ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಸಂಚಯವು ಅಳತೆ ಮೀರಲು ಇಂಥ ವರಗಳು ನೆರವಾದವು. ಕೇವಲ ಪತ್ನಿಯ ಇಚ್ಛೆಯನುಸಾರ ಸೀತೆಯನ್ನು ತನ್ನ ಜೊತೆಗೆ ಕಾಡಿಗೆ ಕೊಂಡೊಯ್ಯಲು ರಾಮನು ಸಮ್ಮತಿಸಿಲ್ಲ. ಕಥೆಯ ದೃಷ್ಟಿಯಿಂದ ಅವಳು ಕಾಡಿಗೆ ರಾಮನ ಜೊತೆ ಬರುವುದು ಅನಿವಾರ್ಯವಾಗಿತ್ತು. ಸ್ತ್ರೀಯ ಅಪಹರಣವು ಕಾಳಗಕ್ಕೆ ಒಂದು ಮಹತ್ತ್ವದ ಕಾರಣವಾಗುವುದರಿಂದ, ಸೀತೆಯ ವನವಾಸವು ಅನುಕೂಲಕ್ಕಾಯಿತು. ರಾಮಾಯಣದ ಕೃತಿಯಲ್ಲಿಯ ವಾಲ್ಮೀಕಿಯ ಕಥಾರಚನಾಚಾತುರ್ಯವೂ ಇದರಿಂದ ತಿಳಿದುಬರುತ್ತದೆ. ಈಶ್ವರನಿಂದಲೂ ದೊರೆತ ಒಂದು ವರದಿಂದ ರಾವಣನ ಬಲವು ವರ್ಧಿಸಿತು. ಮೇಘನಾದನನ್ನು ವರ್ಧಿಸುವುದು ಲಕ್ಷ್ಮಣನಿಗೆ ಸುಲಭವಾಗಬೇಕೆಂದು, ಅದೇ ರೀತಿಯ ವರವನ್ನು ಮೇಘನಾದನಿಗೆ ಕೊಡಲಾಗಿದೆ. ಒಂದೇ ವಿಧದ ಪರಿಣಾಮವನ್ನು ರೂಪಿಸುವ ವರ ಹಾಗೂ ಶಾಪಗಳನ್ನು ಅದೇ ಬ್ರಹ್ಮನಿಂದ ಪಡೆದ ವ್ಯಕ್ತಿ ಎಂದರೆ ಕುಂಭಕರ್ಣ; ಕುಂಭಕರ್ಣನನ್ನು ಸಂಪೂರ್ಣವಾಗಿ ನಿರ್ಬಲಗೊಳಿಸುವ ಉದ್ದೇಶದಿಂದಲೇ ಈ ವರ ಮತ್ತು ಶಾಪವನ್ನು ಯೋಜಿಸಲಾಗಿದೆ. ವರಗಳನ್ನು ಪಡೆದ ರಾಕ್ಷಸಕುಲದವರ ವಿನಾಶದ ಮೂಲವು ಈ ವರಗಳಲ್ಲಿಯೇ ಹುದುಗಿದೆ.

ಹನುಮಂತನಿಗೆ ದೊರೆತ ವರಗಳು

ಹನುಮಂತನು ಹುಟ್ಟಿನಿಂದಲೂ ಅತಿಬಲಶಾಲಿ; ಹುಟ್ಟಿದ ಕ್ಷಣವೇ ಸೂರ್ಯನನ್ನು ನುಂಗಲು ಧಾವಿಸಿದವನು; ಇವನಿಂದ ಮುಂದೆ ನಡೆಯಬೇಕಾದ ಕಾರ್ಯಗಳಿಗೆ ಇದಿಷ್ಟೇ ಬಲವು ಸಾಲದೆಂದು ಬ್ರಹ್ಮನಿಗೆ ಅನ್ನಿಸಿತು; ಬ್ರಹ್ಮದೇವನು ಅಷ್ಟದೇವತೆಗಳ ವರಗಳಿಂದ ಆತನನ್ನು ಇನ್ನಷ್ಟು ಬಲಿಷ್ಠನನ್ನಾಗಿ ಮಾಡಲು ಯತ್ನಿಸಿದಂತಿದೆ. ಒಂದೇ ಸಮಯದಲ್ಲಿ ಎಂಟು ಬೇರೆ ಬೇರೆ ವರಗಳನ್ನು ಪಡೆದ ರಾಮಾಯಣದಲ್ಲಿಯ ವ್ಯಕ್ತಿ ಎಂದರೆ ಹನುಮಂತನಾಗಿದ್ದಾನೆ. ರಾಮನು ಕೈಕೊಂಡ ದಿಗ್ವಿಜಯದಲ್ಲಿ ಹನುಮಂತನ ಪಾಲು ದೊಡ್ಡದು. ಸೀತೆಯನ್ನು ಶೋಧಿಸುವ ನಿಮಿತ್ತವಾಗಿ, ಲಂಕೆಯನ್ನು ನಿರೀಕ್ಷಿಸಿ ಇಟ್ಟಿರಬೇಕೆಂಬ ಉದ್ದೇಶವು, ಸಮುದ್ರವನ್ನು ಉಲ್ಲಂಘಿಸುವುದರ ಹಿಂದೆ ಇತ್ತು. ಅದಕ್ಕೆ ತಕ್ಕ ಅನುಕೂಲತೆಗಳು ಉಂಟಾಗಬೇಕೆಂದು ಈ ವರಗಳನ್ನು ಕೊಡಲಾಗಿವೆ. ಇಷ್ಟೊಂದು ವರಗಳನ್ನು ಏಕಕಾಲಕ್ಕೆ ದಯಪಾಲಿಸಲು ಯೋಗ್ಯಕಾರಣವಿರಬೇಕೆಂದು, ಇಂದ್ರನೊಡನೆ ಹನುಮಂತನ ಸಂಗ್ರಾಮ, ವಾಯುವನ್ನು ನಿರೋಧಿಸಿದ್ದು, ದೇವತೆಗಳಿಂದ ವಾಯುವಿನ ಪ್ರಾರ್ಥನೆ- ಈ ಬಗೆಯ ಹಿನ್ನೆಲೆಯನ್ನು ನಿರ್ಮಿಸುವ ವಾಲ್ಮೀಕಿಯ