ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ ೨೭೭ ನಡೆದುಕೊಂಡು ಹೋಗುತ್ತಾನೆ. ಪರ್ವತಾರೋಹಣವನ್ನು ಮಾಡಿ ಅತಿವೇಗದಿಂದ ಧುಮುಕಿ ಆತನು ಪರ್ವತಗಳ ಶಿಖರಗಳೊಡನೆ ಚೆಂಡಿನಂತೆ ಆಟವಾಡುತ್ತಾನೆ. ವಿಶಾಲ ವೃಕ್ಷಗಳನ್ನು ತನ್ನ ಕೈಗಳಿಂದ ಮುರಿದು ಹಾಕುತ್ತಾನೆ” ಎಂದು ವಾಲಿಯ ಬಗ್ಗೆ ಹೇಳಿದನು. ಕೈಲಾಸಪರ್ವತದ ಶಿಖರದಂತೆ ಹೊಳಪುಳ್ಳ ಒಂದು ಕೋಣನ ರೂಪವನ್ನು ಧರಿಸಿದ 'ದುಂದುಭಿ” ಎಂಬ ದೈತ್ಯನು ಇದ್ದನು. ಆತನಲ್ಲಿ ಒಂದು ಸಹಸ್ರ ಆನೆಗಳ ಬಲವಿತ್ತು. ಸ ವೀರ್ಯೋತ್ಯೇಕದುಷ್ಟಾತ್ಮಾ ವರದಾನೇನ ಮೋಹಿತಃ ॥೮॥ ವರವನ್ನು ಪಡೆದುದರಿಂದ ಗರ್ವೊನ್ಮತ್ತನಾಗಿ, ವೀರತ್ವದ ಅಹಂಕಾರದಿಂದ ದುರಾತ್ಮನಾದ ಆ ದುಂದುಭಿ ದೈತ್ಯನು ಸಮುದ್ರದ ಬಳಿಗೆ ಹೋಗಿ ಯುದ್ಧಕ್ಕೆ ಆಹ್ವಾನಿಸಿದನು. ಆಗ ಸಮುದ್ರನು ಯುದ್ಧ ಮಾಡಲು ತಾನು ಅಸಮರ್ಥನೆಂದು ಹೇಳಿ ದುಂದುಭಿಗೆ ಹಿಮವಾನ ಪರ್ವತದ ಬಳಿ ಹೋಗಲು ತಿಳಿಸಿದನು. ಹಿಮವಾನನು ತಾನ ರಣರಂಗದಲ್ಲಿ ಪ್ರವೀಣನಲ್ಲವೆಂದು ಒಪ್ಪಿಕೊಂಡು, ವಾಲಿಯತ್ತ ಹೋಗಲು ಹೇಳಿದನು. ವಾಲಿಯು ದುಂದುಭಿಯನ್ನು ಕೊಂದುಬಿಟ್ಟನು. ದುಂದುಭಿಗೆ ಯಾರಿಂದ ವರವು ದೊರೆಯಿತು? ಎಂಬುದರ ಸ್ಪಷ್ಟ ಉಲ್ಲೇಖವಿಲ್ಲ. ಅದನ್ನು ಅವನು ತಪಸ್ಸಿನಿಂದ ಪಡೆದುದರಿಂದ ಅದು 'ಯಾಚಿತ' ವರವಾಗಿದೆ. ೨೯. ಆದಿತ್ಯ (ಸೂರ್ಯ) < ಮೇರು ಕಿಷ್ಕ್ರಿಂಧಾಕಾಂಡ/೪೨ ಸುಗ್ರೀವನು ಸೀತೆಯ ಶೋಧಾರ್ಥಕ್ಕಾಗಿ ಕಪಿಚೇಷ್ಟರನ್ನು ಅನೇಕ ವಾನರರ ಸಮೇತ ಎಲ್ಲ ದಿಕ್ಕುಗಳತ್ತ ಕಳುಹಿಸಿದನು. ಪಶ್ಚಿಮ ದಿಕ್ಕಿನತ್ತ ಹೋಗಿ ಶೋಧ ನಡೆಸಲು ಮರೀಚಿ ಮಹರ್ಷಿಯ ಪುತ್ರನನ್ನು ಯೋಜಿಸಿದನು. ಆ ಗುಂಪಿನಲ್ಲಿ ಪ್ರಮುಖನಾದ ಅರ್ಚಿಷ್ಯನ್‌ಗೆ ಸುಗ್ರೀವನು ಚಿಕ್ಕಪುಟ್ಟ ಸಂಗತಿಗಳ ವಿವರಣೆಯನ್ನು ಕೊಟ್ಟು ಮಾರ್ಗದರ್ಶನವನ್ನು ಮಾಡುವಾಗ 'ಮೇರು' ಪರ್ವತದ ಬಗ್ಗೆ ವಿವರಿಸುತ್ತಾನೆ. ಅನೇಕ ಪರ್ವತಗಳನ್ನು ದಾಟಿಹೋದ ನಂತರ ಇಂದ್ರನಿಂದ ರಚಿಸಲ್ಪಡುತ್ತಿದ್ದ ಒಂದು ಪರ್ವತವು ಕಂಡುಬರುವುದು. ಅದರಾಚೆ ಅರವತ್ತು ಸಾವಿರ ಪರ್ವತಗಳ