ಸಂದೇಶ-ಸ್ಪಂದನ
ಸದ್ಭಾವದುಡುಗೊರೆ
ಜಬ್ಬಾರ್ ಸಮೋ}
ಕಾವ್ಯ, ದರ್ಶನ, ಪುರಾಣ ಸಂಬಂಧದ ಜಿಜ್ಞಾಸೆ, ಪ್ರಶ್ನೆ, ಸಂದೇಹಗಳಿಗೆ, ಸಮರ್ಪಕ,
ಸಮಾಧಾನಕರ ವಿವರಣೆಗಳನ್ನು ನೀಡಬಲ್ಲ, ಅಧಿಕ ವಾಕ್ಯಗಳಿಗಿಂತ, ಘನ 'ವಾಗರ್ಥ'
ಧ್ವನಿಸುವ ಮಿತ ಪದಗಳಿಂದ ಬಹು ಸೊಗಸಿನ ವಿವಿಧ ವಿಷಯಗಳ ಅರ್ಥ,
ಲೇಖನಗಳನ್ನು ಬರೆಯಬಲ್ಲ ಡಾ. ಜೋಶಿಯವರಿಗೆ ಮೈಸೂರಿನಲ್ಲಿ 'ಜೋಶಿ ವಾಗರ್ಥ
ವೈಭವ' ಎಂಬ ಹೆಸರಿನಲ್ಲಿ ಅಭಿನಂದನೆ ನಡೆಯುತ್ತಿರುವುದು ಬಹು ಸಂತೋಷದ
ವಿಷಯ.
ಯಕ್ಷಗಾನದ ಬಹುರೂಪಿ ಮಜಲುಗಳ ಅನುಭವದಿಂದ ಮಾಗಿದ ಕಲಾ
ಮಾಹಿತಿಕೋಶವಾಗಿ, ಅಧಿಕೃತ ಸಂಪನ್ಮೂಲವಾಗಿರುವ, ಉಪನ್ಯಾಸ ಪ್ರವೃತ್ತಿಯ
ಮುಂದುವರಿಕೆಯಾಗಿ ಪರಿಪಕ್ವ ಬರೆಹ ಸಾಮರ್ಥ್ಯದ ಜೀವಂತ ದೃಷ್ಟಾಂತವಾಗಿ
ಮೆಚ್ಚುಗೆ ಪಡೆಯು, ಲವಲವಿಕೆ, ಜೀವನಸ್ಪೂರ್ತಿ, ಮಕ್ಕಳ ಮನಸಿನ ಚೇತೋಹಾರಿ
ಲಘುವೆನಿಸದ ಸರಳ ಜೀವನಶೈಲಿಯ, ನನ್ನ ಗೆಳೆಯರಂತಹ ಹಿರಿಯ ವಿದ್ವಾಂಸ,
ಮಾರ್ಗನಿರೂಪಕ ಡಾ. ಎಂ. ಪ್ರಭಾಕರ ಜೋಶಿಯವರನ್ನು ಕೃತಿಯಾಗಿಸುವುದು ಈ
ನಾಡಿನ ಮೇಧಾವೀ, ಬಹುಶ್ರುತ ಪಂಡಿತರೊಬ್ಬರಿಗೆ ಸಲ್ಲುವ ಸದ್ಭಾವದುಡುಗೊರೆಯೇ
ಆಗಿದೆ. ಶ್ರೀ ಜೋಶಿಯವರ ವಾಗರ್ಥ ಕಸುವಿಗೊಂದು ಸಾರ್ಥಕ ಬೆಂಬಲವೂ
ಹೌದು. ಈ ಮಾಹಿತಿ ಕಣಜ ವಯಸ್ಸಿನಲ್ಲೂ ಸಾಧನೆಯಿಂದಲೂ 'ಶತಮಾನ'ವನ್ನು
ಅನುಭವಿಸಲಿ ಎಂದು ಹಾರೈಸುತ್ತೇನೆ.
ಉತ್ತರೋತ್ತರ ಗೌರವಗಳಿಗೆ ಪಾತ್ರರಾಗಲಿ
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಸಿ.
ಡಾ. ಜೋಶಿ 'ವಾಗರ್ಥ ಗೌರವ' ಕಾರ್ಯಕ್ರಮದ ಆಮಂತ್ರಣ ತಲುಪಿತು.
ಕೃತಜ್ಞತೆಗಳು. ಅತ್ಯವಶ್ಯವಾಗಿ ಮಾಡಬೇಕಾಗಿದ್ದ ಅಭಿನಂದನೆಯನ್ನು ಮಾಡುತ್ತಾ ಇದ್ದೀರಿ. ಇದೊಂದು ಅತೀವ ಸಂತೋಷದ ವಿಚಾರ. ಈ ಸಮಾರಂಭವು ಯಶಸ್ವಿಯಾಗಲಿ. ಗೆಳೆಯ ಜೋಶಿಯವರು ಉತ್ತರೋತ್ತರ ಗೌರವಗಳಿಗೆ ಪಾತ್ರರಾಗಲಿ.
ವಾಗರ್ಥ ಗೌರವ / 60