜತೆ ಒಂದು ಸತತವಾದ ಗುದ್ದಾಟ, ಅರ್ಥದಾರಿಯಲ್ಲಿ ಸಾಗುತ್ತಲೆ ಇರಬೇಕಾದುದು ಈ ಕಲೆಯ ರೂಪದಲ್ಲಿ ಇರುವ ಅಂಶ. ಈ ಸೃಷ್ಟಿ ಸ್ವಾತಂತ್ರ್ಯವೇ ಕಲಾವಿದನಿಗೆ ಅವಕಾಶವನ್ನೂ ನೀಡುತ್ತದೆ; ಹೊಣೆಗಾರಿಕೆಯನ್ನೂ ಹೊರಿಸುತ್ತದೆ.
ಹಾಗಾಗಿ, ಈ ಕಲೆಯ ಪ್ರಸ್ತುತತೆ ಅಥವಾ 'ಪ್ರಸ್ತುತೀಕರಣ ಪ್ರಕ್ರಿಯೆ'ಯಲ್ಲಿ.. ಈ ಕಲೆಗಿರುವ ಶೈಲೀಕೃತ ಸ್ವಭಾವ, ಪ್ರಾದೇಶಿಕ ಅಭಿವ್ಯಕ್ತಿ ಸ್ವರೂಪ, ಪುರಾಣದ ಮಿತಿ, ಪ್ರಸಂಗದ ಮಿತಿ, ಪ್ರೇಕ್ಷಕ ನಿರೀಕ್ಷೆಯ ಮಿತಿ- ಇಷ್ಟನ್ನು ಕೂಡ ನ್ಯಾಯವಾಗಿ ಗಣನೆಗೆ ತೆಗೆದುಕೊಳ್ಳ ಬೇಕಾಗುತ್ತದೆ. ಇವುಗಳ ಮೇಲೆ ಕೆಲಸಮಾಡುವ ಹೊರ-ಒಳ ಒತ್ತಡಗಳು ಪ್ರಸ್ತುತೀಕರಣವನ್ನು ರೂಪಿಸುತ್ತವೆ. ಅಂದರೆ ಪ್ರಸ್ತುತತೆ ವಲಯಗಳ ಸೀಮೆಗಳೊಳಗಿಂದ ತುಡಿಯುತ್ತದೆ.

8, 9 ಪ್ರಸ್ತುತತೆಯ ಚಲನೆ -

ಹೊರ ಒತ್ತಡಗಳು- ಅಂದರೆ ಸಾಮಾಜಿಕ, ಸಾಹಿತ್ಯ ಕಲಾಕ್ಷೇತ್ರದಲ್ಲಿ ಆದ ಆವಿಷ್ಕಾರಗಳು.