ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಕಿಂ ದಾನೀಂ ಮಯಾ ಶತ್ಯಂ ಕರ್ತುಂ ರಣಗತೇನ ಹಿ || ನ ಮಯಾ ಯದ್ಯಯಂ ಶಕ್ರೋ ಹಂತುಂ ವರಪುರಸ್ಕೃತಃ ||೪೮ “ನೀವು ನಮ್ಮ ಅಧಿಪತಿಗಳ; ಈಗ ಈ ರಾಕ್ಷಸನಿಗೆ ವರ ಸಿಕ್ಕಿರುವುದರಿಂದ ನನ್ನಿಂದ ಈತನ ವಧೆಯಾಗುವಂತಿಲ್ಲ; ಆದ್ದರಿಂದ ಸಂಗ್ರಾಮದಲ್ಲಿ ನಾನು ನಿಂತು ಮಾಡಬಹುದಾದರೂ ಏನು? ನಾನು ಈ ರಾಕ್ಷಸನಿಂದ ಕಣ್ಮರೆಯಾಗುತ್ತೇನೆ.” ಇಂದ್ರ ಮತ್ತು ವಿಷ್ಣು ಉತ್ತರಕಾಂಡ/೨೭ ಕೈಲಾಸಪರ್ವತವನ್ನು ದಾಟಿ ರಾವಣನು ಸೈನ್ಯ-ವಾಹನ ಸಮೇತನಾಗಿ ಇಂದ್ರಲೋಕವನ್ನು ತಲುಪಿದನು. ಇಂದ್ರನು ಅವನನ್ನು ನೋಡಿ ಭಯಗೊಂಡನು. ವಸು, ರುದ್ರ, ಆದಿತ್ಯಾದಿ ದೇವತೆಗಳಿಗೆ ರಾವಣನೊಡನೆ ಯುದ್ಧಕ್ಕೆ ಸಿದ್ದರಾಗಲು ಹೇಳಿದನು. ವಿಷ್ಣುವನ್ನು ಸಮೀಪಿಸಿ “ನಾನು ರಾವಣನ ವಿಷಯದಲ್ಲಿ ಏನು ಮಾಡಬೇಕು?” ಎಂದು ಪ್ರಶ್ನಿಸಿದನು. ವರಪ್ರದಾನಾದ್ ಬಲವಾನ್ನ ಖಲನ ಹೇತುನಾ | ತತ್ತು ಸತ್ಯಂ ವಚಃ ಕಾರ್ಯಂ ಯದುಕ್ತಂ ಪದಯೋನಿನಾ ॥೮॥ “ಕೇವಲ ವರ ದೊರೆತ ಮೂಲಕ ಆತನು ಬಲಾಡ್ಯನಾಗಿದ್ದಾನೆ. ಏನೇ ಇದ್ದರೂ ಬ್ರಹ್ಮದೇವನ ವಚನವು ಸತ್ಯಗೊಳ್ಳಬೇಕು. ನೀವು ಈಗ ರಾವಣನ ವಧೆಯ ಉಪಾಯವನ್ನು ನನಗೆ ತಿಳಿಸಿರಿ!” ಎಂದು ಇಂದ್ರನು ವಿಷ್ಣುವಿಗೆ ವಿನಂತಿಸಿದನು. “ನೀವು ಸ್ವತಃ ರಾವಣನೊಡನೆ ಖಡ್ಗ ಮತ್ತು ಚಕ್ರಪಾಣಿಯಾಗಿ ಯುದ್ಧವನ್ನು ಮಾಡುವಿರಾ?” ಎಂದು ಕೇಳಿದನು. ಇಂದ್ರನ ಬಿನ್ನಹವನನು ಕೇಳಿ ವಿಷ್ಣುವು, “ಭಯ ಪಡುವ ಕಾರಣವಿಲ್ಲ'ವೆಂದು ಹೇಳಿದನು. ನ ತಾವದೇಷ ದುಷ್ಟಾತ್ಸಾ ಶಕ್ರೋ ಜೇತುಂ ಸುರಾಸುರೈಃ | ಹಂತುಂ ಚಾಪಿ ಸಮಾಸಾಧ್ಯ ವರದಾನೇನ ದುರ್ಜಯಃ ||೧೫|| ದೇವ-ದೈತ್ಯರಿಂದ ಈ ದುರಾತ್ಮನ ಪರಾಭವಾಗಲೀ, ವಧೆಯಾಗಲೀ ಆಗುವ ಸಂಭವವಿಲ್ಲ. ವರ ಪಡೆದ ಈತನು ಯಾರಿಗೂ ಸೋಲುವಂತಿಲ್ಲ. ವಿಷ್ಣುವು ಸ್ವತಃ ತಾನು ರಾವಣನೊಡನೆ ಯುದ್ಧಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದನು ಏಕೆಂದರೆ-