ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಸಹಾನುಭೂತಿ ಇರುವದು ಆವಶ್ಯಕವಿರುತ್ತದೆ. ಈ ಮೂಲಕ ಸದಿಚ್ಛೆಯ ಅಭಿವ್ಯಕ್ತಿಯು ಉಚ್ಚಾರದಿಂದ ಆಗುತ್ತದೆ. ಸದ್ಭಾವನೆಯು ಸಮಾನಧರ್ಮವಾಗಿದ್ದರೂ, ವರ, ಆಶೀರ್ವಾದ ಮತ್ತು ಸದಿಚ್ಛೆಗಳ ವ್ಯಾಪಕತೆ, ಸ್ವರೂಪ ಹಾಗೂ ಪರಿಣಾಮಗಳು ಭಿನ್ನವಾಗಿವೆ.

ಆಶೀರ್ವಾದ ಈ ಶಬ್ದವು ಆಶೀಃ+ವಾದ ಈ ಎರಡು ಸಂಸ್ಕೃತ ಶಬ್ದಗಳಿಂದ ಬಂದಿದೆ. 'ಇಷ್ಟಾರ್ಥಾವಿಷ್ಕರಣಮ್'- ಇಷ್ಟವಾದ ಅರ್ಥದ ಆವಿಷ್ಕರಣ ಎಂಬ ವ್ಯಾಖ್ಯೆಯು ಆಶೀರ್ವಾದವನ್ನು ಕುರಿತು-


           ವಾತ್ಸಲ್ಯಾದ್ಯತ್ರ, ಮಾನ್ಯೇನ ಕನಿಷ್ಠಸ್ಯಾಭಿಧೀಯತೇ |
           ಇಷ್ಟಾವಧಾರಕಂ ವಾಕ್ಯಮಾಶೀಃ ಸಾ ಪರಿಕೀರ್ತಿತಾ ||

ಹಿರಿಯರು ಕಿರಿಯರ ಬಗ್ಗೆ ವಾತ್ಸಲ್ಯವನ್ನು ತಾಳಿ, ಅವರಿಗೆ ಇಷ್ಟವಿದ್ದ ಸಂಗತಿಗಳು ಸಫಲಗೊಳ್ಳಬೇಕೆಂದು ನುಡಿಯುವ ಶಬ್ದಗಳು ಆಶೀರ್ವಾದವೆಂದಾಗುತ್ತವೆಂದು 'ಶಬ್ದ-ಕಲ್ಪದ್ರುಮ'ದಲ್ಲಿ ಹೇಳಿದ್ದಾರೆ.೪೬ ಆಶೀರ್ವಾದದ ವೈದಿಕೇತರ ಮಂತ್ರವು ಈ ರೀತಿ ಇದೆ.


           ಆಶೀರ್ವಾದಾ: ಸಫಲಾ: ಸಂತು ಪೂರ್ಣಾಃ ಸಂತು ಮನೋರಥಾಃ |
           ಶತ್ರೂಣಾಂ ನಾಶನಂ ಚಾಸ್ತು ಮೈತ್ರಾಣಾಮುದಾಯಸ್ತವ||

ಋಗ್ವೇದದಲ್ಲಿಯ ಈ ಕೆಳಗಿನ ಮಂತ್ರವು ಎಲ್ಲರಿಗೂ ಪರಿಚಿತವಿದೆ.


           ಶತಂ ಜೀವ ಶರದೋ ವರ್ಧಮಾನ ಶತಂ ಹೇಮಂತಾಂ ರತಮ್ ವಸಂತಾನ್ |
           ಶತಮಿಂದ್ರಾಗ್ನೀ ಸವಿತಾ ಬೃಹಸ್ವತಿ: ಸತಾಯುಷಾ ಹವಿಷೇಮಂ ಪುನರ್ದು:||
           ಆಹಾರ್ಷಂ ತ್ವಾವಿದಂ ತ್ವಾ ಪುನರಾಗಾ: ಪುನರ್ನವ |
           ಸರ್ವಾಂಗ ಸರ್ವ ತೇ ಚಕ್ಷು ಸರ್ವಮಾಯುಶ್ಚ ತೇವಿದಮ್ |

“ನೀನು ನೂರು ಶರದ್ ಋತುಗಳ ಕಾಲ ನೂರು ಹೇಮಂತ ಋತುಗಳವರೆಗೆ ಮತ್ತು ನೂರು ವಸಂತ ಋತುಗಳ ಕಾಲ ಜೀವಿಸಿರು! ಉತ್ತರೋತ್ತರ ಅಭಿವೃದ್ಧಿಯನ್ನು ಪಡೆ. ಇಂದ್ರ, ಅಗ್ನಿ ಮತ್ತು ಬೃಹಸ್ಪತಿ ಇವರುಗಳಿಗೆ ಶತಾಯುಸ್ಸನ್ನುಂಟುಮಾಡುವ ಹವಿರ್ಭಾಗವು ತಲುಪುವುದರಿಂದ ಅವರು ಪ್ರಸನ್ನರಾಗಿ

——————
೪೬. ಭಾರತೀಯ ಸಂಸ್ಕೃತಿ ಕೋಶ, ಖಂಡ ೧, ಪು.೪೯೫-೯೬ (ದ್ವಿ.ಆ.)