ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪವಾಣಿ

೧೮೩


ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅಂತಿಮ ತೀರ್ಮಾನವನ್ನು ರಾಮನಿಗೆ
ಬಿಟ್ಟುಕೊಟ್ಟರು. ಆಗ ಆ ನಾಯಿಯು ವಿನಯಪೂರ್ವಕವಾಗಿ ಈ ರೀತಿ
ನುಡಿಯಿತು:
ಯದಿ ತುಷ್ಟೊಸಿ ಮೇ ರಾಮ ಯದಿ ದೇಯೋ ವರೋ ಮಮ ‖೩೭‖
ಪ್ರತಿಜ್ಞಾತಂ ತ್ವಯಾ ವೀರ ಕಿಂ ಕರೋಮೀತಿ ವಿಶ್ರುತಮ್ |
ಪ್ರಯಚ್ಛ ಬ್ರಾಹ್ಮಣಸ್ಯಾಸ್ಯ ಕೌಲಪತ್ಯಂ ನರಾಧಿಪ ‖೩೮‖
ಕಾಲಂಜರೇ ಮಹಾರಾಜ ಕೌಲಪತ್ಯಂ ಪ್ರದೀಯತಾಮ್ ‖೩೯‖

“ಭೋ ರಾಮ! ನೀವು ನನ್ನ ಮೇಲೆ ಸಂತುಷ್ಟರಾಗಿದ್ದರೆ, ಮತ್ತು ನನ್ನ
ಮನೋಗತವನ್ನು ಪೂರೈಸುವದಿದ್ದರೆ ನೀವು ನನ್ನ ವಿನಂತಿಯನ್ನು ಆಲಿಸಬೇಕು.
ನಾನು ನಿನ್ನ ಯಾವ ಕಾರ್ಯವನ್ನು ಮಾಡಲಿ? ಎಂದು ವೀರರಾದ ನೀವು
ಕೇಳಿದೀರಿ. ಕಾರಣ, ಹೇ ರಾಜಾಧಿಪತೇ, ಈ ಬ್ರಾಹ್ಮಣನಿಗೆ ಧರ್ಮಸಂಬಂಧದ
ಸಮಾಜದ ಅಧಿಪತ್ಯವನ್ನು ಕೊಡಿರಿ! ಮಹಾರಾಜರೆ, ಕಾಲಂಜರ ಪರ್ವತದ
ಕುಲಪತಿಯ ಅಧಿಕಾರವನ್ನು ನೀವು ಈತನಿಗೆ ಕೊಡಬೇಕು” ಎಂದು ಆ ಶ್ವಾನವು
ಹೇಳಿತು.
ರಾಮನು ಆ ಶ್ವಾನದ ಕೋರಿಕೆಯಂತೆ ಆ ಭಿಕ್ಷುವಿಗೆ ಕುಲಾಧಿಪತ್ಯದ
ಅಭಿಷೇಕವನ್ನು ಮಾಡಿದನು. ಆ ನಂತರ ಆನೆಯ ಮೇಲೆ ಆರೂಢನಾಗಿ ಆ
ಭಿಕ್ಷುವು ಹೋದನು.
ಈ ಘಟನೆಯಿಂದ ರಾಮನ ಮಂತ್ರಿಗಳೆಲ್ಲರೂ ಆಶ್ಚರ್ಯಭರಿತರಾದರು.
ರಾಮನಿಗೆ ಈ ರೀತಿ ಕೇಳಿದರು: "ಮಹಾರಾಜರೇ, ಆ ನಾಯಿಯು ಬ್ರಾಹ್ಮಣನಿಗೆ
ಶಾಪ ಕೊಡದೇ ವರವನ್ನು ಕೊಟ್ಟಿದೆಯಲ್ಲ?” ಆಗ ರಾಮನು ನೀವು
ಪರಿಣಾಮದ ತತ್ತ್ವಜ್ಞಾನವನ್ನು ಅರಿತಿಲ್ಲ. ಅದನ್ನು ಆ ನಾಯಿಯು ಅರಿತಿದೆ.
ರಾಮನು ಈ ಬಗ್ಗೆ ಆ ಶ್ವಾನಕ್ಕೆ ಕೇಳಿದಾಗ ಅದು ಈ ರೀತಿ ಹೇಳಿತು: “ನಾನು
ಉಂಡುಳಿದ ಅನ್ನವನ್ನು ಭಕ್ಷಿಸಿ, ಆ ಕಾಲಂಜರ ಪರ್ವತದ ಕುಲಪತಿಯಾಗಿದ್ದೆ.
ದೇವ-ದ್ವಿಜರ ಪೂಜೆಯನ್ನು ನಡೆಯಿಸಿಕೊಂಡು, ದಾಸ-ದಾಸಿಯರ
ಅಧಿಪತಿಯಾಗಿದ್ದೆನು. ಅವರಿಗೆ ಆಹಾರ ಪಾನೀಯಗಳನ್ನು ಒದಗಿಸುವವನೂ
ದೇವಸ್ಥಾನದ ದ್ರವ್ಯದ ರಕ್ಷಣೆಯನ್ನು ಮಾಡುವವನೂ ನಾನೇ ಆಗಿದ್ದೆ.
ಶುಭಕರ್ಮದತ್ತ ನನ್ನ ಒಲವು ಇದ್ದಿತು. ನಾನು ವಿನಯಸಂಪನ್ನನಾಗಿ, ಸುಶೀಲನಾಗಿ
ಸಕಲ ಪ್ರಾಣಿಗಳ ಹಿತದ ಬಗ್ಗೆ ತತ್ಪರನಾಗಿರುತ್ತಿದ್ದೆನು; ಆದರೆ ಈ ಘೋರ ನೀಚ