ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ನಟ-ವ್ಯಕ್ತಿ ಸಂಬಂಧ, ಪಾತ್ರ ಸೃಷ್ಟಿ / ೭೧

ಅರ್ಥದಾರಿ ತನ್ನ ನಿಲುವು ಸಡಿಲಿಸಿ, ಭಾಗವತನ ಅಭಿಪ್ರಾಯಕ್ಕೆ ಹೊಂದಿ ಕೊಳ್ಳಬೇಕು. ಹಾಗೆಯೇ ಭಾಗವತನು ಬಿಟ್ಟುಬಿಡಬೇಕೆಂದೆಣಿಸಿದ ಒಂದು ಹಾಡನ್ನು ಅರ್ಥದಾರಿ ಎತ್ತುಗಡೆ ಮಾಡಿದರೆ, ಭಾಗವತನು ಅದಕ್ಕೆ ಹೊಂದಿ ಹಾಡಬೇಕು. ಇಲ್ಲಿ ಹಿಮ್ಮೇಳ-ಮುಮ್ಮೇಳಗಳ ಕಲಾವಿದ ರೊಳಗಿನ ಸಂಬಂಧ ಮಹತ್ವ ಪಡೆಯುತ್ತದೆ.

೧೩

ಅರ್ಥದಾರಿಯ ಸ್ವಂತ ನಂಬುಗೆ ಮತ್ತು ಪಾತ್ರ ಸನ್ನಿವೇಶಗಳಲ್ಲಿ ವಿರೋಧವಿರುವ ಸಂದರ್ಭಗಳು ಹಲವಿವೆಯಷ್ಟೆ, ಇಂತಹ ಸಂದರ್ಭ ದಲ್ಲಿ ಅವುಗಳನ್ನು ಸಮರ್ಥಿಸುವುದರಲ್ಲಿ ಕಲಾವಿದನಿಗೆ ಒಂದು ವಿಚಿತ್ರ ಆನಂದವಿರುತ್ತದೆ. ಜಾತಿ ವ್ಯವಸ್ಥೆ, ರಾಜನೈತಿಕ ದುರಾಚಾರ- ಇಂತಹವು ಗಳನ್ನು ಒಂದು ಪಾತ್ರ ಸಮರ್ಥಿಸಬೇಕಾಗಿ ಬಂದಾಗ, ಸಂವೇದನಾಶೀಲ ನಾದ ಅರ್ಥದಾರಿಯ ಅರ್ಥಗಾರಿಕೆ ಸೂಕ್ಷ್ಮವಾದ ಮಟ್ಟದಲ್ಲಿ, ಆ ಸಮರ್ಥನೆ ಎಂಬುದು ತನ್ನದೇ ಪಾತ್ರದ ಲೇವಡಿ ಕೂಡ ಆಗಿರುವು ದುಂಟು. (ಉದಾ : ಶಲ್ಯನು ಕರ್ಣನ ಜಾತಿಯನ್ನು ದುರ್ಯೋಧನನಲ್ಲಿ ಹಳಿಯುವ ಸಂದರ್ಭ).

ಅರ್ಥದಾರಿಯು ಅರ್ಥದ ವಾಕ್ಯಗಳನ್ನು ಮಾತ್ರವಲ್ಲ, ಅದರ ಏರಿಳಿತ, ಸ್ವರಭಾರ, ಧ್ವನಿತ ವಾಕ್ಯರೂಪಗಳನ್ನು ರಚಿಸುತ್ತಾನೆ. ಅಂದರೆ, ತನಗೆ ತಾನೇ ನಿರ್ದೇಶಕನೂ ಆಗಿ ಕೆಲಸಮಾಡುತ್ತಾನೆ. ಇಷ್ಟೇ ಅಲ್ಲ; ಕೆಲವು ಬಾರಿ ಸಹಕಲಾವಿದನಿಗೂ ನಿರ್ದೇಶಕನಾಗುತ್ತಾನೆ. ಏಕೆಂದರೆ, ಕಲಾವಿದನ ಪ್ರತಿಕ್ರಿಯೆ, ಸಹಕಲಾವಿದನ ಮಾತು, ಆ ಮಾತಿನ ರೀತಿ ಗಳನ್ನು ಹೊಂದಿಕೊಂಡಿದೆ. ಸಂವಾದವೆಂಬುದು, ಅರ್ಥಗಾರಿಕೆಯಲ್ಲಿ ಒಂದು ಅರ್ಥದಲ್ಲಿ ಪೂರ್ಣತಃ ಪರಾಧೀನವೇ.

ಅಷ್ಟೇ ಅಲ್ಲ, ಪಾತ್ರಚಿತ್ರಣವೂ ಪರಾಧೀನವೇ ಒಂದು ಪಾತ್ರದ ದಿಕ್ಕುದೆಸೆ ತಾನು ಎಣಿಸಿದ್ದಕ್ಕಿಂತ ತೀರ ಭಿನ್ನವಾಗಿ ರೂಪುಗೊಳ್ಳುವಂತೆ ಇನ್ನೊಬ್ಬನು ಪ್ರತಿಕ್ರಿಯಿಸಬಹುದು. ಆಗ ಇವನು ಹೊಂದಿಕೊಳ್ಳಲೇ ಬೇಕು. (ಉದಾ: ವಾಲಿವಧೆ : ವಾಲಿಯು ಸಮುದ್ರಮಥನ ವೃತ್ತಾಂತ ವನ್ನು ಸ್ಪರ್ಶಿಸದೆ, ವಾಲಿಯ ತಪ್ಪೊಪ್ಪಿಗೆ- ನನ್ನ ದೃಷ್ಟಿಯಾಗಿರಬಹುದು. ರಾಮನ ಅರ್ಥದಾರಿ ಅದನ್ನು ಪ್ರಸ್ತಾವಿಸಿ, ಇದು ನನ್ನ ಚಿತ್ರವನ್ನು