ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ್ಯಕ್ತಿ ವಿಶೇಷ ೪೭೩ ೧೩೧. ಶಬರಿ ಪಂಪಾಸರೋವರದ ಪಶ್ಚಿಮ ದಡದ ಮತಂಗವನದಲ್ಲಿಯ ಒಂದು ಆಶ್ರಮದಲ್ಲಿ ಶಬರಿ ವಾಸವಾಗಿದ್ದಳು. ಇವಳು ರಾಮನ ಭಕ್ತ. ಕಾಡಿನಲ್ಲಿಯ ಹಣ್ಣು ಹಂಪಲಗಳಿಂದ ರಾಮನನ್ನು ಸ್ವಾಗತಿಸಿದಳು. ರಾಮನಿಗೆ ಆ ವನಪ್ರದೇಶವನ್ನು ತೋರಿಸಿದಳು. ಅಗ್ನಿಯಲ್ಲಿ ಸ್ವತಃ ಹವನ ಮಾಡಿಕೊಂಡು ಸ್ವರ್ಗವನ್ನು ಸೇರಿದಳು. ೧೩೨, ಶಂಬರ - ತಿಮಿಧ್ವಜನೆಂಬಾತನು ಶಂಬರನೆಂಬ ಹೆಸರಿನಿಂದ ಖ್ಯಾತನಿದ್ದನು. ದಂಡಕಾರಣ್ಯದಲ್ಲಿಯ ವೈಜಯಂತ ಎಂಬ ಪಟ್ಟಣದ ರಾಜನಾಗಿದ್ದನು. ದೇವಾಸುರರಲ್ಲಿಯ ಸಂಗ್ರಾಮದಲ್ಲಿ ಈತನು ಅಸುರರೊಂದಿಗೆ ಕೂಡಿಕೊಂಡು ಇಂದ್ರನೊಡನೆ ಯುದ್ಧ ಮಾಡುತ್ತಿದ್ದನು. ಇಂದ್ರನು ತನ್ನ ನೆರವಿಗಾಗಿ ದಶರಥರಾಜನನ್ನು ಕರೆಯಿಸಿಕೊಂಡನು. ಈ ಯುದ್ಧದಲ್ಲಿ ದಶರಥನು ಗಾಯಗೊಂಡನು. ಕೈಕೇಯಿ ಬಲುಚಾತುರ್ಯದಿಂದ ರಥವನ್ನು ಓಡಿಸಿ ತನ್ನ ಪತಿ ದಶರಥನ ಪ್ರಾಣರಕ್ಷಣೆ ಮಾಡಿದಳು. ೧೩.೩. ಶರಭಂಗ ಈತನು ದಂಡಕಾರಣ್ಯದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಗೌತಮನ ಕುಲಕ್ಕೆ ಸೇರಿದ ಒಬ್ಬ ಬ್ರಹ್ಮರ್ಷಿಯಾಗಿದ್ದನು. ವಿರಾಧನನ್ನು ವಧಿಸಿದನಂತರ ಈ ಋಷಿಯ ಆಶ್ರಮದತ್ತ ಬರುತ್ತಿರುವಾಗ ಪ್ರತ್ಯಕ್ಷ ಇಂದ್ರನು ಅಲ್ಲಿಗೆ ಬರುತ್ತಿರುವುದನ್ನು ಕಂಡನು. ಇಂದ್ರನ ರಥಾಶ್ವಗಳಿಂದ ಆತನ ಗುರುತು ಸಿಕ್ಕಿತೆಂದು ರಾಮನು ಸೀತೆ ಮತ್ತು ಲಕ್ಷ್ಮಣರಿಗೆ ತಿಳಿಸಿದನು. ಇಂದ್ರನು ಋಷಿಯನ್ನು ಕಂಡು ಹೊರಟುಹೋದ ನಂತರ ರಾಮನು ಋಷಿಗೆ ಇಂದ್ರನು ಬಂದ ಉದ್ದೇಶವನ್ನು ವಿಚಾರಿಸಿದನು. ಆಗ ಶರಭಂಗನು, 'ತಪಸ್ಸಿನಿಂದ ನನಗೆ ಲಭಿಸಿದ ಬ್ರಹ್ಮಲೋಕಕ್ಕೆ ನನ್ನನ್ನು ಕರೆದೊಯ್ಯಲು ಇಂದ್ರನು ಬಂದಿದ್ದನು. ಆದರೆ ನಿನ್ನಂತಹ ಅತಿಥಿಗಳು ನನ್ನನ್ನು ಕಾಣಲು ಬಂದಾಗ ಆತನೊಡನೆ ಹೋಗುವ ಇಚ್ಛೆ ನನಗಿರಲಿಲ್ಲ' ಎಂದು ರಾಮನಿಗೆ ಹೇಳಿ ತಾನು ಸಂಪಾದಿಸಿದ ಲೋಕಗಳನ್ನು ರಾಮನಿಗೆ ಕೊಡ ಬಯಸಿದನು. ರಾಮನು ವಿನಯಪೂರ್ವಕವಾಗಿ ಬೇಡವೆಂದು ತಿಳಿಸಿ ತಾನು ಸ್ವಂತ ತಪಸ್ಸಿನಿಂದ ಪಡೆಯುವೆನೆಂದು ಹೇಳಿದನು. ರಾಮನು ಎದುರಿನಲ್ಲಿಯೇ ಶರಭಂಗನು ತನ್ನ ದೇಹವನ್ನು ಅಗ್ನಿಗೆ ಸಮರ್ಪಿಸಿ ಬ್ರಹ್ಮಲೋಕಕ್ಕೆ ತೆರಳಿದನು.