೬೪ / ವಾಗರ್ಥ
ನೀನೆಲ್ಲೋ ಪಾಠ ಹೇಳುವವನಂತೆ ಮಾತಾಡುತ್ತಿರುವೆ?- ಅಧ್ಯಾಪಕನಿಗೆ; ವೇಷಧಾರಿಗಳ ಕ್ರಮವೇ ಹೀಗೆ- ವೇಷಧಾರಿಗೆ). ಆದರೆ ಜನರಲ್ಲಿ ತಮ್ಮ ಬಗೆಗೆ ಇರುವ ಗೌರವವನ್ನು ಬೆಳೆಸಿ, ಇದಿರಾಳಿಯ ಬಗೆಗೆ ತಾತ್ಸಾರ ಬರುವಂತೆ ಮಾಡುವ ಅಥವಾ ಅವನ ಪ್ರಶ್ನೆಗಳನ್ನು ನಿವಾರಿಸುವ, ಇನ್ನು ಯಾವಯಾವುದೋ ವಿಷಯಗಳನ್ನು, ಪ್ರಕರಣಗಳನ್ನು ಪ್ರಸ್ತಾವಿಸು ವುದು, ಒಬ್ಬರನ್ನೊಬ್ಬರು ಹೊಗಳುತ್ತ, ಉಳಿದವರನ್ನು ನಿಂದಿಸುತ್ತ ಮಾತು ಬೆಳೆಸುವುದು ಮುಂತಾದುವುಗಳು. ಈ ರಂಗದ ಪಿಡುಗು ಗಳೆಂಬಷ್ಟು ಬೆಳೆದಿರುವುದೂ ಹಲವು ಸಲ ಕಂಡುಬರುತ್ತದೆ. ಈ ರಂಗಕ್ಕೆ ದೊಡ್ಡ ಕೊಡುಗೆಗಳನ್ನಿತ್ತ ಕಲಾವಿದರೇ ಈ ಪ್ರವೃತ್ತಿಗಳಿಗೂ ಆಚಾರ ಪುರುಷರಾಗಿರುವುದು ಖೇದಕರವಾಗಿದೆ.
ತಾತ್ವಿಕವಾದ ಮಟ್ಟದಲ್ಲಿ ಪಾತ್ರಧಾರಿಯ ಧೋರಣೆಗಳು, ಅರ್ಥಗಾರಿಕೆಯಲ್ಲಿ ಕಾಣಿಸಿಕೊಳ್ಳುವ ಉದಾಹರಣೆಗಳು ವಿಪುಲವಾಗಿವೆ. ದಿ| ನಾರಾಯಣ ಕಿಲ್ಲೆಯವರೂ, ಮಲ್ಪೆ ಶಂಕರನಾರಾಯಣ ಸಾಮಗರೂ ಪೌರಾಣಿಕ ಪಾತ್ರಗಳ ಮಾತಿನಲ್ಲಿ ಗಾಂಧೀವಾದ, ಸ್ವದೇಶೀ, ಸ್ವಾತಂತ್ರಾಭಿಮಾನ ಮೊದಲಾದುವನ್ನು ಧ್ವನಿಸಿದ್ದು, ರಸಿಕರಿಗೆ ಪರಿಚಿತ ವಾದದ್ದು. ದಿ| ದೇರಾಜೆ ಅವರ ಅರ್ಥಗಾರಿಕೆಯಲ್ಲಿ ಅವರ ವ್ಯಕ್ತಿತ್ವವೇ ಪಾತ್ರವಾಗಿ, ಪಾತ್ರಗಳಿಗೆ ಪ್ರತಿಭೆಯ, ಚುಟುಕು ಚುರುಕು ಮಾತಿಗೆ ನಾಟಕೀಯ ಸ್ವಭಾವದ ಚಿತ್ರ ಬರುತ್ತಿದ್ದುದೂ ಪ್ರಸಿದ್ಧವಿದೆ.
ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು ಪುರಾಣಗಳ ಘಟನೆಗಳು, ಪಾತ್ರಗಳ ನಡವಳಿಕೆಗಳು, ಸಂದರ್ಭಗಳ ಬಗೆಗೆ ತಮ್ಮದೇ ಆದ, ಅಸಾಧಾರಣವೂ, ಆಶ್ಚರ್ಯಕರ ವಿಸ್ತಾರವುಳ್ಳದ್ದೂ ಆದ ನೋಟಗಳನ್ನು ನೀಡಿ, ಪೌರಾಣಿಕ ಪಾತ್ರಗಳನ್ನು ತೀರ ಆಧುನಿಕವಾದ ಮನಸ್ಸಿಗೆ ಸಂಗತ ವಾಗುವಂತೆ ಮಾಡಿರುವುದಂತೂ ಅರ್ಥಗಾರಿಕೆಯ ಕ್ಷೇತ್ರದ ಅನುಪಮ ಸಿದ್ಧಿಯಾಗಿ ಪ್ರಖ್ಯಾತವಾಗಿದೆ. ಇಲ್ಲಿ ಶೇಣಿಯವರು- ಪಾತ್ರವನ್ನು ಒಳಗಿಂದ ಅಭಿವ್ಯಕ್ತಿಸದೆ, ಪಾತ್ರದ ನಡವಳಿಕೆಯನ್ನು ಸ್ವತಂತ್ರವಾಗಿ ಚಿಂತಿಸಿ, ಊಹಿಸಿ, ಹೇಗಿರಬೇಕೆಂದು ಕಲ್ಪಿಸಿ ಚಿತ್ರಿಸಿದರು. ಅರ್ಥಾತ್ ಶೇಣಿಯವರ ವ್ಯಕ್ತಿತ್ವ, ಪಾತ್ರಗಳಿಗೆ ಬಂದುದೇ ಹೊರತು, ಪಾತ್ರದ ವ್ಯಕ್ತಿತ್ವವು ಕಲಾವಿದನಿಗೆ ಅಳವಟ್ಟುದ್ದಲ್ಲ. ಅವರ ಅರ್ಥಗಾರಿಕೆಯಲ್ಲಿ