ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೩೯೫


೩೨. ಕೇಕಯ

ಈತನು ಕೇಕಯ ದೇಶದ ರಾಜನಾಗಿದ್ದನು. ಈತನಿಗೆ 'ಅಶ್ವಪತಿ' ಎಂಬುದು
ಅಡ್ಡ ಹೆಸರು (ಉಪನಾಮ) ಎಂದೆನಿಸುತ್ತದೆ. ಇವನಿಗೆ ಯುಧಾಜಿತ ಮತ್ತು
ಕೈಕೇಯಿ ಎಂಬ ಇಬ್ಬರು ಮಕ್ಕಳಿದ್ದರು. ಇವನ ಹೆಂಡತಿಯು ಬಲು ಧೈರ್ಯವಂತೆ;
ಯಾರ ಪರಿವೆಯೂ ಇವಳಿಗಿರಲಿಲ್ಲ.

೩೩. ಕೇಶಿನಿ

ಇವಳು ವಿದರ್ಭದೇಶದ ರಾಜಕನ್ಯೆ ಮತ್ತು ಸಗರನ ಹಿರಿಯ ಹೆಂಡತಿ.
ಇವಳ ಮಗನ ಹೆಸರು ಅಸಮಂಜ.

೩೪. ಕೇಸರಿ

ಈತನು ಒಬ್ಬ ವಾರಪ್ರಮುಖನಾಗಿದ್ದು, ಅಂಜನಿಯ ಪತಿಯಾಗಿದ್ದನು.
ಸುಮೇರು ಎಂಬ ಪರ್ವತದ ಮೇಲೆ ಇವನ ವಾಸ. ಋಷಿಗಳಿಗೆ ಕಾಟ ಕೊಡುವ
ಶಂಬಸಾದನ ಎಂಬ ಅಸುರನನ್ನು, ಋಷಿಗಳ ಆಜ್ಞೆಯ ಮೇರೆಗೆ ಇವನು ಕೊಂದು
ಬಿಟ್ಟನು. ಇದರಿಂದ ಸಂತೋಷಗೊಂಡ ಋಷಿಗಳು 'ನಿನಗೆ ಸುಸ್ವಭಾವದವನಾದ,
ಭಗವದ್ಭಕ್ತನೆನಿಸುವ, ಬಲಶಾಲಿಯಾದ ಒಬ್ಬ ಮಗನು ಹುಟ್ಟುವನು' ಎಂದು
ಆಶೀರ್ವದಿಸಿದರು. ಈ ಪುತ್ರನೇ ಹನುಮಾನನು. ಇಂದ್ರಜಿತು ಇವನ ಮೇಲೆ
ಏರಿಹೋಗಿ ಕೆಡವಿದನು. ಯುದ್ಧವು ಕೊನೆಗೊಂಡನಂತರ ರಾಮನು ಇವನನ್ನು
ಸತ್ಕರಿಸಿದನು.

೩೫. ಕೈಕಸಿ

ಈಕೆಯು ಸುಮಾಲಿ ರಾಕ್ಷಸನ ಕನ್ಯೆ ಮತ್ತು ವಿಶ್ರವಸನ ಹೆಂಡತಿ. ಇವಳ
ಮದುವೆಯ ಅನೇಕ ಪ್ರಸ್ತಾಪಗಳು ಬಂದರೂ ಸುಮಾಲಿಯು ಒಪ್ಪುತ್ತಿರಲಿಲ್ಲ.
ಹೀಗಾಗಿ ಈಕೆಯ ಮದುವೆಯ ಬೇಡಿಕೆಗಳೇ ಬರದಂತಾದವು; ಅವಳ ಮದುವೆಯ
ಪ್ರಾಯವು ಬೆಳೆಯುತ್ತಲೇ ಹೋಯಿತು. ಸುಮಾಲಿಯು ಆಗ ಕೈಕಸಿಗೆ 'ನೀನು
ವಿಶ್ರವನನ್ನು ಮದುವೆಯಾಗು!' ಎಂದು ಹೇಳಿದನು. ಹೊತ್ತು ಸಮಯವನ್ನು
ಯೋಚಿಸದೆ ಕೈಕಸಿಯು ಪಿತನ ಹೇಳಿಕೆಯಂತೆ ಕೆಟ್ಟ ಗಳಿಗೆಯ ಸಂಜೆಯಲ್ಲಿ
ವಿಶ್ರವನ ಮುಂದೆ ಹೋಗಿ ನಿಂತಳು. ಅಗ್ನಿಹೋತ್ರವು ನಡೆದ ಆ ಗಳಿಗೆಯು
ಕ್ರೂರವಾಗಿತ್ತು. ಮುನಿಯು ಅವಳ ಬರುವಿಕೆಯ ಇಂಗಿತಾರ್ಥವನ್ನು ಅರಿತು