ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

xiii

ಇಲ್ಲದಿರುವುದಾಗಿ ತಿಳಿಸಿದರು. ಹಾಗೂ ಈ ಕೆಲಸವನ್ನು ನಾನು ಕೈಗೊಳ್ಳಬೇಕೆಂದು ಆಗ್ರಹಪೂರ್ವಕವಾಗಿ ಹೇಳಿದರು. ವರಗಳ ಬಗ್ಗೆ ಓದಿಕೊಳ್ಳದೇ ಕೇವಲ ಶಾಪಗಳ ಬಗ್ಗೆ ಅಭ್ಯಾಸ ನಡೆಸುವುದು ಅಪೂರ್ಣ ಕಾರ್ಯವೆನಿಸುವುದಾದ್ದರಿಂದ ಶಾಪಗಳ ಜೊತೆಗೆ ವರಗಳ ಜ್ಞಾನವೂ ಆವಶ್ಯಕವೆಂದು ಕೇಳಿದರು. ಈ ಎರಡನ್ನೂ ಅರಿತುಕೊಳ್ಳಿ!- ಎಂದು ಹೇಳಿದರು. ಈ ರೀತಿ ವಂಡಿತ ಮಹಾದೇವಶಾಸ್ತಿ ಜೋಶಿ ಇವರಿಂದ ನನಗೆ 'ವರ' ಲಭಿಸಿತು. ಹೀಗೆ ಇಬ್ಬರು ಪಂಡಿತರಿಂದ ನನಗೆ ಶಾಪ/ವರ ಇವುಗಳ ಲಾಭವಾಯಿತು. ರಾಮಾಯಣದಲ್ಲಿಯ ತೃಣಬಿಂದು ಕನ್ಯೆಯರಂತೆ ನನ್ನ ಬಾಬತ್ತಿನಲ್ಲಿಯೂ ಶಾಪವು ವರಸ್ವರೂಪವಾಯಿತು.
ನನ್ನ ವಿದ್ಯಾರ್ಥಿ ಜೀವನದಿಂದ ಪ್ರಾರಂಭಿಸಿ ಕಳೆದ ಐವತ್ತು ವರ್ಷಗಳಿಂದ ನನಗೆ ಈ ಶಾಸ್ತ್ರಿಗಳ ಮಾರ್ಗದರ್ಶನ ಲಭಿಸುತ್ತ ಬಂದಿದೆ. ಅವರು ಉತ್ತೇಜಿಸಿದ್ದರಿಂದ ನಾನು ಓದಿಗೆ ಪ್ರಾರಂಭಿಸಿದೆ. ಶಾಪ ಮತ್ತು ವರಗಳ ಬಗ್ಗೆ ವಿಚಾರ ಮಾಡುವುದೆಂದರೆ ವೇದ, ಪುರಾಣ, ಉಪನಿಷತ್ತುಗಳು. ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಎಲ್ಲ ಪ್ರಾಚೀನ ಗ್ರಂಥಗಳನ್ನು ಓದಿಕೊಳ್ಳಬೇಕಿತ್ತು. ಇದು ನನ್ನ ಶಕ್ತಿಗೆ ಮೀರಿದ ಕೆಲಸವಾಗಿತ್ತು; ನನ್ನಿಂದ ಸಾಧ್ಯವಾಗುವಂತಿರಲಿಲ್ಲ. ಈ ಕಾರಣದಿಂದ ನಾನು ಒಂದೇ ಗ್ರಂಥವನ್ನು, ಮೂಲ ಮಹಾಕಾವ್ಯವನ್ನು, ಲಕ್ಷ್ಯಕೇಂದ್ರವನ್ನಾಗಿ ಆಯ್ದುಕೊಂಡೆ. ವಿಷಯದ ವಿಸ್ತಾರವನ್ನು ವೀಕ್ಷಿಸಿದ ನಂತರ ಈ ಕಾರ್ಯವು ನನ್ನ ಶಕ್ತಿಗೆ ಮೀರಿದ್ದು ನನ್ನಿಂದ ಪೂರ್ತಿಯಾಗಲಾರದೆಂದು ಅನೇಕಾವರ್ತಿ ಎನಿಸತೊಡಗಿತು. ಈ ಪರಿಸ್ಥಿತಿಯಲ್ಲಿ ಈ ಹವ್ಯಾಸವನ್ನು ಬಿಟ್ಟುಕೊಡಬೇಕೆಂಬ ವಿಚಾರ ಸುಳಿಯುತ್ತಿದ್ದಾಗ, ಇಬ್ಬರು ವಿದ್ವಾಂಸರ ಪರಿಚಯ ಮತ್ತು ತುಸು ಅವಧಿಯಲ್ಲಿಯೇ ಅವರೊಡನೆ ಬೆಳೆದು ವರ್ಧಿಸಿದ ಸ್ನೇಹ. ಇದು ಒಂದು ಯೋಗಾಯೋಗವೇ ಸರಿ; ಅವರು ಪ್ರೋತ್ಸಾಹಿಸಿದ್ದರಿಂದಲೇ ಇಂದಿನ ಈ ಕೃತಿ ಹೊರಬರಲು ಸಾಧ್ಯವಾಯಿತು.
ಉಡುಪಿಯಲ್ಲಿಯ ಶ್ರೀ ಪೂರ್ಣಪ್ರಜ್ಞ ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಶ್ರೀ ಕೌಲಗಿ ಶೇಷಾಚಾರ್ಯ ಇವರು ಲಭಿಸಿದ್ದರಿಂದ ನನಗೆ ರಾಮಾಯಣದಲ್ಲಿನ ಸೌಂದರ್ಯದ ಸಾಕ್ಷಾತ್ಕಾರವಾಯಿತು. ಅವರಲ್ಲಿಯ ಸಂಸ್ಕೃತ ವಾಙ್ಮಯದ ಪ್ರದೀರ್ಘ ವಿಶ್ಲೇಷಣಾತ್ಮಕ ವಿದ್ವತ್ತು, ವಿವಿಧ ಭಾಷೆಗಳ ಮೇಲಿನ ಪ್ರಭುತ್ವ, ಜೊತೆಗೆ ವಿದ್ವತ್ತಿಗೆ ಒಪ್ಪುವ ಸೌಜನ್ಯ ಮತ್ತು ಯಾವ ಅಪೇಕ್ಷೆಯನ್ನೂ ಇಟ್ಟುಕೊಳ್ಳದೇ ನೆರವಾಗುವ ನಿರಾಲಸ್ಯ ಸ್ವಭಾವ- ಇಂಥ ದುರ್ಲಭ ಸದ್ಗುಣಗಳ ಸಂಗಮವೇ ಅವರಾಗಿದ್ದರಿಂದ ಅವರ ಬಗ್ಗೆ ನನ್ನ ಆದರ ಬೆಳೆದು ಇಮ್ಮಡಿ-ಮುಮ್ಮಡಿಯಾಯಿತು. ಇವರ ಪ್ರೋತ್ಸಾಹ, ನೆರವು ಇರದಿದ್ದರೆ ನನ್ನಿಂದ ಈ ಲೇಖನವನ್ನು ಬರೆಯಲು ಸಾಧ್ಯ ಆಗುತ್ತಿರಲಿಲ್ಲ. ಈ ಪುಸ್ತಕದ ಮೂಲ ಮುದ್ರಣವು ಮರಾಠಿ ಭಾಷೆಯಲ್ಲಿ ಪುಣೆಯಲ್ಲಿ ನಡೆಯುತ್ತಿದ್ದಾಗ ಇವರು ಮೈಸೂರಿನಿಂದ ಕರಡಚ್ಚುಗಳನ್ನು ತಿದ್ದು ಪರಿಶೀಲಿಸಿ