ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ತುಂಬಿರಲಿ; ಅಮೃತದಂಥ ರುಚಿಯಾದ ಸುವಾಸನಾಯುಕ್ತ ಫಲಗಳು
ಸದಾಕಾಲವೂ ಲಭಿಸಲಿ!”
ರಾಮನ ಇಚ್ಛೆಯನ್ನರಿತು ಮುನಿಯ 'ತಥಾಸ್ತು' ಎಂದನು. ಎಲ್ಲ
ಮರಗಿಡಗಳೂ ಚಿಗುರು, ಹೂ-ಹಣ್ಣುಗಳ ಭಾರದಿಂದ ತಲೆಬಾಗುವಂತಾದವು.
ಇದು 'ಅಯಾಚಿತ' ವರವಾಗಿದೆ.

೫೧. ಬ್ರಹ್ಮದೇವ < ವೈಶ್ರವಣ

ಉತ್ತರಕಾಂಡ/೩

ರಾವಣನ ಕುಲ, ಆತನ ಜನ್ಮವೃತ್ತಾಂಎ, ಆತನಿಗೆ ದೊರೆತ ವರಗಳ ಬಗ್ಗೆ
ತಿಳಿದುಕೊಳ್ಳುವ ಇಚ್ಛೆಯನ್ನು ರಾಮನು ವ್ಯಕ್ತಪಡಿಸಿದ್ದರಿಂದ, ಅಗಸ್ತ್ಯಮುನಿಯು
ರಾಮನಿಗೆ ವಿವರಿಸುತ್ತಿದ್ದಾನೆ.
ವೈಶ್ರವಣನು ಒಂದು ತಪೋವನದಲ್ಲಿ ವಾಸವಾಗಿದ್ದನು. ಧರ್ಮವೇ ಅಂತಿಮ
ಗುರಿ ಎಂದು ಬಗೆದ ಆತನು ಶ್ರೇಷ್ಠವೆನಿಸುವ ಧರ್ಮವನ್ನು ಪಾಲಿಸಬೇಕೆಂಬ
ಉತ್ಕಟ ಇಚ್ಛೆಯನ್ನು ಹೊಂದಿದವನಾಗಿದ್ದನು. ಜಿತೇಂದ್ರಿಯನಾಗಿದ್ದು ಆತನು
ವಿವಿಧ ಯಮ-ನಿಯಮಗಳನ್ನು ಕೂಲಂಕಶವಾಗಿ ಅನುಸರಿಸುತ್ತಿದ್ದನು. ಈ
ರೀತಿಯಾಗಿ ಒಂದು ಸಾವಿರ ವರ್ಷಗಳವರೆಗೆ ಉಗ್ರ ತಪಸ್ಸನ್ನು ಕೈಗೊಂಡನು.
ಆತನ ತಪಸ್ಸಿನಿಂದ ಪ್ರಸನ್ನನಾದ ಬ್ರಹ್ಮದೇವನು ಇಂದ್ರಾದಿ ದೇವತೆಗಳನ್ನೊಳಗೊಂಡು
ಈ ಮುನಿಯ ಆಶ್ರಮಕ್ಕೆ ಬಂದನು. ಮತ್ತು-
ಪರಿತುಷ್ಟೋsಸ್ಮಿ ತೇ ವತ್ಸ ಕರ್ಮಣಾನೇನ ಸುವ್ರತ ‖೧೪‖
ವರಂ ವೃಣೀಷ್ಟ ಭದ್ರಂ ತೇ ವರಾರ್ಹಸ್ತ್ವಂ ಮಹಾಮತೇ ‖೧೫‖

“ವತ್ಸನೇ, ಸದಾಚಾರಸಂಪನ್ನನೇ, ಈ ನಿನ್ನ ಆಚರಣೆಯಿಂದ ನಾನು
ಪ್ರಸನ್ನನಾಗಿದ್ದೇನೆ. ಹೇ ಮಹಾಮತಿಯೇ, ವರವನ್ನು ಪಡೆಯಲು ನೀನು
ಅರ್ಹನಾಗಿರುವೆ; ನೀನು ಈಗ ವರವನ್ನು ಕೇಳು! ನಿನಗೆ ಶುಭವಾಗಲಿ." ಈ
ರೀತಿಯ ಬ್ರಹ್ಮದೇವನ ಮಾತುಗಳನ್ನು ಕೇಳಿ ವೈಶ್ರವಣನು ಹೀಗೆ ಉತ್ತರಿಸಿದನು:
ಭಗವಂಲ್ಲೋಕಪಾಲತ್ವಮಿಚ್ಛೇಯಂ ಲೋಕರಕ್ಷಣಮ್ ‖೧೬‖

“ಭಗವಂತನೇ ಲೋಕರಕ್ಷಣವು ಯಾವುದರಿಂದ ಸಾಧ್ಯವೋ
ಅಂತಹ ಲೋಕಪಾಲಕ ಸ್ಥಾನವು ನನಗೆ ಪ್ರಾಪ್ತವಾಗಬೇಕು! ಎಂಬ ಇಚ್ಛೆ