ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೪ / ವಾಗರ್ಥ

ಅಭಿನಯಕಾರ ಎಂಬುದರಲ್ಲಿ ಅರ್ಥದಾರಿಯೂ ಸೇರಿಕೊಳ್ಳುತ್ತಾನೆ. ಅಭಿನಯವೆಂದರೆ, ಪ್ರೇಕ್ಷಕನ ಕಡೆಗೆ ಒಯ್ಯುವುದು- stage commu- nication, ಅದಕ್ಕೆ ಸಂಬಂಧಿಸಿದ ಎಲ್ಲವೂ ಅಭಿನಯದ ಅಂಗವೇ. ಅಭಿನಯವು ಆಂಗಿಕ, ಆಹಾರ, ವಾಚಿಕ, ಸಾತ್ವಿಕ ಎಂದು ನಾಲ್ಕು ಬಗೆ ತಾಳಮದ್ದಳೆಯಲ್ಲಿ ಆಹಾರ ಅಂದರೆ ವೇಷಭೂಷಣ ಇಲ್ಲ. ಆಂಗಿಕ ಅಭಿನಯ ಈ ರಂಗಕ್ಕೆ ವಿಶಿಷ್ಟವಾಗಿ ಸ್ವಲ್ಪ ಇದೆ. ಸಾತ್ವಿಕವೂ ಅಲ್ಪಪ್ರಮಾಣದಲ್ಲಿದೆ. ವಾಚಿಕವೇ ಮುಖ್ಯವಾಗಿದೆ. ಆಧುನಿಕ ದೃಷ್ಟಿ ಯಿಂದ ಹೇಳುವುದಾದರೆ ಅರ್ಥದಾರಿ ಎಂಬವನು ಏಕಕಾಲದಲ್ಲಿ ನಟ, ನಾಟಕಕಾರ, ನಿರ್ದೇಶಕ, ನಿರೂಪಕ ಎಲ್ಲವೂ ಆಗಿ, ಇದೆಲ್ಲವೂ ಆಗಿರುವ ಉಳಿದ ಅರ್ಥದಾರಿಗಳೊಂದಿಗೂ, ಹಿಮ್ಮೇಳದೊಂದಿಗೂ ಕೂಡಿ, ಪ್ರದರ್ಶನವನ್ನು ರೂಪಿಸುತ್ತ ಹೋಗುವ ವಿಶಿಷ್ಟ ಪ್ರದರ್ಶನಕಾರ. ರಂಗಭೂಮಿಯ ಹಲವು ಜವಾಬ್ದಾರಿಗಳುಳ್ಳ performance ಅವನದು. ಯಕ್ಷಗಾನದ್ದೆ ದೃಷ್ಟಿಯಿಂದ ಅವನು ಅರ್ಥದಾರಿ ಅಷ್ಟೆ, ಆ ಎಲ್ಲವೂ ಅದರಲ್ಲಿ ಬಂತು.

ಲಿಖಿತ ನಾಟಕದ ನಟನ ನಟನಾಕಾರ್ಯಕ್ಕೂ ಅವನ ವ್ಯಕ್ತಿತ್ವಕ್ಕೂ ಇರುವ, ಇರಬೇಕಾದ ಸಂಬಂಧ ಏನು? ಈ ಸಂಬಂಧದಿಂದಾಗಿ ಪಾತ್ರಾಭಿನಯ ಅಥವಾ ಪಾತ್ರಸೃಷ್ಟಿಯ ಮೇಲಾಗುವ ಪರಿಣಾಮ ಗಳೇನು- ಎಂಬ ವಿಚಾರಗಳಲ್ಲಿ ತುದಿಮೊದಲಿಲ್ಲದ ವಾದಗಳೂ, ಅಭಿಪ್ರಾಯ ವೈವಿಧ್ಯವೂ, ಸಿದ್ಧಾಂತ ವಿಸ್ತಾರವೂ ಇವೆ. ನಮ್ಮಲ್ಲಿ ಸಾಮಾನ್ಯವಾಗಿ ಪ್ರಚಲಿತವಾಗಿರುವ ರಸ, ಭಾವ, ಪಾತ್ರಗೌರವ, ತಾದಾತ್ಮ್ಯ, ತಲ್ಲೀನತೆ ಎಂಬ ಪೂರ್ವನಿರ್ಧಾರಿತ ಅಭಿಪ್ರಾಯಗಳು, ತದನುಸಾರಿ ಪ್ರತಿಕ್ರಿಯೆಗಳ ಆಚೆ ನೋಡಿ, ಅರ್ಥಗಾರಿಕೆಯನ್ನು ವಿವೇಚಿಸುವ ಸಾಧ್ಯತೆಗಳನ್ನು ನಾವು ಪರಿಶೀಲಿಸಬೇಕಾಗಿದೆ.

ತಾಳಮದ್ದಳೆಯ ಅಭಿನಯವಾದ ಮಾತುಗಾರಿಕೆ ಅಂದರೆ 'ಅರ್ಥ' ವೆಂಬುದು, ರಂಗದಲ್ಲೆ ಸೃಷ್ಟಿಯಾಗುವ ಪಠ್ಯ (Text) ಆದುದರಿಂದಲೂ ಅದರ ಸೃಷ್ಟಿಯಲ್ಲಿ ಕಾಲ, ದೇಶ, ಇತರ ಕಲಾವಿದರು- ಮುಂತಾದ ಸಂದರ್ಭ (context)ವು ಬಹುಮುಖ್ಯವಾದ ಚಾಲಕಶಕ್ತಿಯಾದುದ ರಿಂದಲೂ, ಅರ್ಥಗಾರಿಕೆ ಎಂಬುದು ಬಹಳಷ್ಟು ಬೆಳವಣಿಗೆ ಸಾಧಿಸಿರು ವುದರಿಂದಲೂ, ಇದರಲ್ಲಿ ನಟನ ವ್ಯಕ್ತಿತ್ವ ಮತ್ತು ಪಾತ್ರಸೃಷ್ಟಿ ಗಳೊಳಗಿನ ಸಂಬಂಧದ ಸೂಕ್ಷ್ಮಗಳು ವಿಸ್ತೃತ ಅಧ್ಯಯನಕ್ಕೆ ಪ್ರತ್ಯೇಕ