ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಥಳವಿಶೇಷ ೫೦೫ ೧೬. ಮಧುಪುರಿ (ಮಥುರಾ) ಈ ನಗರವು ಮಧುದೈತ್ಯನ ಮಗನಾದ ಲವಣನದಿತ್ತು. ಇದು ಯಮುನಾ ನದಿಯ ದಂಡೆಯಲ್ಲಿದೆ. ಈ ಪಟ್ಟಣಕ್ಕೆ ಮಧುರಾ, ಮಧುಪುರ, ಮಧುಷಿಕ, ಮಧುಪನ್ಮಾ ಎಂಬ ಅನೇಕ ಹೆಸರುಗಳಿದ್ದವೆಂದು ತಿಳಿದುಬರುತ್ತದೆ. ಈಚೀಚಿನ ಕಾಲದ ಮಥುರಾ ಇದು ಏಳು ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದ್ದು ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿದೆ. ಇದು ಶೂರಸೇನನ ರಾಜಧಾನಿಯಾಗಿತ್ತು. ಈ ನಗರ ಪ್ರದೇಶವನ್ನು ಸೋಮವಂಶ ಯಾದವರು ಬಹುಕಾಲ ಆಳುತ್ತಿದ್ದರು, ಹೂಣ, ಹರ್ಷವರ್ಧನ, ವರ್ಮ, ಗುರ್ಜರ, ಪ್ರತೀಹಾರ ಮೊದಲಾದವರು ಇಲ್ಲಿ ಆಳಿಹೋದರು. ಅನಂತರ ಇಲ್ಲಿ ಮುಸಲ್ಮಾನರ ಹಾಗೂ ಬ್ರಿಟಿಷರ ಅಧಿಕಾರವಿತ್ತು. ಶಕ ಮತ್ತು ಕ್ಷತ್ರಪ ಇವರ ಆಳಿಕೆಯಲ್ಲಿ ಮಥುರಾಪುರವು ಜೈನ, ಬೌದ್ಧ ಹಾಗು ಭಗವತ ಧರ್ಮಗಳ ಪ್ರಮುಖ ಕೇಂದ್ರವಾಗಿತ್ತು. ಇಂದಿಗೂ ಈ ಪಟ್ಟಣದಲ್ಲಿ ಅನೇಕ ಹಿಂದೂ ದೇವಾಲಯಗಳು ಹಾಗೂ ಬೌದ್ಧ ಸ್ತೂಪಗಳಿವೆ. ೧೭. ಮರುಕಾಂತಾರ ಇದಕ್ಕೆ ದ್ರುಮಕುಲ್ಯ ದೇಶವೆಂದು ಇನ್ನೊಂದು ಹೆಸರಿದೆ. ದಕ್ಷಿಣ ಸಮುದ್ರ ರಾಜನು ಶರಣಾಗತನಾದನಂತರ ಆತನ ಹೇಳಿಕೆಯಂತೆ ರಾಮನು ತನ್ನ ಬಾಣವನ್ನು ಈ ಪ್ರದೇಶದತ್ತ ಬಿಟ್ಟನು. ನೋಡಲು ಭೀಕರರೆನಿಸುವ ಅಭೀರರೆಂಬ ದಸ್ಯುಜನರು ಇಲ್ಲಿ ವಾಸವಿದ್ದು ಘೋರಕೃತ್ಯಗಳನ್ನು ಮಾಡುತ್ತಿದ್ದರು. ಈ ದೇಶದ ನಿಶ್ಚಿತ ಸ್ಥಾನವನ್ನು ಇಂದು ಗುರುತಿಸುವುದು ದುಸ್ತರವಿದೆ. ಪಂಜಾಬದಲ್ಲಿಯ ಹಿಸ್ಸಾರ ಜಿಲ್ಲೆ, ಪ್ರಾಚೀನ ಸರಸ್ವತೀ ನದಿಯ ತೀರಪ್ರದೇಶ, ವಾಯುವ್ಯ ಭಾರತದಲ್ಲಿಯ ಹೆರಾತ-ಕಂದಹಾರ ಪ್ರದೇಶ, ಸಿಂಧುನದಿಯ ದುಆಬ್ ಪ್ರದೇಶ, ಕಚ್ಚ ಪ್ರಾಂತದ ತ್ರಿಭುಜ ದೇಶ ಮುಂತಾದ ಸ್ಥಾನಗಳಲ್ಲಿ ಅಭೀರರಿದ್ದರೆಂದು ಬೇರೆ ಬೇರೆ ಗ್ರಂಥಗಳಲ್ಲಿ ಉಲ್ಲೇಖವಿದೆ. ಅದೇರೀತಿ ಹೈದ್ರಾಬಾದ್ (ಪಾಕಿಸ್ತಾನ) ಮತ್ತು ಗುಜರಾತ ಪ್ರಾಂತದಲ್ಲಿಯ ಸುರತ ಜಿಲ್ಲೆಯ ಪರಿಸರದಲ್ಲಿ ಆಭೀರರ ವಸತಿಸ್ಥಾನಗಳಿದ್ದವು. ೧೮. ಮಲದ, ಕರುಷ ಈ ಎರಡು ಪ್ರದೇಶಗಳನ್ನು ಒಟ್ಟಿಗೆ ಉಲ್ಲೇಖಿಸಲಾಗುತ್ತದೆ. ವ್ಯತಾಸುರನನ್ನು ಇಂದ್ರನು ಕೊಂದನಂತರ ಇವನು ತನ್ನ ಹಸಿವನ್ನು ಇಲ್ಲಿ ಇಂಗಿಸಿದನು; ಕೊಳೆಯನ್ನು