ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಶೀರ್ವಾದ, ಹರಕೆಗಳು

೩೬೩


ಧರ್ಮ೦ ಪ್ರಾಪ್ಸ್ಯಸಿ ಧರ್ಮಜ್ಞಯಶಶ್ಚ ವಿಪುಲಂ ಭುವಿ |
ರಾಮೇ ಪ್ರಸನ್ನೇ ಸ್ವರ್ಗಂ ಚ ಮಹಿಮಾನಂ ತಥೋತ್ತಮಮ್ ‖೨೯‖


“ಹೇ ಧರ್ಮಜ್ಞನೇ, ನಿನಗೆ ಧರ್ಮವು ಪ್ರಾಪ್ತವಾಗುವದು. ಈ ಭೂಲೋಕದಲ್ಲಿ
ನಿನ್ನ ಕೀರ್ತಿಯು ಹರಡುವದು. ರಾಮನು ಪ್ರಸನ್ನನಾಗುವದರಿಂದ ನಿನಗೆ
ಸ್ವರ್ಗಪ್ರಾಪ್ತಿಯಾಗಿ ನಿನ್ನ ಕಈರ್ತಿಯು ಉತ್ತಮವಾಗುವದು. ಎಲೈ
ಸುಮಿತ್ರಾನಂದನನೇ, ನಿನಗೆ ಶುಭವಾಗಲಿ” ಎಂದು, ಆನಂತರ ಸಿತೆಯನ್ನುದ್ದೇಶಿಸಿ
ಆಶೀರ್ವಾದಿಸುತ್ತ ಇಂತೆಂದನು-
ಕರ್ತವ್ಯೋ ನ ತು ವೈದೇಹಿ ಮನುಷ್ತ್ಯಾಗಮಿಮಂ ಪ್ರತಿ |
ರಾಮೇಣೇದಂ ವಿಶುದ್ಧ್ಯರ್ಥಂ ಕೃತಂ ವೈ ತ್ವದ್ಧಿತೈಷಿಣಾ ‖೩೫‖
ಸುದುಷ್ಕರಮಿದಂ ಪುತ್ರಿ ತವ ಚಾರಿತ್ರಲಕ್ಷಣಮ್ |
ಕೃತಂ ಯತ್ತೇsನ್ಯನಾರೀಣಾಂ ಯಶೋಹ್ಯಭಿಭವಿಷ್ಯತಿ ‖೩೬‖
ನ ತ್ವಂ ಕಾಮಂ ಸಮಾಧೇಯಾ ಭರ್ತುಶುಶ್ರೂಣಷಣ ಪ್ರತಿ |
ಅವಶ್ಯಂ ತು ಮಯಾ ವಾಚ್ಯಮೇಷ ತೇ ದೈವತಂ ಪರಮ್ ‖೩೭‖


“ಎಲೈ ಸೀತೆಯೇ, ಈ ಮೊದಲು ರಾಮನು ನಿನ್ನನ್ನು ತ್ಯಜಿಸಿದ್ದಕ್ಕಾಗಿ
ಆತನಲ್ಲಿ ಕೋಪವನ್ನಿಟ್ಟುಕೊಳ್ಳಬೇಡ! ನಿನ್ನ ಹಿತವನ್ನೇ ಲಕ್ಷಿಸಿ ರಾಮನು ನಿನ್ನ
ಶುದ್ಧತೆಯನ್ನು ವ್ಯಕ್ತಪಡಿಸಲು ಈ ರೀತಿ ಮಾಡಿದನು. ಎಲೈ ಮಗಳೇ, ನಿನ್ನ
ಆಚರಣೆಯು ಬಲು ದುಸ್ತರವಾದದ್ದು. ಈ ನನ್ನ ಅಚರಣೆಯು ಮಿಕ್ಕೆಲ್ಲ ಪತಿವ್ರತೆಯರ
ಕೀರ್ತಿಯನ್ನು ಮೀರಿಸಿದೆ. ಪತಿಸೇವೆಯ ಬಗ್ಗೆ ನಾನು ನಿನಗೆ ಹೇಳಬೇಕೆಂತಿಲ್ಲ.
ರಾಮನೇ ನಿನ್ನ ಮುಖ್ಯ ದೈವತವೆಂಬುದನ್ನು ಹೇಳಬಯಸುತ್ತೇನೆ.

೫. ಪುಷ್ಪಕವಿಮಾನಕ್ಕೆ ರಾಮನ ಆಶೀರ್ವಾದ

ಉತ್ತರಕಾಂಡ/೪೧

ಕುಬೇರನ ಆಜ್ಞೆಯಂತೆ ಪುಷ್ಪಕವಿಮಾನವು ರಾಮನ ಬಳಿಗೆ ಬಂದಿತು.
ಕುಬೇರನ ವಿನಂತಿಯನುಸಾರ ರಾಮನು ಅದನ್ನು ಸ್ವಾಗತಿಸಿ ಸ್ವೀಕರಿಸಿದನು.
ಭತ್ತದ ಅರಳು, ಹೂಗಳು, ಸುಗಂಧದ್ರವ್ಯಗಳಿಂದ ಅದನ್ನು ಪೂಜಿಸಿ ರಾಮನು
ಹೀಗೆಂದನು-