ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪಾದಪಿ ವರಾದಪಿ!

೮೫

          ಯಾ ನಾಪಶ್ಯಶ್ಚಂದ್ರಮಾ ನೈವ ಸೂರ್ಯೋ ರಾಮಾಃ ಕಶ್ಚಿತ್ತಾಃ ತಸ್ಮಿನ್ನರೇಂದ್ರೇ |
          ಮಹಾವನಂ ಗಚ್ಛತಿ ಕೌರವೇಂದ್ರೇ ಶೋಕೇನಾರ್ತಾ ರಾಜಮಾರ್ಗ೦ ಪ್ರಪೇದುಃ||

ಪೂರ್ವದಲ್ಲಿ ಸ್ತ್ರೀಯರನ್ನು ಚಂದ್ರನಾಗಲೀ, ಸೂರ್ಯನಾಗಲೀ ಕಂಡಿಲ್ಲವೋ ಅಂಥವರು ಶೋಕಾರ್ಥರಾಗಿ ವನಕ್ಕೆ ಹೊರಟ ಕೌರವಶ್ರೇಷ್ಠರನ್ನು ಅನುಸರಿಸಿ ರಾಜಬೀದಿಯಲ್ಲಿ ನಡೆದಿದ್ದಾರೆ.೫೯ ಈ ರೀತಿ ಆಶ್ರಮಪರ್ವದಲ್ಲಿ ಕೊಡಲಾಗಿದೆ. ಮೇಲಿನ ವರ್ಣನೆಯು ಕೇವಲ ಅರಸರ ಸ್ತ್ರೀಯರ ಬಗ್ಗೆ ಇದೆ. ಈ ಉದಾಹರಣೆಯಿಂದ ರಾಮಾಯಣ-ಮಹಾಭಾರತ ಕಾಲದ ಸ್ತ್ರೀಯರು ಪರಪುರುಷರ ಕಣ್ಣಿಗೆ ಬೀಳುತ್ತಿರಲಿಲ್ಲ ಎಂದು ತೀರ್ಮಾನಿಸುವದು ಸರಿಯಲ್ಲ. ಅರಸುಮನೆತನದ ನಾರಿಯರು ಸರ್ವಸಾಮಾನ್ಯರ ಕಣ್ಣಿಗೆ ಬೀಳುವದು ದುಲರ್ಭವಿತ್ತೆಂದು ಅನ್ನಬಹುದು. ಪ್ರಾಚೀನ ಸಾಹಿತ್ಯದಲ್ಲಿ ಪತಿವ್ರತೆಯರಿಗೆ 'ಅಸೂರ್ಯಪಶ್ಯಾ' ಎಂಬ ವಿಶೇಷಣವಿರುತ್ತಿತ್ತು.

ಪತಿಯ ಆಜ್ಞೆಯಿಲ್ಲದೇ ಮನೆಯಾಚೆ ಹೋಗುವದು; ಅವಗುಂಠನ ವಸ್ತ್ರವಿರದೇ ಹೋಗುವುದು; ತ್ವರೆಯ ನಡಿಗೆ; ವ್ಯಾಪಾರಸ್ಥ, ಸನ್ಯಾಸಿ, ವೃದ್ಧ ಹಾಗೂ ವೈದ್ಯ ಇವರ ಹೊರತಾಗಿ ಪುರುಷರೊಡನೆ ಸಲ್ಲಾಪ: ತೊಡೆ, ಕೆಳಹೊಟ್ಟೆ ಸ್ತನಗಳ ಪ್ರದರ್ಶನ; ಗಟ್ಟಿಯಾಗಿ ನಗುವದು; ಧೂರ್ತ, ಮಾಟಗಾರ್ತಿಯರು ಹಾಗೂ ದುಃಶೀಲ ಸ್ತ್ರೀಯರ ಸಂಪರ್ಕ ಮೊದಲಾದವು ಗೃಹಿಣಿಗೆ ನಿಷೇಧಿಸಲ್ಪಟ್ಟಿದ್ದವೆಂದು ಯಾಜ್ಞವಲ್ಕ್ಯ ಸ್ಮೃತಿಯಲ್ಲಿದೆ. ಪರಪುರುಷನನ್ನು ಕುರಿತು ಯೋಚಿಸುವದು; ಆತನ ಭೇಟಿಗಾಗಿ, ಸ್ಪರ್ಶಕ್ಕಾಗಿ ಕಾತರಗೊಂಡಿರುವದು; ಇವೆಲ್ಲ ಸಂಗತಿಗಳು ತತ್ಕಾಲೀನ ಪಾತಿವ್ರತ್ಯದ ಕಲ್ಪನೆಗೆ ಹೊಂದಿಕೊಂಡಿರಲಿಲ್ಲ. ಹನುಮಂತನು ಲಂಕೆಯಲ್ಲಿ ಸೀತೆಯನ್ನು ಭೇಟಿಯಾದನು. ಸ್ವಬಲದಿಂದ ಸಮುದ್ರವನ್ನು ದಾಟಿ ಸೀತೆಯನ್ನು ಸುಖರೂಪವಾಗಿ ರಾಮನ ಬಳಿ ತಲುಪಿಸುವ ಆಶ್ವಾಸನೆಯನ್ನು ಸೀತೆಗೆ ಕೊಟ್ಟನು; ಆದರೆ ಸೀತೆ ಅವನೊಡನೆ ಹೋಗಲು ಕೆಲವು ಕಾರಣಗಳಿಂದ ಸಮ್ಮತಿಸಲಿಲ್ಲ. ಅವುಗಳಲ್ಲಿಯ ಒಂದು ಕಾರಣವು ಈ ರೀತಿ:

          ಭರ್ತುಭಕ್ತಿಂ ಪುರಸ್ಕೃತ್ಯ ರಾಮಾದನ್ಯಸ್ಯ ವಾನರ |
          ನಾಹಂ ಸ್ಟ್ರಷ್ಟಂ ಸ್ವತೋ ಗಾತ್ರಮಿಚ್ಛೇಯಂ ವಾನರೋತ್ತಮ ||

——————
೫೯. ಮಹಾಭಾರತ-ಆಶ್ರಮಪರ್ವ.