ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧೬ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಮಲಗಿದಳು. ಆಗ ರಾಮ ಮತ್ತು ಸೀತೆ ಇಬ್ಬರಿಗೂ ನಿದ್ದೆಯ ಜೊಂಪು ಹತ್ತಿತು. ಸ ತತ್ರ ಪುನರೇವಾಥ ವಾಯಸ: ಸಮುಪಾಗವತ್ | ತತಃ ಸುಪ್ತಪ್ರಬುದ್ದಾಂ ಮಾಂ ರಾಘವಾಂಕಾತ್ಪಮುತ್ತಿತಾಮ್ | ವಾಯಸಃ ಸಹಸಾಗಮ್ಯ ವಿದದಾರ ಸ್ತನಾಂತರೇ ||೨೨|| ಆ ಕಾಗೆಯು ಪುನಃ ಅಲ್ಲಿಗೇ ಬಂದಿತು. ಸೀತೆಯು ಎಚ್ಚತ್ತು ರಾಮನ ತೊಡೆಯ ಮೇಲಿನಿಂದ ಎದ್ದು ಬದಿಗೆ ಕುಳಿತಳು. ಒಮ್ಮೆಲೇ ಆ ಕಾಗೆಯು ಇವಳತ್ತ ಬಂದು ಇವಳ ವಕ್ಷಃಸ್ಥಳದ ಭಾಗವನ್ನು ಪರಚಿತು. ಪುನಃ ಪುನರಥೋತ್ಪತ್ಯ ವಿದದಾರ ಸ ಮಾಂ ಧೃತಮ್ ||೨೩|| ಈ ಪ್ರಕಾರ ಪುನಃ ಪುನಃ ಆ ಕಾಗೆ ಹಾರಿಬಂದು ಸೀತೆಯ ವಕ್ಷಃಸ್ಥಳವನ್ನು ಪರಚುತ್ತಿತ್ತು. ಸೀತೆಯ ಎದೆಯ ಭಾಗದಿಂದ ಬಿದ್ದ ರಕ್ತದ ಹನಿಗಳ ಕಾರಣ ರಾಮನು ಎಚ್ಚರಗೊಂಡನು. ಸೀತೆಯ ಸ್ತನಗಳೆರಡಕ್ಕೂ ಪರಚಿದ ಗಾಯಗಳನ್ನು ವೀಕ್ಷಿಸಿದ ರಾಮನು ಸಿಡಿಮಿಡಿಗೊಂಡನು. ಆತನು ಸೀತೆಗೆ- ಕೇನ ತೇ ನಾಗನಾಸೋರು ವಿಕ್ಷತು ವೈ ಸನಾಂತರಮ್ || ಕಃ ಕ್ರೀಡತಿ ಸ ರೇಷೇಣ ಪಂಚವಣ ಭೋಗಿನಾ ||೨೫|| “ಎಲೈ ರಂಭೋರು, ಯಾರು ನಿನ್ನ ಸ್ತನಗಳ ಮಧ್ಯದಲ್ಲಿ ಪರಚಿದರು? ಪಂಚಮುಖಗಳಿದ್ದ ನಾಗನೊಡನೆ ಯಾರು ಈ ಕುಚೇಷ್ಟೆಯ ಕ್ರೀಡೆಯನ್ನು ಮಾಡುತ್ತಿದ್ದಾರೆ?” ಎಂದೆನ್ನುತ್ತಿರುವಂತೆ ರಾಮನ ದೃಷ್ಟಿಯು ಆ ಕಾಗೆಯತ್ತ ಹೋಯಿತು. ತಕ್ಷಣ ಅದು ಪೊದೆಯ ಮರೆಯಾಯಿತು. ಪುತ್ರಃ ಕಿಲ ಸ ಶಕ್ತಸ್ಯ ವಾಯಸ: ಪತತಾಂ ವರಃ ೨೭|| “ಪಕ್ಷಿಗಳಲ್ಲಿ ಚಾಣಾಕ್ಷವೆನಿಸಿದ ಆ ಕಾಗೆಯು ಇಂದ್ರನ ಮಗನಾಗಿದ್ದನು.' ಕ್ರೋಧಗೊಂಡ ರಾಮನು ಬ್ರಹ್ಮಾಸ್ತ್ರದಿಂದ ಮಂತ್ರಿಸಿದ ಒಂದು ದರ್ಭೆಯನ್ನು ಆ ಕಾಗೆಯ ಮೇಲೆ ಬಿಟ್ಟನು. ಆಗ ಆ ಕಾಗೆ ಪೊದೆಯಾಚೆ ಹೊರಗೆ ಬಂದು ಆಕಾಶದತ್ತ ಹಾರಿತು. ಕಾಗೆ ಹೋದತ್ತ ಆ ಮಂತ್ರಿಸಿದ ದರ್ಭೆಯು ಬೆನ್ನಟ್ಟಿತು. ಈ ಕಾಗೆಯು ಮೂರೂ ಲೋಕಗಳನ್ನು ಸುತ್ತಿತು. ಎಲ್ಲಿಯೂ ಅದಕ್ಕೆ ಆಸರೆ