ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧೫ ಪರಿಶಿಷಗಳು ಪರಿಶಿಷ್ಟ ಒಂದು: ಸಂದೇಹಾಸ್ಪದ ಶಾಪ/ವರಗಳು [ವಾಲ್ಮೀಕಿರಾಮಾಯಣದಲ್ಲಿ ಕೆಲವು ಘಟನೆಗಳು ಸಂದರ್ಭಗಳು ಮತ್ತು ಅವುಗಳ ಸ್ವರೂಪವು ಶಾಪ ಇಲ್ಲವೇ ವರಗಳ ಪರಿಣಾಮಗಳನ್ನು ಹೋಲುವಂತಿದ್ದರೂ ಅವುಗಳನ್ನು ನಿಶ್ಚಿತವಾಗಿ ಶಾಪಗಳೆನ್ನಬೇಕೋ, ವರಗಳೆನ್ನಬೇಕೋ ಎಂಬದರ ಬಗ್ಗೆ ಸಂದೇಹವುಂಟಾಗುತ್ತದೆ; ಮತಭೇದ ಗಳಾಗುವ ಸಾಧ್ಯತೆ ಇದೆ] ೧. ಕಾಗೆಗೆ ದೊರೆತ ಶಿಕ್ಷೆ ಸುಂದರಕಾಂಡ/೩೮ ಲಂಕೆಗೆ ಹೋದ ಹನುಮಾನನು ನಿಜವಾದ ಸೀತೆಯನ್ನು ಕಂಡುಬಂದನು ಎಂಬುದನ್ನು ರಾಮನಿಗೆ ಮನವರಿಕೆ ಮಾಡಿಕೊಡಲು ಏನಾದರೊಂದು ಚಿಹ್ನೆಯನ್ನು ಕೊಡಲು ಸೀತೆಯನ್ನು ವಿನಂತಿಸಿದನು. ಆಗ ಸೀತೆ ಒಂದು ಪ್ರಸಂಗದ ಕಥೆಯನ್ನು ಹೇಳಿದಳು. ಆ ಕಥೆಯನ್ನು ರಾಮನಿಗೆ ತಿಳಿಸಿದರೆ ಆತನಿಗೆ ಮನವರಿಕೆ ನಿಶ್ಚಿತವಾಗಿ ಆಗುವದೆಂದು ಸೀತೆಯು ವ್ಯಕ್ತಪಡಿಸಿದಳು. ರಾಮ-ಲಕ್ಷಣ-ಸೀತೆಯರು ಚಿತ್ರಕೂಟ ಪರ್ವತದ ಅಡಿಯಲ್ಲಿ ಮಂದಾಕಿನೀ ನದೀ ತೀರದ ಪ್ರದೇಶದಲ್ಲಿ ವಾಸವಿದ್ದರು. ಆಗ ಊಟವಾದ ಬಳಿಕ ಮಿಕ್ಕಿ ಉಳಿದ ಮಾಂಸದ ತುಂಡುಗಳನ್ನು ಕಾಯುತ್ತ ಸೀತೆಯು ಕುಳಿತಿದ್ದಳು. ಅವಳ ನಿಕಟದಲ್ಲಿಯೇ ರಾಮನಿದ್ದನು. ಪತಿಪತ್ನಿಯರಲ್ಲಿ ಮೃದುವಾಗಿ ಸರಸಸಲ್ಲಾಪ, ಶೃಂಗಾರಚೇಷಗಳು ನಡೆದಿದ್ದವು. ಆಗ ಮಾಂಸದ ತುಂಡಿನ ಆಸೆಯಿಂದ ಒಂದು ಕಾಗೆಯು ಅಲ್ಲಿಗೆ ಬಂದಿತು. ಸೀತೆಯು ಒಂದು ಮಣ್ಣಿನ ಹೆಂಟೆಯಿಂದ ಹೊಡೆದು ಅದನ್ನು ಹಾರಿಸಲು ಯತ್ನಿಸಿದಳು. ಆದರೆ, ಆ ಕಾಗೆಯು ಮತ್ತೆ ಅವಳ ಸಮೀಪ ಬರಹತ್ತಿತು. ಅವಳ ಮುಖವನ್ನು ತನ್ನ ಕೊಕ್ಕಿನಿಂದ ಕುಕ್ಕಿ, ಉಗುರುಗಳಿಂದ ಪರಚಿ ಸೀತೆಗೆ ನೋವನ್ನುಂಟುಮಾಡಿತು. ಸೀತೆಗೆ ಅತಿಯಾದ ಕೋಪ ಮೂಡಿತು. ಅದು ಇನ್ನಷ್ಟು ಉಪದ್ರವ ಕೊಟ್ಟು ಸೀತೆಯನ್ನು ಬೇಜಾರುಗೊಳಿಸಿತು. ಆಗ ಸಿತೆಯು ದಣಿದು ವಿಶ್ರಮಿಸಲೆಂದು ರಾಮನ ತೊಡೆಯ ಮೇಲೆ