ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೪೩

“ನಾನು ನುಡಿದದ್ದು ಸುಳ್ಳಾಗಿದ್ದರೆ ನನಗೆ ಈ ಬಗೆಯ ಆಪತ್ತುಗಳು ಉಂಟಾಗಲಿ!” ಈ ತರಹದ ಶಾಪವನ್ನು, ಸ್ವತಃ ಸ್ವೀಕರಿಸುವುದೆಂದರೆ 'ಶಪಥ'೨೨. ಈ ವ್ಯಾಖ್ಯೆಯಲ್ಲಿ ಯಾವುದೊಂದು ದೇವತೆಗೆ ಅಥವಾ ಪವಿತ್ರವಸ್ತುವಿಗೆ ಆಹ್ವಾನವಿರದೇ ಸ್ವತಃ ವರ್ತನೆಯ ಬಗ್ಗೆ ಇದ್ದ ವಿಶ್ವಾಸ, ಸತ್ಯತೆಗಳನ್ನು ಪಣಕ್ಕೆ ತೊಡಗಿಸಿದಂತಿರುತ್ತದೆ. ಸೀತೆಯ ಶುದ್ಧ ಹಾಗೂ ನಿಷ್ಕಲಂಕವಾದ ಚಾರಿತ್ರ್ಯವನ್ನು ಸಾರಿಹೇಳುವಾಗ ವಾಲ್ಮೀಕಿಯು ಈ ರೀತಿ ಎಂದಿದ್ದಾನೆ:೨೩


           ಬಹುವರ್ಷಸಹಸ್ರಾಣಿ ತಪಾರ್ಶಚರ್ಯಾ ಮಯಾ ಕೃತಾ |
           ನೋಪಾಶ್ನೀಯಾಂ ಫಲಂ ತಸ್ಯಾ ದುಷ್ಟೇರುಂ ಯದಿ ಮೈಥಿಲೀ ||
           ಮನಸಾ ಕರ್ಮಣಾ ವಾಚಾ ಭೂತಪೂರ್ವಂ ನ ಕಿಲ್ಬಿಷಮ್ |
           ತಸ್ಯಾಹಂ ಫಲಮಶ್ನಾಮಿ ಅಪಾಪಾ ಮೈತಿಲೀ ಯದಿ ||

“ಈ ಮೈಥಿಲಿಯು ದೋಷಯುಕ್ತಳೆಂದು ಕಂಡುಬಂದರೆ ನನ್ನ ಸಹಸ್ರಾರು ವರ್ಷಗಳ ತಪಸ್ಸಿನ ಫಲವು ನನಗೆ ಸಿಗದಿರಲಿ! ಈವರೆಗೆ ನನ್ನಿಂದ ನಡೆಯದಿರದೆ ಕಾಯೇನ ವಚಸಾ ಮನಸಾ ಪಾತಕಗಳ ಫಲವು ನನಗೆ ಲಭಿಸಲಿ!” ಇಲ್ಲಿ ವಾಲ್ಮೀಕಿಯು ತನ್ನ ಸ್ವಂತದ ಸದ್ವರ್ತನೆಯ ಬಗ್ಗೆ ಇದ್ದ ದೃಢವಿಶ್ವಾಸವನ್ನು ಈ ಶಪಥದ ಮೂಲಕ ಪ್ರಕಟಿಸಿದ್ದಾನೆ.

ಕೆಲವು ಶಪಥಗಳಲ್ಲಿ ದೇವತೆಗಳಿಗೆ ಆವಾಹನೆ ಇರುವುದಿಲ್ಲ; ಸ್ವಂತಕ್ಕೆ ಶಾಪವಿರುವುದಿಲ್ಲ; ಅಥವಾ ಅಭಿಚಾರಕ್ಕೆ ಸ್ಥಾನವಿರುವುದಿಲ್ಲ. ವೈಯಕ್ತಿಕ ಪ್ರತಿಷ್ಠೆ, ನೈತಿಕ ಹೊಣೆ, ಭಾವನಾತ್ಮಕ ಸಂಬಂಧಗಳು ಶಪಥಗಳ ಮೂಲಕ ತೋರಿ ಬರುತ್ತವೆ. ಭರತನ ಭೇಟಿಯಾದ ನಂತರ ಬೀಳ್ಕೊಡುವಾಗ ರಾಮನು ಶತ್ರುಘ್ನನಿಗೆ ಹೇಳಿದ್ದು-


           ಮಾತರಂ ರಕ್ಷ ಕೈಕೇಯೀಂ ಮಾ ರೋಷಂ ಕುರು ತಾಂ ಪ್ರತಿ ||೨೭||
           ಮಯಾ ಚ ಸೀತಯಾ ಚೈವ ತಪ್ತೋsಸಿ ರಘುನಂದನ ||೨೮||

“ಮಾತೆಯಾದ ಕೈಕೇಯಿಯನ್ನು ರಕ್ಷಿಸು! ಆಕೆಯಲ್ಲಿ ಕೋಪ ತಾಳ ಬೇಡ!೨೪ ನಿನಗೆ ನನ್ನ ಮತ್ತು ಸೀತೆಯ ಆಣೆಯಿದೆ.” ಅದೇ ರೀತಿಯಲ್ಲಿ

——————

೨೨. ಭಾರತೀಯ ಸಂಸ್ಕೃತಿ ಕೋಶ, ಖಂಡ ೯, ಪು.೨೧೫.
೨೩. ಉತ್ತರಕಾಂಡ, ೯೭/೨೦, ೨೧.
೨೪. ಅಯೋಧ್ಯಾ ಕಾಂಡ, ೧೧೨.