ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಲೇಖಕನ ಅರಿಕೆ

ಯಕ್ಷಗಾನ ಕಲೆಯ ವಿವಿಧ ವಿಷಯಗಳ ಕುರಿತು ನಾನು ಬೇರೆ ಬೇರೆ ಸಂದರ್ಭಗಳಿಗಾಗಿ ಬರದ ಕೆಲವು ಲೇಖನಗಳು ಇಲ್ಲಿ ಸಂಕಲಿತವಾಗಿವೆ. ಈ ಲೇಖನಗಳನ್ನು ನನ್ನಿಂದ ಬರೆಯಿಸಿದ ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗೆ ನಾನು ಕೃತಜ್ಞನಾಗಿದ್ದೇನೆ.

ಈ ಸಂಗ್ರಹದ ಹೆಚ್ಚಿನ ಲೇಖನಗಳು ಯಕ್ಷಗಾನದ ಅರ್ಥಗಾರಿಕೆಗೆ, ಅರ್ಥಾತ್ ಮಾತುಗಾರಿಕೆಗೆ ಸಂಬಂಧಿಸಿವೆ. ಹೀಗೆ ಮೌಖಿಕ ಕಲೆಯೊಂದರ, ವಾಕ್-ಅರ್ಥಗಳ ವಿಶ್ಲೇಷಣೆಯನ್ನೊಳಗೊಂಡಿವೆ. ಅದಕ್ಕಾಗಿ, ಮಹಾಕವಿ ಕಾಳಿದಾಸನು ತನ್ನ ರಘುವಂಶ ಮಹಾಕಾವ್ಯದ ಮೊದಲ ಶಬ್ದವಾಗಿ ಬಳಸಿ ಅಮರಗೊಳಿಸಿದ 'ವಾಗರ್ಥ ಎಂಬುದನ್ನು ಇದಕ್ಕೆ ಹೆಸರಾಗಿ ಬಳಸಿದ್ದೇನೆ.

ಈ ಸಂಕಲನಕ್ಕೆ ಪ್ರೀತಿಪೂರ್ವಕ, 'ಕೆಳೆನುಡಿ'ಯನ್ನು ಬರೆದಿರುವವರು ನನ್ನ ಬಹುಕಾಲದ ಮಿತ್ರ, ಹಿರಿಯ ಸಾಹಿತಿ, ಜಾನಪದ ತಜ್ಞ ನಮ್ಮ ಸಾಂಸ್ಕೃತಿಕ ಕ್ಷೇತ್ರದ ಓರ್ವ ಅಗ್ರಣಿ ಪ್ರೊ. ಅಮೃತ ಸೋಮೇಶ್ವರ ಅವರು ಶ್ರೀ ಅಮೃತರು ಯಕ್ಷಗಾನ ಕಲೆಯಲ್ಲಿ ಸಂಶೋಧಕರಾಗಿ, ಪ್ರಸಂಗಕರ್ತರಾಗಿ, ವಿಧಾಯಕ ಸಂಘಟಕರಾಗಿ ಬಹುಮೂಲ್ಯವಾದ ಕಾವ್ಯವನ್ನು ಗೈದಿರುವರು. ಅವರ ಮುನ್ನುಡಿ ನನ್ನ ಗ್ರಂಥಕ್ಕೆ ಗೌರವವನ್ನು ತರುವಂತಹುದು. ತಮ್ಮ ಬರಹದಲ್ಲಿ ಅವರು ತಮ್ಮ ಸಹಜ ಗುಣವಾದ ಒಲುಮೆ ಮತ್ತು ಔದಾರ ಗಳನ್ನು ತುಸು ಹೆಚ್ಚಾಗಿಯೆ ತೋರ್ಪಡಿಸಿ ನನ್ನನ್ನು ಋಣಿಯಾಗಿಸಿದ್ದಾರೆ.

ನನ್ನ ಕಲಾ ಸಾಂಸ್ಕೃತಿಕ ಪ್ರವೃತ್ತಿಗೆ, ಪ್ರಚೋದನೆ ಪ್ರೇರಣೆಗಳನ್ನು ನೀಡುತ್ತ ಬಂದಿರುವ ನನ್ನ ಹಲವು ಮಿತ್ರರು, ವಿಶೇಷತಃ ಶ್ರೀ ಶೇಣಿಯವರು ಮತ್ತಿತರ ಸಹಕಲಾವಿದರು, ಕಾಠ್ಯಕ್ರಮಗಳ ಸಂಘಟಕರು, ಯಕ್ಷಗಾನ ಸಂಸ್ಥೆಗಳು ಇವರೆಲ್ಲರನ್ನು ಈ ಸಂದರ್ಭದಲ್ಲಿ ವಂದಿಸುತ್ತೇನೆ.