ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೪೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


           ಕ್ಷಿಪತಾ ಪಾದಪಾಶ್ಚೇಮೇ ಸಂಭಗ್ನಾಶ್ವಾಸುರೀಂ ತನುಮ್ |
           ಸಮಂತಾದಾಶ್ರಮಂ ಪೂರ್ಣಂ ಯೋಜನಂ ಮಾಮಕಂ ಯದಿ ‖೫೪‖
           ಆಗಮಿಷ್ಯತಿ ದುರ್ಬುದ್ಧಿರ್ವ್ಯಕ್ತಂ ಸ ನ ಭವಿಷ್ಯತಿ |
           ಯೇ ಚಾಸ್ಯ ಸಚಿವಾಃ ಕೇಚಿತ್ಸಂಶ್ರಿತ ಮಾಮಕಂ ವನಮ್ ‖೫೫‖
           ನ ಚ ತೈರಿಹ ವಸ್ತವ್ಯಂ ಶ್ರುತ್ವಾ ಯಾಂತು ಯಥಾಸುಖಮ್ |
           ತೇsಪಿ ವಾ ಯದಿ ತಿಷ್ಠಂತಿ ಶಪಿಷ್ಯೇ ತಾನಪಿ ಧ್ರುವಮ್ ‖೫೬‖
           ವನೇಸ್ಮಿನ್ಮಾಮಕೇ ನಿತ್ಯಂ ಪುತ್ರವತ್ಪರಿರಕ್ಷಿತೇ |
           ಪತ್ರಾಂಕುರವಿನಾಶಾಯ ಫಲಮೂಲಭವಾಯ ಚ ‖೫೭‖
           ದಿವಸಶ್ಚಾದ್ಯ ಮರ್ಯಾದಾ ಯಂ ದ್ರಷ್ಟ್ವಾ ಶ್ಲೋsಸ್ಮಿ ವಾನರಮ್ |
           ಬಹುವರ್ಷಸಹಸ್ರಾಣಿ ಸ ವೈ ಶೈಲೋ ಭವಿಷ್ಯತಿ ‖೫೮‖


"ಯಾರಿಂದ ಈ ದುಷ್ಕರ್ಮವು ನಡದಿದೆಯೋ ಆತನು ಈ ಸ್ಥಳವನ್ನು ಪ್ರವೇಶಿಸಕೂಡದು. ನನ್ನ ಆಶ್ರಮದ ಸುತ್ತಲಿರುವ ವನವನ್ನು ರಕ್ತಸ್ರಾವದಿಂದ ಯಾವನು ದೂಷಿತಗೊಳಿಸಿದನೋ ಅವನು ಇಲ್ಲಿ ಪ್ರವೇಶಿಸಿದರೆ ಅವನು ಸತ್ತು ಹೋಗುವನು. ರಾಕ್ಷಸರ ದೇಹವನ್ನು ಇಲ್ಲಿಗೆ ಎಸೆಯುವಾಗ ಯಾವನು ಈ ವೃಕ್ಷಗಳನ್ನು ಮುರಿದುಹಾಕಿದ್ದಾನೆಯೋ ಆತನು ನನ್ನ ಆಶ್ರಮದಿಂದ ಒಂದು ಯೋಜನ ಅಂತರದಲ್ಲಿರಬೇಕು. ಅದಕ್ಕೂ ಹತ್ತಿರದಲ್ಲಿ ಬಂದರೆ ಆ ದುರ್ಬುದ್ಧಿಯು ಜೀವಸಹಿತ ಉಳಿಯಲಾರನು. ಅವನ ಮಂತ್ರಿಗಳು ಯಾರಾದರೂ ಈಗ ನನ್ನ ವನದಲ್ಲಿ ಆಶ್ರಯಿಸುತ್ತಿದ್ದರೆ ನನ್ನ ಈ ವಚನಗಳನ್ನು ಕೇಳಿ ಕೂಡಲೇ ಇಲ್ಲಿ ಉಳಿಯದೇ ಮನಬಂದೆಡೆ ಹೊರಟುಹೋಗಬೇಕು. ಅವರು ಇಲ್ಲಿಯೇ ಉಳಿದರೆ, ನಾನು ಅವರಿಗೂ ಶಾಪಕೊಡುವೆ. ಸ್ವಂತ ಮಗನನ್ನು ಪೋಷಿಸುವಂತೆ ನಾನು ಈ ವನವನ್ನು ನೋಡಿಕೊಂಡಿದ್ದೇನೆ. ಈ ವನದಲ್ಲಿ ಕಪಿಗಳ ಆಗಮನವು ಹಣ್ಣು, ಚಿಗುರು, ಎಲೆ, ಬೇರು ಇವೆಲ್ಲವುಗಳ ನಾಶಕ್ಕೆ ಕಾರಣವಾಗುತ್ತದೆ. ಒಂದು ದಿನದ ಅವಕಾಶವನ್ನು ಕೊಡುತ್ತೇನೆ. ವಾಲಿಯ ಸಂಬಂಧವಿದ್ದ ವಾನರನು ನನ್ನ ಕಣ್ಣಿಗೆ ನಾಳೆಯಿಂದ ಬಿದ್ದರೆ ಆತನು ಬಹುವರ್ಷಗಳವರೆಗೆ ಪರ್ವತವಾಗಿ ಬೀಳುವನು."
ಈ ಶಾಪವಾಣಿಯನ್ನು ಅರಿತು ವಾಲಿಯು ಭಯಭೀತನಾದನು. ಅವನು ಆಶ್ರಮಕ್ಕೆ ಹೋಗಿ ಮತಂಗಋಷಿಯನ್ನು ಪ್ರಾರ್ಥಿಸಿದನು; ಆದರೆ ಮತಂಗನು ಯಾವ ಮಾತನ್ನೂ ಕಿವಿಗೆ ಹಾಕಿಕೊಳ್ಳಲಿಲ್ಲ; ಅಂದಿನಿಂದ ವಾಲಿಯು ಋಷ್ಯ ಮೂಕ ಪರ್ವತದ ಸಮೀಪಕ್ಕೆ ಹೋಗದಂತಾದನು.