ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಅದಕ್ಕಾಗಿ ಅವರಿಗೆ 'ನೀವು ಮೇಂಚರಾಗಿರಿ!” ಎಂದು ವಿಶ್ವಾಮಿತ್ರನು ಶಾಪ
ಕೊಟ್ಟನು. ಮಿಕ್ಕ ಐವತ್ತು ಪುತ್ರರು ಶುನಃಶೇಫನಿಗೆ ಯೋಗ್ಯ ಸನ್ಮಾನವನ್ನು ಕೊಡಲು ಒಪ್ಪಿದರು. ವಿಶ್ವಾಮಿತ್ರನು ಅವರಿಗೆ ಆಶೀರ್ವಾದವನ್ನು ಕೊಟ್ಟನು. ಹಿರಿಯ ಮಕ್ಕಳ ಗೋತ್ರವು ವಿಶ್ವಾಮಿತ್ರವೆಂದಿದ್ದು ಮಿಕ್ಕ ಐವತ್ತು ಚಿಕ್ಕವರ ಗೋತ್ರವು “ಕೌಶಿಕ'ವೆಂದಿದೆ ಎಂದು ಭಾಗವತಪುರಾಣದಲ್ಲಿ ಹೇಳಿದ್ದಾರೆ. ತನ್ನ ಇಚ್ಛೆಗೆ ವಿರುದ್ಧವಾಗಿ ವರ್ತಿಸಿದ ಮಕ್ಕಳನ್ನು ವಿಶ್ವಾಮಿತ್ರನು ಅಶ್ವ ಪುಂಡ್ರ ಶಬರ, ಪುಲಿಂದ, ಮೂತಿಬರನ್ನಾಗಿ ಪರಿವರ್ತಿಸಿದನೆಂದು ಐತರೇಯ ಬ್ರಾಹ್ಮಣದಲ್ಲಿದೆ. ವಾಲ್ಮೀಕಿ ರಾಮಾಯಣದಲ್ಲಿ ದೃಢನೇತ್ರ, ಮಧುಷ್ಟಂದ, ಮಹಾರಥ ಹಾಗೂ ಹವಿಸ್ಪಂದ ಇಷ್ಟೇ ಹೆಸರುಗಳು ಕಂಡುಬರುತ್ತವೆ (ಬಾಲಕಾಂಡ/೫೭೦೪).

೧೨೭. ವಿಷ್ಣು 'ವಿಷ್ಣು' ಎಂಬುದು ಅನಾದಿ ಅನಂತನಾದ ಪರಮೇಶ್ವರನ ಹೆಸರಾಗಿದೆ. ಸರ್ವರ ನಿರ್ಮಾಪಕನೂ ಸರ್ವಾಧಾರನೂ ಅಹುದು. ದುಷ್ಟರನ್ನು ಸಂಹರಿಸಿ ಸಜ್ಜನರನ್ನು ಸಂರಕ್ಷಿಸುವದೇ ಈತನ ಪ್ರಮುಖಕಾರ್ಯ, ಶಂಖ, ಚಕ್ರ, ಗದೆ, ಪದ್ಯ ಇವು ವಿಷ್ಣುವಿನ ಆಯುಧ-ಭೂಷಣಗಳಿದ್ದು, ಪೀತಾಂಬರ, ವನಮಾಲೆ, ಕಿರೀಟಕುಂಡಲಗಳು, ಶ್ರೀವತ್ವ ಇವೆಲ್ಲವೂ ಆಭೂಷಣ, ಲಾಂಛನಗಳಾಗಿವೆ. ಇವನು ಇಂದ್ರನ ಸಂಬಂಧಿಕನಾಗಿದ್ದಾನೆ. 'ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಟತಾಮ್” ಎಂಬ ಆತನ ನುಡಿಯನ್ನು ಸಿದ್ಧಪಡಿಸಲು ಈತನು ಆಗಾಗ ಅವತಾರಗಳನ್ನು ಧರಿಸುತ್ತಾನೆ. ವಿಷ್ಣುವಿನ ದಶಾವತಾರಗಳು ಪ್ರಖ್ಯಾತವಾಗಿವೆ. ಇವುಗಳಲ್ಲಿ ರಾಮಾವತಾರವು ಏಳನೆಯ ಅವತಾರ. ರಾವಣನ ಮಿತಿಮೀರಿದ ಘೋರವರ್ತನೆಯಿಂದ ತೊಂದರೆಗೊಳಗಾದ ಮತ್ತು ಭಯಗೊಂಡ ಜನರ ಸಂಕಷ್ಟಗಳನ್ನು ಪರಿಹರಿಸಲು ವಿಷ್ಣುವು ಮಾನವಾ ವತಾರವನ್ನು ತಳೆದನು. ಬ್ರಹ್ಮದೇವನ ವರದಂತೆ ಮಾನವನೊಬ್ಬನನ್ನು ಬಿಟ್ಟು ಇತರರಿಂದ ರಾವಣನು ಸಾಯುವಂತಿರಿಲ್ಲ. ದಶರಥನು ಪಿತನಾಗಲು ಅರ್ಹ ನಿದ್ದಾನೆಂದು ತಿಳಿದು ರಾಮನೆಂದು ಅವನ ಪುತ್ರನಾಗಿ ವಿಷ್ಣುವು ಜನ್ಮ ತಾಳಿದನು. ಅಗಸ್ಯನು ರಾಮನಿಗೆ ಕೊಟ್ಟ ಧನುಸ್ಸು ವಿಷ್ಣುವಿನದಾಗಿತ್ತು. ರಾವಣನು ಇಂದ್ರನ ಮೇಲೆ ದಾಳಿ ಮಾಡಿದಾಗ ವಿಷ್ಣುವು 'ನಾನು ಯೋಗ್ಯಸಮಯದಲ್ಲಿ ರಾವಣನನ್ನು ವಧಿಸುವೆ' ಎಂಬ ಆಶ್ವಾಸನೆಯನ್ನು ಕೊಟ್ಟಿದ್ದನು. ದೇವ-ದೈತ್ಯರಲ್ಲಿಯ ಕಾಳಗದಲ್ಲಿ ಬೃಗುವಿನ ಪತ್ನಿಯು ದೈತ್ಯರಿಗೆ ಆಶ್ರಯವನ್ನು ಕೊಟ್ಟ ಕಾರಣ ವಿಷ್ಣುವು ಅವಳ