ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

xx

ಈ ಕೃತಿಯ ದೃಷ್ಟಿಕೋನ

ರಾಮಾಯಣವನ್ನು ಆಳವಾಗಿ ಓದಿಕೊಂಡು ಅದರಿಂದ ಶಾಪ ಮತ್ತು ವರ ಇವುಗಳನ್ನು ಮಾತ್ರ ಆಯ್ದುಕೊಳ್ಳುವ ಇದೊಂದು ಪ್ರಯತ್ನವಾಗಿದೆ. ಇದು ಶಾಪ/ ವರಗಳ ಸಂಕಲನಾತ್ಮಕ ಗ್ರಂಥವಾಗಿದ್ದು ರಾಮಾಯಣದ ಮೇಲಿನ ಪ್ರಬಂಧ ವೆಂದು ತಿಳಿಯಬಾರದು. ಇದನ್ನು ಬರೆಯುವಾಗ ಒಂದು ದೃಷ್ಟಿಕೋನವನ್ನಿಟ್ಟು ವಿವೇಚನೆಯನ್ನು ಆ ಚೌಕಟ್ಟಿನಲ್ಲಿಯೇ ಇಟ್ಟುಕೊಳ್ಳಲಾಗಿದೆ.
(೧) ಇಲ್ಲಿಯ ವಿಷಯ ಕೇವಲ ವಾಲ್ಮೀಕಿ ರಾಮಾಯಣವನ್ನು ಆಧರಿಸಿದೆ. ಅದನ್ನುಳಿದು ಬೇರೆ ರಾಮಾಯಣಗಳ ಊಹಾಪೋಹ ಇದರಲ್ಲಿಲ್ಲ. ಶಾಪ ಮತ್ತು ವರ ಇವುಗಳನ್ನು ಹೊರತುಪಡಿಸಿ, ಇವುಗಳಿಗೆ ಸಂಬಂಧವಿಲ್ಲದ ವಾಲ್ಮೀಕಿಯ ರಾಮಾಯಣ ದಲ್ಲಿಯ ಇತರ ಸಂದರ್ಭ-ವಿಷಯಗಳನ್ನು ಇದರಲ್ಲಿ ಅಳವಡಿಸಿಲ್ಲ;
(೨) ವಾಲ್ಮೀಕಿ ರಾಮಾಯಣದಲ್ಲಿಯ ಎಲ್ಲ ಶಾಪ/ವರಗಳ ಸಂಕಲನವನ್ನು ತಯಾರಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸಿದ್ದರೂ ಅಪ್ಪಿತಪ್ಪಿ ಯಾವದಾದರೊಂದು ಶಾಪ/ವರವು ಉಳಿದುಹೋಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
(೩) ಇದರಲ್ಲಿ ವಾಲ್ಮೀಕಿರಾಮಾಯಣದಲ್ಲಿದ್ದ ಅರವತ್ತೊಂದು ಶಾಪಗಳ ಮತ್ತು ಎಂಬತ್ತೆರಡು ವರಗಳ ಬಗ್ಗೆ ವಿವರಣೆಯನ್ನು ಕೊಡುವ ಪ್ರಯತ್ನವನ್ನು ಮಾಡಲಾಗಿದೆ. ಪ್ರತಿಯೊಂದು ಶಾಪ/ವರದ ಪೂರ್ವಸಂದರ್ಭವನ್ನು, ಸಂಸ್ಕೃತ ಸಂಹಿತೆಯ ಜೊತೆಗೆ ಕನ್ನಡ ಅನುವಾದವನ್ನು ಕೊಡಲಾಗಿದೆ. ಆವಶ್ಯಕವೆನಿಸಿದಲ್ಲಿ ಅದರ ವೈಶಿಷ್ಟ್ಯಪೂರ್ಣ ಮಾಹಿತಿಯನ್ನೂ ಕೊಡಲಾಗಿದೆ. ಜೊತೆಗೆ ಶಪಥ, ಸತ್ಯಕ್ರಿಯೆ, ಆಶೀರ್ವಾದ, ಹರಕೆ, ಆಕಾಶವಾಣಿ, ಪುಷ್ಪವೃಷ್ಟಿ ಇವುಗಳ ವಿಮರ್ಶೆಯನ್ನು ಕೇವಲ ಶಾಪವರಗಳ ಸಾಧರ್ಮ್ಮ ಅಥವಾ ಭೇದಗಳನ್ನು ಸೃಷ್ಟೀಕರಿಸಲು ಆವಶ್ಯಕವಿದ್ದ ಮಟ್ಟಿಗೆ ಆಯ್ದುಕೊಳ್ಳಲಾಗಿದೆ. ಇಲ್ಲಿ ಕೊಡಲಾದ ಉದಾಹರಣೆಗಳು ಸಂಪೂರ್ಣ ವಾಗಿಲ್ಲ. ಶಾಪ/ವರಗಳನ್ನು ಲಕ್ಷಿಸಿ ಬಂದ ವ್ಯಕ್ತಿಗಳ, ಸ್ಥಾನಗಳ ಸಂಕ್ಷಿಪ್ತ ಮಾಹಿತಿಯನ್ನು ಒಂದು ಸ್ವತಂತ್ರ ಪ್ರಕರಣದಲ್ಲಿ ಕೊಡಲಾಗಿದೆ. ಇಷ್ಟೇ ಅಲ್ಲದೆ, ಕೆಲವು ಸಂದೇಹಾಸ್ಪದ ಶಾಪವರಗಳ ಹಾಗೂ ಓದುಗರ ಪರಿಶೀಲನೆಗೆ ಅನುಕೂಲವಾಗಲೆಂದು ಏಳು ಪಟ್ಟಿಗಳನ್ನು ಪರಿಶಿಷ್ಟದಲ್ಲಿ ಅಳವಡಿಸಲಾಗಿದೆ. ಶಾಪ/ವರಗಳ ಸಂಬಂಧವಾಗಿ ಬರುವ ಅನೇಕ ವಿಷಯಗಳ ಪರಾಮರ್ಶೆಯನ್ನು 'ಶಾಪಾದಪಿ ವರಾದಪಿ!' ಎಂಬ ದೀರ್ಘಪ್ರಸ್ತಾವನೆಯಲ್ಲಿ ಮಾಡಲಾಗಿದೆ. ಶಾಪ/