ಈ ಪುಟವನ್ನು ಪ್ರಕಟಿಸಲಾಗಿದೆ
೩೪ / ವಾಗರ್ಥ
ವರ್ತನೆ ಇವನ್ನೆಲ್ಲ ಧ್ವನಿಸಿ ಭೀಷ್ಮ, ಪಾತ್ರಧಾರಿ (ಮಲ್ಪೆ ಶಂಕರ
ನಾರಾಯಣ ಸಾಮಗ) ಮಾತಾಡಿದುದು ಇನ್ನೊಂದು ಇಂತಹದೇ
ಉದಾಹರಣೆ, ತಾಳಮದ್ದಳೆಯಲ್ಲಿ ಇಂತಹದನ್ನು ದಿನನಿತ್ಯ ಅನುಭವಿಸು
ವವನಿಗೆ ಪೌರಾಣಿಕ ವಸ್ತುವಿನ 'ಪುನಾರಚನೆ'ಗೆ ಸಂಬಂಧಿಸಿದಂತೆ
ಪೌರಾಣಿಕ ಕಾದಂಬರಿ, ನಾಟಕಗಳ ಸಂದರ್ಭದಲ್ಲಿ ಕೇಳಿಬರುವ
ತಥಾಕಥಿತ ಅದ್ಭುತ ನಾವೀನ್ಯ, ಮೌಲ್ಯಶೋಧನೆ, ಸೃಜನಶೀಲತೆ
ಮುಂತಾದ ಮಾತುಗಳೆಲ್ಲ ಬರಡಾಗಿ ಕಾಣುತ್ತವೆ.
ಹೀಗೆ ಪ್ರಸಂಗದ ಪದ್ಯಗಳು ಸ್ವಯಂ ವಿವರಣೆ ಕೊಡುವವುಗಳೆಂದು
ಪರಿಭಾವಿಸದೆ, ಅವುಗಳನ್ನು ಪ್ರೇರಕವಾಗಿ
ಅರ್ಥಧಾರಿಯ ಕೆಲಸ.
ಸ್ವೀಕರಿಸುವುದು
(ನಿಯೋಜಿತ ಶಿವಮೊಗ್ಗ ಜಿಲ್ಲಾ ಜಾನಪದ ಸಮ್ಮೇಳನಕ್ಕಾಗಿ ಬರೆದುದು -
೧೯೯೦)