ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ ೨೮೫ “ನೀನು ಸ್ನೇಚ್ಛಾಮರಣಿಯಾಗುವೆ?” ಎಂಬ ಉತ್ಕಷ್ಟ ವರವನ್ನು ಇಂದ್ರನು ಹನುಮಾನನಿಗೆ ಕೊಟ್ಟನು. ಇದು 'ಅಯಾಚಿತ' ವರವಾಗಿದೆ. ೩೬. ಇಂದ್ರ < ಮೈನಾಕ ಸುಂದರಕಾಂಡ/೧ ಸಮುದ್ರವನ್ನು ಲಂಘಿಸಿ ಲಂಕೆಗೆ ಹೋಗುತ್ತಿರುವ ಹನುಮಾನನಿಗೆ ಸಹಾಯ ಮಾಡುವ ಇಚ್ಛೆಯಿಂದ ಸಾಗರನು, ತನ್ನ ಉದರದಲ್ಲಿ ಅಡಗಿದ ಮೈನಾಕ ಪರ್ವತಕ್ಕೆ ಮೇಲೆ ಎದ್ದು ಬರಲು ಹೇಳಿದನು. ಹನುಮಂತನು ಕೆಲವು ಸಮಯ ಮೈನಾಕ ಪರ್ವತದ ಮೇಲೆ ವಿಶ್ರಮಿಸುವ ವ್ಯವಸ್ಥೆಯನ್ನು ಮಾಡಲು ಮೈನಾಕ ಪರ್ವತಕ್ಕೆ ಅಪ್ಪಣೆಯಿತ್ತನು. ಆ ರೀತಿ ಮೈನಾಕ ಪರ್ವತವು ಮುದ್ರದ ನೀರಿನ ಮೇಲ್ಕಗಕ್ಕೆ ಬಂದಿತು. ಅದನ್ನು ಕಂಡ ಹನುಮಾನನು ತನ್ನ ಮಾರ್ಗದಲ್ಲಿ ವಿಘ್ನವುಂಟಾಯಿತೆಂದು ಭಾವಿಸಿ ಮೈನಾಕ ಪರ್ವತಕ್ಕೆ ತನ್ನ ಎದೆಯಿಂದ ಡಿಕ್ಕಿ ಹೊಡೆದನು; ಆ ಪರ್ವತವನ್ನು ಸಮುದ್ರದಲ್ಲಿ ಉರುಳಿಸಿದನು. ಹನುಮಂತನ ಬಲವನ್ನು ಅನುಭವಿಸಿದ ಮೈನಾಕನು ಸೋಜಿಗಪಟ್ಟನಲ್ಲದೇ ಸಂತೋಷಗೊಂಡನು. ಮನುಷ್ಯರೂಪವನ್ನು ಧರಿಸಿ ಪುನಃ ಮೇಲೆ ಬಂದು ಹನುಮಂತನಿಗೆ ಈ ರೀತಿ ಎಂದನು: “ಹೇ ಕವಿಶ್ರೇಷ್ಠನೇ, ನೀನು ದುಸ್ತರವಾದ ಕೆಲಸವನ್ನು ಮಾಡಿದೆ; ಇನ್ನೂ ನಿನಗೆ ನೂರು ಯೋಜನೆಗಳಷ್ಟು ದೂರ ಕ್ರಮಿಸುವದಿದೆ. ನನ್ನ ಪರ್ವತದ ಶಿಖರದಲ್ಲಿ ನಿನಗೆ ವಿಶ್ರಮಿಸು! ರಾಮನ ಹಿತವನ್ನು ಬಯಸುವ ಸಾಗರ ರಾಜನು ನಿನಗೆ ಈ ರೀತಿ ವಿನಂತಿಸಿದ್ದಾನೆ.” ನಂತರ ಮೈನಾಕನು ಹನುಮಂತನನ್ನು ಸ್ತುತಿಸಿ ತನ್ನ ಪೂರ್ವದ ಸಂಬಂಧಗಳನ್ನು ವಿವರಿಸಿದನು: “ಪೂರ್ವದಲ್ಲಿ ಪರ್ವತ ಗಳಿಗೆ ರೆಕ್ಕೆಗಳಿದ್ದವು. ಆಗ ಪರ್ವತಗಳು ಇಚ್ಚೆ ಬಂದಂತೆ ಸಂಚರಿಸಬಹುದಿತ್ತು. ಒಮ್ಮೆ ಈ ರೀತಿ ಸಂಚರಿಸುತ್ತಿದ್ದಾಗ, ಆ ಪರ್ವತಗಳು ತಮ್ಮ ಮೇಲೆ ಕುಸಿಯ ಬಹುದೆಂಬ ಸಂದೇಹವು ದೇವತೆಗಳಿಗೆ ಉಂಟಾಯಿತು. ಆಗ ಕೋಪಗೊಂಡ ಇಂದ್ರನು ವಜ್ರಾಯುಧದಿಂದ ಪರ್ವತಗಳ ರೆಕ್ಕೆಗಳನ್ನು ಕತ್ತರಿಸಿದನು. ಆ ಸಮಯದಲ್ಲಿ ಇಂದ್ರನು, ನನ್ನತ್ತ ಬರುವದನ್ನು ಕಂಡು ನಿನ್ನ ಪಿತನಾದ ವಾಯುವು ನನ್ನನ್ನು ಆಕಾಶದಲ್ಲಿ ಹಾರಿಸಿ ನನ್ನ ರಕ್ಷಣೆ ಮಾಡಿದನು; ಆದ್ದರಿಂದ ನೀನು ನನಗೆ ಪೂಜ್ಯನಾಗಿರುವಿ!” ಹನುಮಂತನು ಮೈನಾಕನ ಮನೋಭಾವವನ್ನರಿತು ಆತನನ್ನು ಹಸ್ತಗಳಿಂದ ಸ್ಪರ್ಶಿಸಿ ತನ್ನ ಸಂತೋಷವನ್ನು ವ್ಯಕ್ತಪಡಿಸಿದನು. ತಾನು