ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೪೫


ಉತ್ತರಕಾಂಡ/ಪ್ರಕ್ಷಿಪ್ತ ೪

ಚಂದ್ರಕಿರಣಗಳಿಂದ ಭಯವುಂಟಾದಾಗ ಕ್ರೋಧಗೊಂಡ ರಾವಣನು
'ನಾರಾಚ' ಎಂಬ ಬಾಣದಿಂದ ಚಂದ್ರನಿಗೆ ಗುರಿಯಿಟ್ಟನು. ಆಗ ಬ್ರಹ್ಮದೇವನು
ಚಂದ್ರಲೋಕಕ್ಕೆ ಹೋಗಿ ರಾವಣನಿಗೆ- “ನೀನು ಇಲ್ಲಿಂದ ಮರಳಿ ಹೋಗು!
ಚಂದ್ರನಿಗೆ ಪೀಡಿಸಬೇಡ! ಅವನು ಲೋಕಕ್ಕೆ ಹಿತಕಾರಿಯಾಗಿದ್ದಾನೆ. ನಾನು
ನಿನಗೆ ಒಂದು ಮಂತ್ರವನ್ನು ಕೊಡುವೆ; ಪ್ರಾಣ ಹೋಗುವ ಪ್ರಸಂಗ ಉಂಟಾದಾಗ
ಯಾವ ಪುರುಷನು ಈ ಮಂತ್ರವನ್ನು ಜಪಿಸುವನೋ ಅವನಿಗೆ ಮರಣದ
ಭಯವಿರಲಾರದು.” ಕೂಡಲೇ ರಾವಣನು ಆ ಮಂತ್ರವನ್ನು ಕೊಡಲು ಕೇಳಿದನು.
ಬ್ರಹ್ಮದೇವನು ರಾವಣನಿಗೆ ಕೆಲವು ಮಹತ್ವದ ಸೂಚನೆಗಳನ್ನು ಕೊಟ್ಟನು.
ಪ್ರಾಣಾಪಾಯವಿದ್ದಾಗ ಮಾತ್ರ ಇದನ್ನು ಜಪಿಸಬೇಕು; ಇತರ ಕಾಲದಲ್ಲಿ
ಜಪಿಸಬಾರದು! ಮಂತ್ರವನ್ನು ಜಪಿಸಿದ ಹೊರತು ಸಿದ್ಧಿಯು ಸಾಧ್ಯವಿರುವದಿಲ್ಲ;
ಆದ್ದರಿಂದ ಶಿರೋಮಂತ್ರವನ್ನು ಜಪಿಸಲು ರಾವಣನಿಗೆ ಹೇಳಿ ಮಂತ್ರವನ್ನು
ತಿಳಿಸಿದನು.
ಮಯಾ ಪ್ರೋಕ್ತಮಿದಂ ಪುಣ್ಯಂ ನಮಾಷ್ಟಶತಮುತ್ತಮಮ್ |
ಸರ್ವಪಾಪಹರಂ ಪುಣ್ಯಂ ಶರಣ್ಯಂ ಶರಣಾರ್ಥಿನಾಮ್
ಜಪ್ತಮೇತದ್ದಶಗ್ರೀವ ಕರ್ಯಾಚ್ಛತ್ರುವಿನಾಶನಮ್ ‖೫೦‖

“ಹೇ ರಾವಣನೇ, ನಾನು ತಿಳಿಸಿದ, ಪವಿತ್ರವಾದ, ಉತ್ತಮವಾದ ನಾಮಾಷ್ಟರ
ಶತವು, ಸರ್ವಪಾಪನಾಶಕವೂ ಪುಣ್ಯಕಾರಕವೂ ಆಗಿದೆ; ಶರಣರನ್ನು ಬಯಸುವ
ವರಿಗೆ ಆಸರೆ ಯೋಗ್ಯವಾಗಿದೆ. ಇದನ್ನು ಜಪಿಸಿದರೆ ಶತ್ರುವಿನ ನಾಶವಾಗುತ್ತದೆ"
ಎಂದು ಬ್ರಹ್ಮದೇವನು ನುಡಿದನು.

ಉತ್ತರಕಾಂಡ/ಪ್ರಕ್ಷಿಪ್ತ ೫

ದತ್ವಾತು ರಾವಣಸ್ಯೈವಂ ಸ ಕಮಲೋದ್ಭವಂ ‖೧‖

ಈ ರೀತಿ ವರವನ್ನು ಅನುಗ್ರಹಿಸಿ ಪಿತಾಮಹನಾದ ಬ್ರಹ್ಮದೇವನು
ಬ್ರಹ್ಮಲೋಕಕ್ಕೆ ತೆರಳಿದನು.
ಇದು 'ಅಯಾಚಿತ' ವರವಾಗಿದೆ.