ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪವಾಣಿ

೧೫೯


ರಾವಣನು ತಾನು ಪೌಲಸ್ತ್ಯಪುತ್ರ ದಶಗ್ರೀವನೆಂದು ಹೇಳಿದನು.


            ಸ ಹಿ ತಸ್ಯ ಮಯೋ ರಾಮ ಶಾಪಾಭಿಜ್ಞಸ್ತಪೋಧನಾತ್ ‖೨೦‖
            ವಿದಿತ್ವಾ ತೇನ ಸಾ ದತ್ತಾ ತಸ್ಯ ಪೈತಾಮಹಂ ಕುಲಮ್ ‖೨೧‖


'ಭೀಕರತನವೇ ನಿನ್ನ ಸಹಜ ಗುಣವಾಗುವದು' ಎಂದು ರಾವಣನಿಗೆ ವಿಶ್ರವನಿಂದ ದೊರೆತ ಶಾಪದ ಮಾಹಿತಿಯು ಮಯನಿಗಿತ್ತು. ಹೀಗಿದ್ದರೂ, ರಾವಣನ ಪಿತಾಮಹನ ಕುಲಖ್ಯಾತಿಯನ್ನು ಗಮನಿಸಿ ತನ್ನ ಕನ್ಯೆಯಾದ ಮಂಡೋದರಿಯನ್ನು ಶಾವಣನಿಗೆ ಅರ್ಪಿಸಿದನು. ಈ ಕನ್ಯೆಯೇ ಮಂಡೋದರಿ! ರಾವಣನು ಅಗ್ನಿಸಾಕ್ಷಿಯಾಗಿ ಅವಳನ್ನು ಪತ್ನಿಯೆಂದು ಸ್ವೀಕರಿಸಿದನು.
ವಿಶ್ರವನು ಯಾವ ಕಾರಣಕ್ಕಾಗಿ ರಾವಣನನ್ನು ಶಪಿಸಿದ್ದನು? ಎಂಬುದು ಸ್ಪಷ್ಟವಿಲ್ಲ. ಬಹುಶಃ ಇದರ ಸಂಬಂಧವು ವಿಶ್ರವಾ < ಕೈಕಸಿ ಶಾಪದೊಡನೆ ಇರಬೇಕು. ಶಪ ಕ್ರಮಾಂಕ ೩೯.

೪೧. ಪಾರ್ವತಿ < ಕುಬೇರ

ಉತ್ತರಕಾಂಡ/೧೩

ಅಗಸ್ತ್ಯಮುನಿಯು ರಾವಣನ ದುರ್ವರ್ತನೆಯ ಬಗ್ಗೆ ರಾಮನಿಗೆ ಹೇಳುತ್ತಾನೆ. ಕುಬೇರನು ತನ್ನ ದೂತನ ಮುಖಾಂತರ ರಾವಣನಿಗೆ ಉಪದೇಶಿಸಿದ್ದನ್ನು ದೂತನು ನುಡಿಯುತ್ತಾನೆ:
ದೇವಾದಿಗಳನ್ನು, ಋಷಿ, ಯಕ್ಷ, ಗಂಧರ್ವರನ್ನು ಹೊಡೆಯುವದು-ಬಡೆಯುವುದು, ನಂದನ ಮುಂತಾದ ಉದ್ಯಾನಗಳನ್ನು ಧ್ವಂಸಗೊಳಿಸುವದು, ನದಿ-ಪರ್ವತ-ವೃಕ್ಷಗಳನ್ನು ನಾಶಗೊಳಿಸುವದು, ಇವೇ ಮೊದಲಾದ ರಾವಣನ ದುಷ್ಕೃತ್ಯಗಳನ್ನು ಕೇಳಿದ ಕುಬೇರನು, ತನ್ನ ದೂತನೊಬ್ಬನನ್ನು ಲಂಕೆಗೆ ಕಳುಹಿಸಿ, ಸದ್ವರ್ತನೆಯಿಂದಿರಲು ರಾವಣನಿಗೆ ಉಪದೇಶಿಸಿದ್ದಾನೆ. ಈ ಸಂದರ್ಭದಲ್ಲಿ ತಾನು ಸ್ವತಃ ನಿರ್ದೋಷಿಯಾಗಿದ್ದರೂ ಪಾರ್ವತಿಯ ಕೋಪಕ್ಕೆ ಯಾವ ರೀತಿ ಬಲಿಯಾದೆ ಎಂಬುದರ ಉದಾಹರಣೆಯನ್ನು ಕುಬೇರನು ಕೊಟ್ಟಿದ್ದಾನೆ. ಸಂದೇಶವನ್ನು ದೂತನು ರಾವಣನಿಗೆ ಈ ರೀತಿ ಹೇಳುತ್ತಾನೆ:
"ನಿನ್ನ ಬಂಧುವಿನ ಸಂದೇಶವನ್ನು ಇದ್ದಕ್ಕಿದ್ದಂತೆ ನಾನು ನಿನಗೆ ಹೇಳುತ್ತೇನೆ. ಮಾತಾಪಿತೃಗಳ ಕುಲ ಮತ್ತು ಅಚರಣೆಯನ್ನು ಅನುಸರಿಸಿ ನೀನು ಸದ್ವರ್ತನಿ ಯಾಗಿರು; ನಿನ್ನಿಂದ ಇನ್ನು ಮುಂದೆ ಪಾತಕಗಳು ನಡೆಯದಿರಲಿ. ನಿನ್ನ ಎಲ್ಲ