ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦೮ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಮಾಡಿ ಅವಳ ಬಾಯಿಯಲ್ಲಿ ಪ್ರವೇಶಿಸಿ ಕೂಡಲೇ ಹೊರಗೆ ನುಸುಳಿಬಂದನು. ಆಗ ಸುರಸೆಗೆ ಈತನ ಬಲದ ಅರಿವಾಗಿ ಹನುಮಾನನಿಗೆ ಮುಂದಿನ ಕಾರ್ಯರ ಶುಭವನ್ನು ಕೋರಿದಳು. ೧೫೫, ಸೋಮದಾ ಸೋಮದೆಯು ಉರ್ಮಿಲೆ ಎಂಬ ಗಂಧರ್ವಿಯ ಮಗಳು. ಚೂಲಿ ಎಂಬ ಮುನಿಯ ತಪೋಬಲದಿಂದ ಇವಳಿಗೆ ಬ್ರಹ್ಮದತ್ತನೆಂಬ ಪುತ್ರನು ಹುಟ್ಟಿದನು. ಇವಳ ಉತ್ಕಷ್ಟ ಸೇವೆಯಿಂದ ಚೂಲಿಯು ಬಹುಸಂತೋಷಗೊಂಡು ಈಕೆಗೆ ಪ್ರಿಯವಾದುದನ್ನು ಕೊಡಬಯಸಿದನು. ಇವಳು ಯಾರನ್ನೂ ಮದುವೆಯಾಗಿರ ಲಿಲ್ಲ; ಮದುವೆಯಾಗಿ ಪತ್ನಿಯಾಗುವ ಇಚ್ಛೆಯೂ ಇರಲಿಲ್ಲ. ಹೀಗಿದ್ದರೂ ಆಕೆಗೆ ಒಬ್ಬ ಮಗನು ಬೇಕಿದ್ದನು. ಈಕೆಯು ಕೂಲಿಯ ಬಳಿ ತನಗೊಬ್ಬ ಪುತ್ರ ಬೇಕೆಂಬ ಇಚ್ಛೆಯನ್ನು ಪ್ರಕಟಿಸಿದಳು. ಆಗ ಆತನು ತನ್ನ ಶಕ್ತಿಯಿಂದ ಅವಳ ಇಚ್ಛೆಯನ್ನು ಪೂರೈಸಿದನು. ೧೫೬, ಸೌದಾಸ (ಕಲ್ಮಾಷಪಾದ) ಸೌದಾಸನು ಸುದಾಸನೆಂಬ ರಾಜನ ಮಗ. ಮತ್ಯಪುರಾಣದಲ್ಲಿ ಈತನು ಋತುಪರ್ಣ ರಾಜನ ಮಗನಾಗಿದ್ದನೆಂದು ಹೇಳಲಾಗಿದೆ. ವಸಿಷ್ಠನಿಗೆ ಶಾಪ ಕೊಡಲೆಂದು ಕೈಯಲ್ಲಿ ಹಿಡಿದ ಉದಕವನ್ನು ಈತನು ತನ್ನ ಸ್ವಂತದ ಪಾದಗಳ ಮೇಲೆ ಚೆಲ್ಲಿದನು. ಆಗ ಇವನ ಪಾದಗಳ ಬಣ್ಣವು ಚಿತ್ರವಿಚಿತ್ರವಾಯಿತು. ಅಂದಿನಿಂದ ಈತನು ಕಲ್ಮಾಷಪಾದನೆಂದು ಖ್ಯಾತಿಗೊಂಡನು. ವಸಿಷ್ಠನು ಈತನಿಗೆ ಶಾಪವನ್ನು ಕೊಟ್ಟ ಕಾರಣವು (ಶಾಪ ಕ್ರಮಸಂಖ್ಯೆ ೫೭ < ಸೌದಾಸ) ಬೇರೆ ಗ್ರಂಥಗಳಲ್ಲಿ, ವಾಲ್ಮೀಕಿಯು ಕೊಟ್ಟ ಕಾರಣಕ್ಕಿಂತ ಬೇರೆಯಾಗಿದೆ. ಸೌದಾಸರಾಜನು ರೇವಾ ಮತ್ತು ನರ್ಮದಾ ನದಿಗಳ ತೀರದಲ್ಲಿ ಬೇಟೆಗೆಂದು ಹೋಗಿದ್ದನು. ಆಗ ಒಂದು ಹೆಣ್ಣು ಮತ್ತು ಗಂಡು ಹುಲಿಯ ಜೋಡಿಯು ಕಾಮಕ್ರೀಡೆಯಲ್ಲಿದ್ದುದನ್ನು ಕಂಡನು. ಈ ಜೊತೆಯಲ್ಲಿಯ ಹೆಣ್ಣು ಹುಲಿಯನ್ನು ಈತನು ಕೊಂದನು. ಕೂಡಲೇ ಆ ಹೆಣ್ಣು ಹುಲಿಯು ಸಾಯುವ ಮೊದಲು ದೊಡ್ಡದಾಗಿ ರಾಕ್ಷಸ ರೂಪವನ್ನು ತಾಳಿ “ಎಂದಿಗಾದರೂ ಈ ಸೇಡನ್ನು ನಿನ್ನ ಮೇಲೆ ತೀರಿಸಿಕೊಳ್ಳುವೆ' ಎಂದು ಅಬ್ಬರಿಸಿ ಮಾಯವಾಯಿತು ಎಂದು ನಾರದಪುರಾಣದಲ್ಲಿದೆ. ಮಹಾಭಾರತದಲ್ಲಿ ರಾಕ್ಷಸನಾಗುವ ಕಾರಣವು ಬೇರೆಯಾಗಿದೆ. ಬೇಟೆಯಿಂದ