ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ ೪೮೯ ಹಿಂದಿರುಗುವಾಗ ವಸಿಷ್ಠ ಪುತ್ರನಾದ ಶಕ್ತಿಯು ಈತನಿಗೆ ಎದುರಾದನು. ದಾರಿಯು ತೀರ ಇಕ್ಕಟ್ಟಿನದಿತ್ತು; ಇಬ್ಬರು ಮಾತ್ರ ದಾಟುವಂತಿತ್ತು. ಸೌದಾಸರಾಜನು ಶಕ್ತಿಗೆ ದಾರಿಯನ್ನು ಬಿಟ್ಟುಕೊಡಲು ಹೇಳಿದನು. ಶಕ್ತಿಯು ದಾರಿಯನ್ನು ಬಿಟ್ಟುಕೊಡದೇ “ಈ ಮಾರ್ಗವು ಬ್ರಾಹ್ಮಣರದಿದೆ; ರಾಜನು ಮೊದಲು ಬ್ರಾಹ್ಮಣನಿಗೆ ದಾರಿ ಕೊಡಬೇಕು' ಎಂಬ ಧರ್ಮೋಪದೇಶವನ್ನು ಮಾಡತೊಡಗಿದನು. ಆಗ ಸೌದಾಸನು ಈ ಶಕ್ತಿಯನ್ನು ರಾಕ್ಷಸನ ಆವೇಶದಿಂದ ಬಹಳಷ್ಟು ಹೊಡೆದನು. “ನೀನು ನರ ಮಾಂಸಭಕ್ಷಕ ರಾಕ್ಷಸನಾಗುವೆ' ಎಂದು ಶಕ್ತಿಯು ಸೌದಾಸನಿಗೆ ಶಾಪವನ್ನು ಕೊಟ್ಟನು. ವಿಶ್ವಾಮಿತ್ರನು ಇವನ ಯಜ್ಞದ ಪೌರೋಹಿತ್ಯವನ್ನು ಸ್ವೀಕರಿಸಿದ್ದರಿಂದ ವಸಿಷ್ಠ-ವಿಶ್ವಾಮಿತ್ರರಲ್ಲಿ ಹಗೆತನ ಉಂಟಾಯಿತು. ತನಗೆ ಶಾಪವನ್ನು ಕೊಟ್ಟ ವ್ಯಕ್ತಿಯು ವಸಿಷ್ಠನ ಪುತ್ರನೆಂದು ತಿಳಿದಾಗ ಸೌದಾಸನು ಉಃಶಾಪವನ್ನು ಬೇಡಿದನು. ಈ ನಂತರ 'ನರಮಾಂಸಭಕ್ಷಕನಾಗು!” ಎಂಬ ಶಾಪವನ್ನು ಕೊಟ್ಟ ಶಕ್ತಿಯಿಂದಲೇ ಸೌದಾಸನು ಹಕ್ಕಿನಿಂದ ನರಮಾಂಸವನ್ನು ಭಕ್ಷಿಸಲಾರಂಭಿಸಿದನು. ಇವನು ವಸಿಷ್ಠರ ನೂರು ಪುತ್ರರನ್ನು ತಿಂದುಹಾಕಿದನು. ಒಮ್ಮೆ ರತಿಕ್ರೀಡೆಯಲ್ಲಿದ್ದ ಬ್ರಾಹ್ಮಣ ದಂಪತಿಗಳ ಗಂಡನನ್ನು ಈತನು ತಿಂದುಬಿಟ್ಟನು. ಆಗ ಆ ಬ್ರಾಹ್ಮಣನ ಹೆಂಡತಿ 'ನೀನು ಸ್ತ್ರೀ ಸಮಾಗಮ ಮಾಡುವ ಸಮಯದಲ್ಲಿಯೇ ಮೃತಪಡುವೆ” ಎಂಬ ಶಾಪವಾಣಿಯನ್ನು ಸೌದಾಸನಿಗೆ ನುಡಿದಳು. ನಂತರ ಆಕೆಯು ಸತಿಹೋದಳು. 'ಮೈಮೇಲೆ ಗಂಗೆಯ ಜಲಬಿಂದುಗಳು ಬಿದ್ದನಂತರ ನೀನು ಶಾಪಮುಕ್ತನಾಗುವೆ' ಎಂಬ ಉಃಶಾಪವನ್ನು ವಸಿಷ್ಠನು ಈತನಿಗೆ ಕೊಟ್ಟಿದ್ದರೂ ಬ್ರಾಹ್ಮಣನ ಹೆಂಡತಿ “ನೀನು ಸದಾಕಾಲವೂ ರಾಕ್ಷಸನಾಗಿಯೇ ಉಳಿಯುವೆ' ಎಂಬ ಶಾಪವನ್ನು ಕೊಟ್ಟಿದ್ದಳು. ಆಗ ಸೌದಾಸನು ಈಕೆಗೆ 'ನೀನು ಮಕ್ಕಳೊಂದಿಗೆ ಪಿಶಾಚಿಯಾಗು' ಎಂದು ಪ್ರತಿಶಾಪವನ್ನು ಕೊಟ್ಟನು. ಗರ್ಗಮುನಿಯು ಗಂಗಾಜಲವನ್ನು ಎತ್ತಿಕೊಂಡು ಹೋಗುತ್ತಿದ್ದಾಗ ಗಂಗೋದಕದ ಸಿಂಪರಣೆಯಿಂದ ಇವರಿಬ್ಬರೂ ಮುಕ್ತರಾದರು. ಈತನ ಪತ್ನಿ ಮದಯಂತಿ. ಈಕೆಯು ಸೌದಾಸನನ್ನು ವಸಿಷ್ಠನಿಗೆ ಪ್ರತಿಶಾಪ ಕೊಡುವದರಿಂದ ಪರಾವೃತ್ತ ಗೊಳಿ ಸಿದನು. ರಾಕ್ಷಸತ್ವ ಮುಗಿದನಂತರ ವಸಿಷ್ಠನು ಈತನಿಗೆ ರಾಜ್ಯಾಭಿಷೇಕವನ್ನು ಮಾಡಿದನು. ಪತಿವ್ರತೆಯ ಶಾಪದ ಮೂಲಕ ಸೌದಾಸನಿಗೆ ಮಕ್ಕಳಾಗುತ್ತಿರಲಿಲ್ಲ. ಆಗ ವಸಿಷ್ಠನಿಂದ ಮದಯಂತಿಯಲ್ಲಿ ಗರ್ಭಸ್ಥಾಪನೆಯನ್ನು ಮಾಡಿಸಿದನು. ಈಕೆಯ ಆ ಪುತ್ರನೇ ಅಶ್ಯಕ. ಮಹಾಭಾರತದ ಅಶ್ವಮೇಧ ಪರ್ವದಲ್ಲಿ ಈ ಸೌದಾಸನ ಬಗ್ಗೆ ಇನ್ನೊಂದು ಪ್ರಸಂಗದ ಉಲ್ಲೇಖವಿದೆ: 'ಅಹಲ್ಯಯ ಅಪ್ಪಣೆಯಂತೆ ಗೌತಮನ ಶಿಷ್ಯನಾದ