ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಕೊಡುವೆನು. ಇಷ್ಟೇ ಅಲ್ಲದೇ ಭರತನಿಗೂ ಮತ್ತು ನಿಮ್ಮ ಸಂತಾನಕ್ಕೂ ನಾನು ಶಾಪ ಕೊಡುವೆನು. ಕ್ರೋಧವನ್ನು ತಡೆಹಿಡಿಯುವ ಸಾಮರ್ಥ್ಯ ನನ್ನಲ್ಲಿಲ್ಲ.”
ದುರ್ವಾಸನ ನುಡಿಯನ್ನು ಕೇಳಿ ಲಕ್ಷ್ಮಣ ಈ ರೀತಿ ಯೋಚಿಸಿದನು. 'ನಾನೊಬ್ಬನು ಮರಣ ಹೊಂದಿದರೂ ಅಡ್ಡಿಯಿಲ್ಲ; ಆದರೆ ಎಲ್ಲರ ನಾಶವಾಗುವದು ಉಚಿತವಲ್ಲ.'- ಹೀಗೆಂದು ಲಕ್ಷ್ಮಣನು ರಾಮನ ಕಟ್ಟಪ್ಪಣೆಯನ್ನು ಉಲ್ಲಂಘಿಸಿ, ದುರ್ವಾಸ ಋಷಿಯ ಆಗಮನದ ವಾರ್ತೆಯನ್ನು ರಾಮನಿಗೆ ತಿಳಿಸಿದನು. ಕಾಲಪುರುಷನು ಹೋದನಂತರ ಲಕ್ಷ್ಮಣನು ರಾಮನಿಗೆ ಈ ರೀತಿ ಎಂದನು- “ನನ್ನನ್ನು ವಧಿಸಿ ನೀನು ನನ್ನ ಪ್ರತಿಜ್ಞೆಯನ್ನು ಪಾಲಿಸು!”
ನಿಜದಲ್ಲಿ ಈ ಶಾಪವು ಕೊಡಲ್ಪಟ್ಟಿಲ್ಲ.