ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ್ಯಕ್ತಿ ವಿಶೇಷ ೪೭೧ ಶಿರಚ್ಛೇದವನ್ನು ಮಾಡಿದನು. ಆಗ ಈತನಿಗೆ ಬೃಗುವಿನಿಂದ ಶಾಪ ದೊರೆಯಿತು. ಹೀಗಿದ್ದರೂ ಈತನಿಗೆ ದೊರೆತ ಶಾಪವು ಲೋಕಕಲ್ಯಾಣದ ದೃಷ್ಟಿಯಲ್ಲಿ ವರ ವೆಂದೆನಿಸಿತು. ವೃತ್ರಾಸುರ ರಾಕ್ಷಸನನ್ನು ವಧಿಸಲು ವಿಷ್ಣುವು ತನ್ನ ಒಂದು ಭಾಗವನ್ನು ಇಂದ್ರನಿಗೂ ತನ್ನ ಒಂದು ಅಂಶವನ್ನು ವಜ್ರಾಯುಧಕ್ಕೂ ಇನ್ನೊಂದು ಅಂಶವನ್ನು ಭೂಮಿಗೂ ಕೊಟ್ಟು ಇಂದ್ರನಿಂದ ಆತನ ವಧೆಯಾಗುವಂತೆ ಮಾಡಿದನು. ಈ ವಧೆಯಿಂದ ಬ್ರಹ್ಮಹತ್ಯೆಯು ಇಂದ್ರನ ಬೆನ್ನಟ್ಟಿತು. ಈ ಪಾಪದಿಂದ ಮುಕ್ತಿಪಡೆಯಲು ವಿಷ್ಣುಯಾಗವನ್ನು ಮಾಡಲು ಇಂದ್ರನಿಗೆ ಹೇಳಿದನು. ರಾಮನು ದೇಹ ಸಹಿತ ವಿಷ್ಣುವಿನ ತೇಜದಲ್ಲಿ ಐಕ್ಯನಾದನು. ಲಕ್ಷ್ಮಿಯು ವಿಷ್ಣುವಿನ ಪತ್ನಿ. ೧೨೮. ವೇದವತಿ ಕುಶಧ್ವಜನಾದ ಜನಕ ಮತ್ತು ಮಾಲವತಿ ಈ ದಂಪತಿಗಳ ಮಗಳಾಗಿ ವೇದವತಿ ಹುಟ್ಟಿದಳು. ಇವಳು ಹುಟ್ಟಿದ ಕ್ಷಣವೇ ವೇದಧ್ವನಿಯನ್ನು ಉಚ್ಚರಿಸಿದಳು. ಆ ಕಾರಣ ಇವಳಿಗೆ ವೇದವತಿ ಎಂಬ ಹೆಸರು ಬಂದಿತು. ಕುಶಧ್ವಜನು ಇವಳ ವಿವಾಹವನ್ನು ವಿಷ್ಣುವಿನೊಡನೆ ಮಾಡಬೇಕೆಂದು ನಿಶ್ಚಯಿಸಿದ್ದನು. ಆದ್ದರಿಂದ ಬೇರೆ ವರಗಳಿಂದ ಬೇಡಿಕೆ ಬಂದರೂ ಅವನ್ನೆಲ್ಲ ನಿರಾಕರಿಸಹತ್ತಿದನು. ಶಂಭು ಎಂಬ ರಾಕ್ಷಸನಿಗೆ ಈ ರೀತಿ ನಿರಾಕರಿಸಿದಾಗ ಅವನು ಕೋಪಗೊಂಡು ಕುಶಧ್ವಜನನ್ನು ಕೊಂದುಹಾಕಿದನು. ಕುಶಧ್ವಜನ ಹೆಂಡತಿ ಸತಿಹೋದಳು. ಆಗ ಪುಷ್ಕರತೀರ್ಥದಲ್ಲಿ ವೇದವತಿ ತಪಸ್ಸನ್ನಾಚರಿಸಹತ್ತಿದಳು. 'ಮುಂದಿನ ಜನ್ಮದಲ್ಲಿ ವಿಷ್ಣುವು ನಿನ್ನ ಪತಿಯಾಗುವನು' ಎಂದು ಆಕಾಶವಾಣಿಯಾಯಿತು. ಅದೇ ಸಮಯಕ್ಕೆ ರಾವಣನು ವೇದವತಿಯನ್ನು ಮದುವೆಯಾಗಲು ವಿನಂತಿಸಿದನು. ಅವಳು ಈ ಇಚ್ಛೆಯನ್ನು ನಿರಾಕರಿಸಿದಳು. ಆಗ ರಾವಣನು ವೇದವತಿಯ ಕೇಶಪಾಶವನ್ನು ಹಿಡಿದು ಎಳೆದನು. ಅದನ್ನು ಕಿತ್ತುಬಿಟ್ಟು ಬಿಡಿಸಿಕೊಂಡ ವೇದವತಿಯು ಅಗ್ನಿಪ್ರವೇಶವನ್ನು ಮಾಡಿದಳು. ತನ್ನ ತಪೋಬಲವು ಕಡಿಮೆಯಾಗ. ಬಾರದೆಂದು ಅವಳು ರಾವಣನಿಗೆ ಶಾಪವನ್ನು ಉಚ್ಚರಿಸಲಿಲ್ಲ. ಆದರೂ ಅವಳು ರಾವಣನನ್ನು ಉದ್ದೇಶಿಸಿ ಆಡಿದ ನುಡಿಗಳು ಶಾಪಸಮನಾಗಿವೆ. ೧೨೯, ಶತಾನಂದ ಇವನು ಗೌತಮನ ಮತ್ತು ಅಹಲ್ಯ ಇವರ ಜೇಷ್ಠಪುತ್ರನು. 'ನನ್ನ ತಂದೆತಾಯಿಗಳ ಕಥೆಯನ್ನು ನೀವು ರಾಮಲಕ್ಷ್ಮಣರಿಗೆ ಹೇಳಿದೆಯಾ? ನನ್ನ ಒಣೆ.