ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೩೪೯


ಇಂಥ ಬ್ರಹ್ಮಹತ್ಯೆಯು ಇಂದ್ರನನ್ನು ಬಿಟ್ಟು ಬೇರೆ ವಸತಿಸ್ಥಾನವನ್ನು ಬೇಡಿಕೊಂಡಿತು.
ಆಗ ದೇವತೆಗಳಿಗೆ ಬ್ರಹ್ಮಹತ್ಯೆಯೂ ಹೀಗೆಂದಿತು:
ಏಕೇನಾಂಶೇನ ವತ್ಸ್ಯಾಮಿ ಪೂರ್ಣೋದಾಸು ನದೀಷು ವೈ |
ಚತುರೋ ವಾರ್ಷಿಕಾನ್ಮಾಸಾದ್ದರ್ಪಘ್ನೀ ಕಾಮಚಾರಿಣೀ ‖೧೩‖
ಭೂಮ್ಯಾಮಹಂ ಸರ್ವಕಾಲಮೇಕೇನಾಂಶೇನಾ ಸರ್ವದಾ |
ವಸಿಷ್ಯಾಮಿ ನ ಸಂದೇಹಃ ಸತ್ಯೇನೈತದ್ಬ್ರವೀಮಿ ವಃ ‖೧೪‖
ಯೋsಯಮಂಶಸ್ತೃತೀಯೋ ಮೇ ಸ್ತ್ರೀಷಿ ಯೌವನಶಾಲಿಷು |
ತ್ರಿರಾತ್ರಂ ದರ್ಪಪೂರ್ಣಾಸು ವಸಿಷ್ಯೇ ದರ್ಪಘಾತಿನೀ ‖೧೫‖
ಹಂತಾರೋ ಬ್ರಾಹ್ಮಣಾನ್ಯೇ ತು ಮೃಷಾಪೂರ್ವಮದೂಷಕಾನ್ |
ತಾಂಶ್ಚತುರ್ಥೇನ ಭಾಗೇನ ಸಂಶ್ರಯಿಷ್ಯೇ ಸುರರ್ಷಭಾಃ ‖೧೬‖
ಪ್ರತ್ಯೂಚುಸ್ತಾಂ ತತೋ ದೇವಾ ಯಥಾ ವದಸಿ ದುರ್ವಸೇ |
ತಥಾ ಭವತು ತತ್ಸರ್ವಂ ಸಾಧಯಸ್ವ ಯದೀಪಿತಮ್ ‖೧೭‖

“ನೀರಿಗಿದ್ದ ಗರ್ವವನ್ನು ಅಡಗಿಸುವ, ಸ್ವೇಚ್ಛಾವರ್ತಿ ಬ್ರಹ್ಮಹತ್ಯೆಯಾದ
ನಾನು, ಮಳೆಗಾಲದ ನಾಲ್ಕು ತಿಂಗಳವರೆಗೆ ತುಂಬಿ ಹರಿಯುವ ನದಿಗಳಲ್ಲಿ
ವಾಸವಾಗಿರುವೆನು. ನನ್ನ ಕಾಲುಭಾಗವು ಸದಾಕಾಲವೂ ಭೂಮಿಯಲ್ಲಿ 'ಊಷರ'
ರೂಪದಿಂದ ಇರುವದು. ಇದು ನನ್ನ ಸತ್ಯವಚನವಾಗಿದೆ. ಇನ್ನು ಮೂರನೆಯ
ಕಾಲುಭಾಗವು ವಿಷಯವಾಸನಾಯುಕ್ತ ತರುಣ ಸ್ತ್ರೀಯರಲ್ಲಿ, ಪ್ರತಿಮಾಸದ ಮೂರು
ದಿನಗಳ ಕಾಲ ವಾಸವಿರುವದು. ಈ ಕಾಲದಲ್ಲಿ ನಾನು ಅವರಲ್ಲಿಯ ಸಮಾಗಮ
ಸುಖವನ್ನು ಇಲ್ಲದಂತೆ ಮಾಡುವೆನು. ಸುರಶ್ರೇಷ್ಠರೇ, ಅದೇ ರೀತಿ ನಿರಪರಾಧಿಗಳಾದ
ಬ್ರಾಹ್ಮಣರ ಮೇಲೆ ವೃಥಾ ಆರೋಪವನ್ನು ಮಾಡುವವರಲ್ಲಿ ಇಲ್ಲವೆ ಅವರ
ಹತ್ಯೆಗೆ ಕಾರಣೀಭೂತರಾದವರಲ್ಲಿ ನನ್ನ ಇನ್ನುಳಿದ ನಾಲ್ಕನೆಯ ಕಾಲುಭಾಗವು
ಉಳಿಯುವದು.”
ಆಗ ದೇವತೆಗಳು “ಎಲೈ ದುರ್ವಾಸ ಬ್ರಹ್ಮಹತ್ಯೆಯೇ, ನಿನ್ನ ಇಚ್ಛೆಯಂತಾಗಲಿ!
ನಿನ್ನ ಇಚ್ಛೆಯಿದ್ದಂತೆ ನೀನು ವಾಸವಿರು!” ಎಮದು ನುಡಿದರು. ಇಂದ್ರನಿಗಿದ್ದ
ಬ್ರಹ್ಮಹತ್ಯೆಯ ಪಾತಕವು ತೊಲಗಿದ್ದರಿಂದ ದೇವತೆಗಳು ನಿಶ್ಚಿಂತರಾದರು.
ಇಲ್ಲಿ ವರವೆಂಬ ಶಬ್ದ ಬಂದಿರದಿದ್ದರೂ, ಇದು 'ಯಾಚಿತ' ವರವಾಗಿದೆ.