ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪವಾಣಿ

೧೧೫


೧೧. ? < ?

ಬಾಲಕಾಂಡ/೪೩

ವಿಶ್ವಾಮಿತ್ರನು ರಾಮನಿಗೆ ಗಂಗಾವತರಣದ ಕಥೆಯನ್ನು ಹೇಳುತ್ತಿದ್ದಾನೆ:
ಶಿವನ ಶಿರದಲ್ಲಿ ಬಿದ್ದ ಗಂಗೆಯ ಜಟಾಜೂಟದಿಂದ ಹೊರಗೆ ಬರಲು ಮಾರ್ಗವು ದೊರಕದಂತಾಯಿತು. ಅವಳು ಅನೇಕ ಸಂವತ್ಸರಗಳವರೆಗೆ ಅಲ್ಲಿಯೇ ಸಿಲುಕಿಬಿದ್ದಳು. ತಪಾಚರಣೆಯಿಂದ ಅವಳು ಶಂಕರನನ್ನು ಒಲಿಸಿಕೊಂಡನಂತರ ಆತನು ಗಂಗೆಯನ್ನು ಒಂದು ಸರೋವರದಲ್ಲಿ ಬಿಟ್ಟನು. ಶಿವನ ಶಿರಸ್ಸಿನಿಂದ ಬಿದ್ದ ಗಂಗಾಜಲವು ನಿರ್ಮಲವೂ ನಿಷ್ಕಾಮವೂ ಆದ್ದರೀಂದ ಭೂಲೋಕದಲ್ಲಿ ಶೋಭಾಯಮಾನವಾಯಿತು. ಅಲ್ಲಿ ವಾಸವಾಗಿದ್ದ ಋಷಿವೃಂದ ಹಾಗೂ ಗಂಧರ್ವರು ಶಿಮಸ್ತಕದಿಂದ ಬಿದ್ದ ಆ ಉದಕವು ಪವಿತ್ರವೆಂದು ಭಾವಿಸಿ ಅದರಲ್ಲಿ ಮಿಂದರು.


           ಶಾಪಾತ್ಪ್ರಪತಿತಾ ಯೇ ಚ ಗಗನಾದ್ವಸುಧಾತಲಮ್ ‖೨೭‖
           ಕೃತ್ವಾ ತತ್ರಾಭಿಷೇಕಂ ತೇ ಬಭೂವುರ್ಗತಕಲ್ಮಷಾಃ ‖೨೮‖


“ಶಾಪವನ್ನು ಪಡೆದು ಸ್ವರ್ಗದಿಂದ ಚ್ಯುತರಾದವರು ಭೂಮಿಗೆ ಬಂದಿದ್ದರು; ಗಂಗಾಜಲದಲ್ಲಿ ಅವರು ಸ್ನಾನಮಾಡಿ ಪಾಪರಹಿತರಾದರು.”
ಪಾಪವನ್ನು ಕಳೆದುಕೊಂಡ ಜನರು ಈ ಜಲದಿಂದ ಪುಣ್ಯವಂತರೆಂದೆನಿಸಿ ಪುನಃ ಸ್ವರ್ಗವನ್ನೇರಿ ಸ್ವಸ್ಥಾನಗಳನ್ನು ತಲುಪಿದರು.
ಈ ಶಾಪದ ಉಲ್ಲೇಖ ಮಾತ್ರ ಬಂದಿದೆ. ಸ್ವರ್ಗದಿಂದ ಭೃಷ್ಟರಾದವರು ಯಾರು? ಏಕೆ ಭ್ರಷ್ಟರಾಗಿದ್ದರು? ಅವರಿಗೆ ಶಾಪವು ದೊರೆತ ಕಾರಣವೇನು? ಈ ಎಲ್ಲ ಸಂಗತಿಗಳು ಸ್ಪಷ್ಟವಾಗಿಲ್ಲ.

೧೨. ಗೌತಮ < ಇಂದ್ರ

ಬಾಲಕಾಂಡ/೪೮

ವಿಶ್ವಾಮಿತ್ರನ ಯಜ್ಞರಕ್ಷಣೆಗೆಂದು ಅವನೊಡನೆ ಹೋಗುತ್ತಿರುವ ರಾಮ ಲಕ್ಷ್ಮಣರು ಮಿಥಿಲಾ ನಗರವನ್ನು ಸಮೀಪಿಸಿದರು. ಅಲ್ಲಿ ಹಳೆಯ ಕಾಲದ, ನಿರ್ಜನವಿದ್ದರೂ ರಮ್ಯವಾದ ಒಂದು ಆಶ್ರಮವು ಕಾಣಿಸಿತು. ಆ ಆಶ್ರಮದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿತುಕೊಳ್ಳುವ ಉದ್ದೇಶದಿಂದ ರಾಮನು ವಿಶ್ವಾಮಿತ್ರನಿಗೆ ಈ ಆಶ್ರಮವು ಪೂರ್ವದಲ್ಲಿ ಯಾರದಾಗಿತ್ತು? ಸಾಂಪ್ರತ ಅದು ಮುನಿರಹಿತವಾಗಿ,