ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಗಮ್ಯತಾಮಿತಿ ಯೋವಾಚ ಆಗಚ್ಛ ತ್ವಂ ಸ್ಮರೇ ಯದಾ |
ಸಿದ್ಧಾನಾಮ ಚ ಗತೌ ಸೌಮ್ಯ ಮಾ ವಿಷಾದೇನ ಯೋಜಯ ‖೧೪‖
ಪ್ರತಿಘಾತಶ್ಚ ತೇ ಮಾ ಭೂದ್ಯಥೇಷ್ಟಂ ಗಚ್ಛತೋ ದಿಶಃ ‖೧೫‖


“ಈಗ ಹೋಗು! ನಾನು ಸ್ಮರಿಸಿದಾಗ ಮರಳಿ ಬಾ! ಹೇ ಶಾಂತ ವಿಮಾನವೇ,
ಆಕಾಶಮಾರ್ಗದಲ್ಲಿ ನೀನು ಸುಖವಾಗಿರು! ನಿನಗೆ ಇಷ್ಟವಿದ್ದತ್ತ ಚಲಿಸುವಾಗ
ನಿನಗೆ ಯಾರಿಂದಲೂ ಆತಂಕವುಂಟಾಗಲಾರದು!”

೬. ಗಂಗೆಗೆ ಮಾಡಿಕೊಂಡ ಹರಕೆ

ಅಯೋಧ್ಯಾಕಾಂಡ/೫೨

ಗುಹನನ್ನು ಬೀಳ್ಕೊಟ್ಟನಂತರ ರಾಮ ಲಕ್ಷ್ಮಣ ಸೀತೆಯರು ಗಂಗಾನದಿಯನ್ನು
ದಾಟಲೋಸುಗ ನೌಕೆಯಲ್ಲಿ ಕುಳಿತರು. ತಮ್ಮ ಕಲ್ಯಾಣಕ್ಕಾಗಿ ರಾಮನು ಒಂದು
ಸೂಕ್ತವಾದ ಮಂತ್ರವನ್ನು ಜಪಿಸಿದನು. ಆಚಮನ ಮಾಡಿ ಎಲ್ಲರೂ ಗಂಗೆಗೆ
ನಮಸ್ಕರಿಸಿದರು. ಆಗ ಅಂಬಿಗನು ನೌಕೆಯನ್ನು ಸಾಗುಮಾಡಿದನು ನೌಕೆಯು
ಭಾಗೀರಥಿಯ ಮಧ್ಯಭಾಗಕ್ಕೆ ಬಂದಾಗ ಸೀತೆಯು ಕೈಜೋಡಿಸಿ ಗಂಗೆಯನ್ನು
ಪ್ರಾರ್ಥಿಸಿದಳು.
ಪುತ್ರೋ ದಶರಥಸ್ಯಾಯಂ ಮಹಾರಾಜಸ್ಯ ಧೀಮತಃ |
ನಿದೇಶಂ ಪಾಲಯತ್ವೇನಂ ಗಂಗೇ ತ್ವದಭಿರಕ್ಷಿತಃ ‖೮೩‖
ಚತುರ್ದಶ ಹಿ ವರ್ಷಾಣಿ ಸಮಗ್ರಾಣ್ಯುಷ್ಯ ಕಾನನೇ |
ಭ್ರಾತ್ರಾ ಸಹ ಮಯಾ ಚೈವ ಪುನಃ ಪ್ರತ್ಯಾಗಮಿಷ್ಯತಿ ‖೮೪‖
ತತಸ್ತ್ವಾಂ ದೇವಿ ಸುಭಗೇ ಕ್ಷೇಮೇಣ ಪುನರಾಗತಾ |
ಯಕ್ಷ್ಯೇ ಪ್ರಮುದಿತಾ ಗಂಗೇ ಸರ್ವಕಾಮಸಮೃದ್ಧಿನೀ ‖೮೫‖
ತ್ವಂ ಹಿ ತ್ರಿಪಥಗೇ ದೇವಿ ಬ್ರಹ್ಮಲೋಕಂ ಸಮಕ್ಷಸೇ |
ಭಾರ್ಯಾ ಚೋದಧಿರಾಜಸ್ಯ ಲೋಕೇsಸ್ಮಿನ್ಸಂಪ್ರದುಶ್ಯಸೇ ‖೮೬‖
ಸಾ ಸ್ವಾಂ ದೇವಿ ನಮಸ್ಯಾಮಿ ಪ್ರಶಂಸಾಮಿ ಚ ಶೋಭನೇ |
ಪ್ರಾಪ್ತರಾಜ್ಯೇ ನರವ್ಯಾಘ್ರೇ ಶಿವೇನ ಪುನರಾಗತೇ ‖೮೭‖
ಗವಾಂ ಶತಸಹಸ್ರಂ ಚ ವಸ್ತ್ರಾಣ್ಯನ್ನಂ ಚ ಪೇಶಲಮ್ |
ಬ್ರಾಹ್ಮಣೇಭ್ಯಃ ಪ್ರದಾಸ್ಯಾಮಿ ತವ ಪ್ರಿಯಚಿಕೀರ್ಷಯಾ ‖೮೮‖
ಸುರಾಘಟಸಹಸ್ರೇಣ ಮಾಂಸಭೂತೌದದೇನ ಚ |