ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೪೧


ರಾಕ್ಷಸ-ಸ್ತ್ರೀಯರು

ಯುದ್ಧಕಾಂಡ/೯೪

ಇಂದ್ರಜಿತುವಿನ ವಧೆಯಾದೊಡನೆ ಲಂಕೆಯಲ್ಲಿ ಹಾಹಾಕಾರವುಂಟಾಯಿತು.
ರಾಕ್ಷಸ ಸ್ತ್ರೀಯರು ಭಯಭೀತರಾದರು. ಯುದ್ಧದಲ್ಲಿ ಅವರ ಬಂಧುಬಳಗದವರು
ಕೊಲ್ಲಲ್ಪಟ್ಟ ಕಾರಣ ಅವರು ಅತಿ ದುಃಖಗೊಂಡು ರೋದಿಸಹತ್ತಿದರು. “ರುದ್ರ,
ವಿಷ್ಣು, ಮಹೇಂದ್ರ ಇಲ್ಲವೆ ಪ್ರತ್ಯಕ್ಷ ಮೃತ್ಯುವೇ ರಾಮನ ರೂಪದಲ್ಲಿ ನಮ್ಮ ವಧೆಯನ್ನು
ಕೈಕೊಂಡಿದ್ದಾನೆ. ರಾಮನು ನಮ್ಮ ವೀರರನ್ನು ಕೊಂದ ಕಾರಣ ಇನ್ನು ಬದುಕಿರುವ
ಆಸೆ ನಮ್ಮಲ್ಲಿ ಉಳಿದಿಲ್ಲ. ಈ ಭಯವು ಕೊನೆಗಾಣುವ ಚಿಹ್ನೆಗಳೂ ಇರುವದಿಲ್ಲ.”
ರಾಮಹಸ್ತಾದ್ದಶಗ್ರೀವಃ ಶೂರೋ ದತ್ತಮಹಾವರಃ |
ಇದಂ ಭಯಂ ಮಹಾಘೋರಂ ಸಮುತ್ಪನ್ನಂ ನ ಬುದ್ಧ‍್ಯತೇ ‖೨೬‖

“ಬ್ರಹ್ಮದೇವನಿಂದ ದೊಡ್ಡ ವರವನ್ನು ಪಡೆದ ಈ ಶೂರ ರಾವಣನಿಗೆ,
ರಾಮನಿಂದ ಉಂಟಾಗಿರುವ ಈ ಮಹಾಘೋರ ವಿಪತ್ತಿನ ಅರ್ಥವಾಗುತ್ತಿಲ್ಲ”
ಎಂದು ರಾಕ್ಷಸಿಯರಿಗೆ ಅನಿಸುತ್ತಿತ್ತು. ರಾವಣನ ಪ್ರತಿ ಸಂಗ್ರಾಮದಲ್ಲಿ ಒಂದಿಲ್ಲೊಂದು
ಉತ್ಪಾತಗಳು ಕಂಡುಬರಹತ್ತಿವೆ. ದೇವ, ಗಂಧರ್ವ, ಪಿಶಾಚಿ ಮತ್ತು ರಾಕ್ಷಸರು
ಒಂದಾಗಿ ಅತನನ್ನು ರಕ್ಷಿಸಲು ಯತ್ನಿಸಿದರೂ ಅವರಿಗೆ ಯಶ ದೊರೆಯಲಾರದು;
ಏಕೆಂದರೆ-

ಪಿತಾಮಹೇನ ಪ್ರೀತೇನ ದೇವದಾನವರಾಕ್ಷಸೈ: |
ರಾವಣಸ್ಯಾಭಯಂ ದತ್ತಂ ಮನುಷ್ಯೇಭ‍್ಯೋ ನ ಯಾಚಿತಮ್ ‖೨೯‖

ಬ್ರಹ್ಮದೇವನು ಪ್ರಸನ್ನನಾಗಿ ರಾವಣನಿಗೆ ದೇವ, ದಾನವ ಮತ್ತು ರಾಕ್ಷಸರಿಂದ
ಅಭಯವನ್ನು ಕೊಟ್ಟಿದ್ದಾನೆ; ಆದರೆ, ಮನುಷ್ಯರಿಂದ ಅಭಯವಿರಬೇಕೆಂಬ ವರವನ್ನು
ರಾವಣನು ಬೇಡಲಿಲ್ಲವಾದ್ದರಿಂದ ಬ್ರಹ್ಮದೇವನು ಅದನ್ನು ಕೊಟ್ಟಿಲ್ಲವೆಂಬುದು
ರಾಕ್ಷಸ ಸ್ತ್ರೀಯರಿಗೆ ಗೊತ್ತಿತ್ತು.

ಸುಮಾಲಿ

ಉತ್ತರಕಾಂಡ/೧೧

ನಿಶಾಚರರಿಗೆ ವರವು ದೊರಕಿದೆ ಎಂಬುದನ್ನು ಅರಿತು ಸುಮಾಲಿ ರಾಕ್ಷಸನು
ನಿರ್ಭಯನಾಗಿ ತನ್ನ ಅನುಯಾಯಿಗಳೊಡನೆ ರಸಾತಳದಿಂದ ಹೊರಬಂದನು.