ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

ವೇದೋಪನಿಷತ್ತುಗಳು, ಪುರಾಣಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ, ಭಾಗವತ ಮೊದಲಾದ ಗ್ರಂಥಗಳು ಭಾರತೀಯರ ಸಾಂಸ್ಕೃತಿ ಜೀವನವನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.

ಈ ಗ್ರಂಥಗಳು ಬೇರೆ ಅಲ್ಲ; ಭಾರತೀಯ ಸಂಸ್ಕೃತಿ ಬೇರೆ ಅಲ್ಲ. ಭಗವದ್ಗೀತೆ ಒಂದು ಸ್ವತಂತ್ರ ಗ್ರಂಥವಲ್ಲ. ಅದು ಮಹಾಭಾರತದ ಭೀಷ್ಮ ಪರ್ವದಲ್ಲಿಯ ಒಂದು ಭಾಗವಾಗಿದೆ. ಹೀಗಿದ್ದರೂ ಅದು ಸ್ವತಂತ್ರ ಘನಗ್ರಂಥದಷ್ಟು ಘನತೆಯನ್ನು ಪಡೆದಿದೆ. ಅದರಲ್ಲಿರುವ ವಿಚಾರಸಂಪತ್ತೇ ಅದಕ್ಕೆ ಕಾರಣವಾಗಿದೆ. ಶತಾನುಶತಕಗಳು ಕಳೆದಂತೆ ಅದರ ರಸವತ್ತತೆಯ ಅನುಭವ ಹೆಚ್ಚಾಗುತ್ತಲೇ ಇದೆ. ಈ ಗ್ರಂಥಗಳು ರಚನೆಯ ಕಾಲದಿಂದ ಇಂದಿನವರೆಗೆ ಧಾರ್ಮಿಕ ಗ್ರಂಥಗಳೆಂದು ಪರಿಗಣಿಸಲ್ಪಟ್ಟಿದ್ದರಿಂದ ಅವು ವಂದನೀಯ ಮತ್ತು ಪೂಜ್ಯ ಸ್ಥಾನವನ್ನು ಪಡೆದಿವೆ. ಇವುಗಳಲ್ಲಿ ಮಾನವೀ ಜೀವನದ ದರ್ಶನವು ಬಲು ಸೊಗಸಾಗಿ ಮೂಡಿಬಂದಿದೆ. ಅತ್ಯುತ್ತಮ ಆದರ್ಶಗಳನ್ನು ಇವುಗಳ ಮೂಲಕ ಸಮಾಜಕ್ಕೆ ನೀಡಲಾಗಿದೆ. ಶ್ರೇಷ್ಠ ತತ್ತ್ವಜ್ಞಾನವನ್ನು ಪ್ರತಿಪಾದಿಸಲಾಗಿದೆ; ಉಚ್ಚತಮ ಜೀವನಮೌಲ್ಯಗಳನ್ನು ಕಾಪಾಡಿಕೊಂಡ ಉದಾಹರಣೆಗಳು ಹೇರಳವಾಗಿವೆ. ಮಾನವಸ್ವಭಾವದ ಸೂಕ್ಷ್ಮ- ಅತಿಸೂಕ್ಷ್ಮವಾದ ವಿವಿಧ ಅಂಶಗಳನ್ನು ಬಹು ಸುಂದರವಾಗಿ ಚಿತ್ರಿಸಲಾಗಿದೆ. ಈ ಸತ್ಯವನ್ನು ಆಧರಿಸಿ ಬರೆಯಲಾದ ಈ ಗ್ರಂಥಗಳು ಕೇವಲ ಧಾರ್ಮಿಕ ಗ್ರಂಥಗಳೆಂದೇ ಗಣಿಸಲ್ಪಟ್ಟಿದ್ದರಿಂದ ಇವುಗಳಲ್ಲಿ ಬರಿ ದೇವರ ಸ್ತುತಿ, ದೇವರ ಗುಣಗಾನವಿದ್ದು, ಇವು ದೇವರ ಹಿರಿಮೆಯನ್ನು ಎತ್ತಿ ತೋರಿಸುವ ಗ್ರಂಥಗಳಾಗಿದ್ದು, ದೈವಿಕ ಶಕ್ತಿಯಿಂದ ತುಂಬಿ ತುಳುಕುತ್ತವೆ ಎಂಬ ನಂಬಿಕೆ ಬರಿ ಅಂತಶಃ ಸತ್ಯವಾಗಿದೆ. ನಿಜದಲ್ಲಿ ಇವು, ಮನುಷ್ಯರು ಮನುಷ್ಯರಿಗಾಗಿ ಬರೆದಿಟ್ಟ ಮಾನವೀಯ ಗ್ರಂಥಗಳು. ದೇವರ ಮಹಿಮೆಗಿಂತ ಇಲ್ಲಿ ಮನುಷ್ಯನ ಕಾರ್ಯ, ಶೌರ್ಯ, ಸಾಹಸಗಳಿಗೆ ಹೆಚ್ಚು ಗೌರವ ನೀಡಲಾಗಿದೆ. ಈ ಗ್ರಂಥಗಳಲ್ಲಿ ದೇವರಿಗೆ ಮೊರೆಹೋದ ಪ್ರಸಂಗಗಳಿವೆ: ಜೊತೆಗೆ ಮಾನವನು ಮಾನವನಾಗಿ ಎದುರಿಸಿದ ಪ್ರಸಂಗಗಳು ಮನಸೆಳೆಯುವಂತಿವೆ. ಈ ಗ್ರಂಥಗಳ ಲೌಕಿಕತೆಯಲ್ಲಿ ಅಲೌಕಿಕತೆಯು ಅಡಗಿದೆ. ಇಲ್ಲಿ ಬಣ್ಣಿಸಿದ ಕಥೆಗಳು, ಚರಿತ್ರೆ, ತತ್ತ್ವಜ್ಞಾನ ಇವೆಲ್ಲ ಮಾನವನಿಗೆ