ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬ / ವಾಗರ್ಥ

ಅನುಭವ, ವಯಸ್ಸು, ಯೋಗ್ಯತೆ, ಅಯೋಗ್ಯತೆಗಳ ಮೊತ್ತವಿದೆ. ಈ ಹಿನ್ನೆಲೆ, ಮುನ್ನೆಲೆ ಮತ್ತು ವ್ಯಕ್ತಿತ್ವಗಳ ಮಿಶ್ರಣ ಘರ್ಷಣಗಳಿಂದ ತಾಳಮದ್ದಳೆಯ ಕಲೆಗಾರಿಕೆ ರೂಪುಗೊಳ್ಳುತ್ತದೆ. ಇದರ ಮೇಲಿಂದಲೇ, ಒಟ್ಟು ಈ ಕಲೆಯ ಮತ್ತು ಪ್ರದರ್ಶನವೊಂದರ ನಾಟಕೀಯ, ಸಾಂಸ್ಕೃತಿಕ ಕ್ರಿಯಾಶೀಲತೆ ರೂಪುಗೊಳ್ಳುತ್ತ ಹೋಗುತ್ತದೆ.

ತಾಳಮದ್ದಳೆಯೆಂಬ ಪ್ರದರ್ಶನಕ್ರಿಯೆ (performance)ಗೆ ಆಧಾರವಾಗಿರುವ ಪ್ರಸಂಗವೆಂಬ ಕಾವ್ಯಕ್ಕೂ, ಪ್ರದರ್ಶನದಲ್ಲಿ ಸೃಷ್ಟಿ ಯಾಗುವ ಅರ್ಥಗಾರಿಕೆ ಎಂಬ ಪಾತ್ರನಿರ್ವಹಣೆಗೂ ಇರುವ ಸಂಬಂಧ ಮತ್ತು ದೂರಗಳು ಬೇರಾವುದೇ ಕಲಾಪ್ರಕಾರಗಳಲ್ಲಿ ಇರುವ ಸಾಹಿತ್ಯ ಮತ್ತು ಅದರ ರಂಗರೂಪಗಳಿಗಿಂತ ಬಹಳ ಭಿನ್ನವಾದದ್ದು. ಈ ಕಲೆಯ ಪ್ರದರ್ಶನವನ್ನು ಕಾಣದವರು, ಕಲ್ಪಿಸಲಾಗದಂತಹವು. ಪ್ರಸಂಗದ ಪದ್ಯಗಳು ತೀರ ಸರಳವಾದ, ಮಿತವಾದ ಆಶಯವುಳ್ಳ ಮಧ್ಯಯುಗೀನ ಭಕ್ತಿಕಾವ್ಯಗಳ ಪಡಿಯಚ್ಚುಗಳು. ಆದರೆ, ಅರ್ಥಗಾರಿಕೆಯು, ಮೂಲ ಪಠ್ಯದ ಈ ಗಂಭೀರವಾದ ಮಿತಿಯನ್ನು ಮೀರಿ, ಬೆಳೆದಿರುವ ಎತ್ತರವೂ, ಆಳವೂ ಆಶ್ಚರ್ಯಕರವಾಗಿದೆ. ಒಂದು ಪ್ರಸಂಗದ ಒಂದು ಸನ್ನಿವೇಶಕ್ಕೆ ಅಥವಾ ಒಂದು ಪದ್ಯಕ್ಕೆ ಹತ್ತು ಅರ್ಥದಾರಿಗಳು ನೀಡುವ ಅರ್ಥವು ಹತ್ತು ವಿಧವಾದದ್ದು. ಅಷ್ಟೇ ಅಲ್ಲ, ಒಬ್ಬನೇ ಅರ್ಥದಾರಿ ಹೇಳುವ ಅರ್ಥವೂ ಹತ್ತು ಬಗೆಯಾದದ್ದು. ಹೀಗೆ, ತಾಳಮದ್ದಳೆಯ ಕ್ರಿಯಾತ್ಮ ಕತೆಯ ಅಸಾಧಾರಣ ವ್ಯಾಪ್ತಿಯು ಅದರ ರೂಪದಲ್ಲಿ ಅಂತರ್ಗತ ವಾಗಿದೆ. ಮತ್ತು ಇಂತಹ ಆಂತರಿಕ ಶಕ್ತಿಯು ಕಲಾವಿದನ ಮುಂದೆ ಸಾಧ್ಯತೆಗಳನ್ನೂ, ಪಂಥಾಹ್ವಾನಗಳನ್ನೂ, ಸಮಸ್ಯೆಗಳನ್ನೂ ಒಡ್ಡುತ್ತದೆ.

ಗೇಯಪಠ್ಯದ ಅರ್ಥಾತ್ ಹಾಡುಗಬ್ಬದ ನೈಜ ಸ್ವರೂಪವು ಗಾನ ಮೂಲಕವೇ ಸಾರ್ಥಕವಾಗುವಂತಹದಷ್ಟೆ? ಹೀಗೆ, ತಾಳಮದ್ದಳೆಯು ಮಾತುಗಾರಿಕೆಗೆ ಆಧಾರವಾದ ಹಾಡು, ಭಾಗವತನು ಅದನ್ನು ಹಾಡುವ ರೀತಿ- ಎಂದರೆ, ಅದರ ತಾಳ, ರಾಗ, ಭಾವಗಳನ್ನು ಹೊಂದಿ ಅಕ್ಷರ ರೂಪದಿಂದ ಗಾನರೂಪಕ್ಕೆ ಬರುವಾಗಲೇ ಹೊಸ ಆಯಾಮ ಗಳಿಸು ತ್ತದೆ. ಈ ವಿಷಯದಲ್ಲಿ ಸಂಪ್ರದಾಯವೆಂಬುದು ಇದ್ದರೂ, ಹಾಡು