ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೦೯


“ಯುದ್ಧದಲ್ಲಿ ಮಡಿದ ವಾನರರು ನಿದ್ರೆಯಿಂದ ಎಚ್ಚತ್ತವರಂತೆ ಜೀವಂತ
ವಾಗಿರಲಿ” ಎಂಬ ವರವನ್ನು ದೇವತೆಗಳಿಂದ ಪಡೆದುಕೊಂಡ ನಂತರ ವಾನರರನ್ನು
ಎಚ್ಚರಿಸಿ ಸ್ವಜನಪರಿವಾರದಿಂದೊಡಗೂಡಿದ ರಾಮನು, ಪುಷ್ಪಕವಿಮಾನದಲ್ಲಿ
ಕುಳಿತು ಅಯೋಧ್ಯಾ ನಗರದತ್ತ ಸಾಗಿದನು.
ಈ ಸಂದರ್ಭದಲ್ಲಿ ವರ ಕೊಟ್ಟವರು ಅನೇಕ ದೇವತೆಗಳೆಂದು ಉಲ್ಲೇಖವಿದೆ.

೫೦. ಭರದ್ವಾಜ < ರಾಮ

ಯುದ್ಧಕಾಂಡ/೧೨೪

ವನವಾಸದ ಹದಿನಾಲ್ಕು ವರ್ಷಗಳನ್ನು ಕಳೆದ ನಂತರ ರಾಮನು ಭರದ್ವಾಜ
ಋಷಿಯ ಆಶ್ರಮಕ್ಕೆ ಬಂದು ಅವನನ್ನು ವಂದಿಸಿದನು. ಅಯೋಧ್ಯೆಯ ಕ್ಷೇಮ
ಕುಶಲವನ್ನು ವಿಚಾರಿಸಿಕೊಂಡನು. ಮುನಿಯು ಸಂತೋಷದಿಂದ ಎಲ್ಲ
ವೃತ್ತಾಂತವನ್ನೂ ಬಿತ್ತರಿಸಿ ಹೇಳಿದನು. ಆಜ್ಞಾಧಾರಿಯಾದ ಭರತನು ರಾಮನ
ಪಾದುಕೆಗಳನ್ನು ಪೂಜಿಸುತ್ತ, ಅಯೋಧ್ಯೆಯನ್ನು ಸರಿಯಾಗಿ ಪರಿಪಾಲಿಸುತ್ತಿದ್ದಾ
ನೆಂದು ತಿಳಿಸಿದನು. ತಪಸ್ಸಿನ ಸಾಮರ್ಥ್ಯದಿಂದ ವನವಾಸದಲ್ಲಿ ನಡೆದ ಎಲ್ಲ
ಸಂಗತಿಗಳನ್ನೂ ಭರದ್ವಾಜ ಮುನಿಯು ಅರಿತಿದ್ದನು. ದೇವತೆಗಳಿಂದ ರಾಮನಿಗೆ
ವರಗಳು ದೊರೆತ ಸಂಗತಿಯು ಜ್ಞಾತವಿತ್ತು. ರಾಮನ ಪರಾಕ್ರಮ ಮತ್ತು
ಚಾರಿತ್ರ್ಯಪೂರ್ಣ ವರ್ತನೆಯಿಂದ ಸಂತೋಷಗೊಂಡ ಮುನಿಯು ಇಂತೆಂದನು:
ಅಹಮಪ್ಯತ್ರ ತೇ ದದ್ಮಿ ವರಂ ಶಸ್ತ್ರಭೃತಾಂ ವರ ‖೧೭‖

“ಹೇ ಶಸ್ತ್ರಧಾರಿಗಳಲ್ಲಿಯ ಶ್ರೇಷ್ಠನೆ, ನಾನು ಸಹ ನಿನಗೆ ವರವನ್ನು ಕೊಡುತ್ತೇನೆ.
ನೀನು ಅದನ್ನು ಸ್ವೀಕರಿಸಿ ಅನಂತರ ಅಯೋಧ್ಯೆಯತ್ತ ಹೋಗು!”
ರಾಮನು ಭರದ್ವಾಜ ಮುನಿಯ ಹೇಳಿಕೆಯನ್ನು ತಲೆಬಾಗಿ ಮನ್ನಿಸಿ
ಮುದದಿಂದ ವರವನ್ನು ಬೇಡಿಕೊಂಡನು.
ಅಕಾಲಫಲಿನೋ ವರಕ್ಷಾಃ ಸರ್ವೇಚಾಪಿ ಮಧುಸ್ತವಾಃ |
ಫಲಾನ್ಯಮೃತಗಂಧೀನಿ ಬಹೂನಿ ವಿವಿಧಾನಿ ಚ ‖೧೯‖
ಭವಂತು ಮಾರ್ಗೇ ಭಗವನ್ನ ಯೋಧ್ಯಾಂ ಪ್ರತಿಗಚ್ಛತಃ ‖೨೦‖

“ಹೇ ಭಗವನ್, ಅಯೋಧ್ಯೆಯ ದಾರಿಯ ಇಕ್ಕೆಲಗಳಲ್ಲಿ ಎಲ್ಲ ಗಿಡಮರಗಳು
ಯೋಗ್ಯ ಕಾಲವಿರದಿದ್ದರೂ ಜೇನಿನಷ್ಟು ಸವಿಯಾದ ಮಧುರ ಫಲಗಳಿಂದ