ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ವಿದ್ಯಾರ್ಥಿ ಕರಭೂಷಣ MM ಜ್ಞಾನವನ್ನೂ ಆರ್ಜಿಸಿಕೊಳ್ಳಬೇಕು, ನಿಜವಾದ ಶ್ರೇಯಸ್ಸಿಗೆ ಇದೇ ಮುಖ್ಯ ಕಾರಣವು, ಪ್ರತಿಯೊಬ್ಬನೂ ಪ್ರಯೋಜನಕರವಾದ ಯಾವುದಾ ದರೂ ಕೆಲವು ವಿಷಯಗಳಲ್ಲಿ ನಮಗೆ ತಿಳಿಯದಿರತಕ್ಕ ವಿಷಯಗಳನ್ನು ತಿಳಿಯಿ ಸಬಲ್ಲರೆಂದು ತಿಳಿದುಕೊಂಡು ಪ್ರವರ್ತಿಸಿದರೆ, ಜ್ಞಾನಾರ್ಜನೆಗೆ ತುಂಬ ಸಹಾಯವಾಗುವುದರಲ್ಲಿ ಯಾವ ಸಂದೇಹವೂ ತೋರುವುದಿಲ್ಲ. ಸದಿಷ್ಟಾರ್ಧಪ್ರಾಪ್ತಿಯೇ ನಿಜವಾದ ಸೌಖ್ಯವು, ಧನ್ಮರಹಿತವಾದ ಇಷ್ಟಾರ್ಥಗಳೆಂದಿಗೂ ಸೌಖ್ಯಪ್ರದವಾಗಲಾರವು. ಇಂಧ ಸೌಖ್ಯವನ್ನು ತೋರಿಸುವುದಕ್ಕೋಸ್ಕರವೇ, ಸಕಲ ವೇದ ಶಾಸ್ತ್ರ ಪುರಾಣೇತಿಹಾಸಗಳ ಹುಟ್ಟಿರುವುವು. ಇವುಗಳನ್ನು ಪರಿಶೀಲಿಸಿದರೆ, ಧರಾಧರಗಳೂ ಸಾರಾ ಸಾರಗಳೂ ಗೊತ್ತಾಗುವುವು, ಅಸತ್ಕಾವ್ಯಗಳು ಅವಲೋಕನಕ್ಕೆ ಅರ್ಹ ವಾದುವುಗಳು ; ಅವುಗಳು ಸರಿಷ್ಟಾರ್ಧಸಿದ್ಧಿಗೆ ವಿರುದ್ಧವಾಗಿ ಪರಿಣಮಿ ಸುವುವು. ಆದುದುಂದ, ಜನಗಳು ಧರದಿಂದ ನಡೆದು ಕೊಳ್ಳುವಂತೆ ಮಾಡ ಬೇಕೆಂಬ ಅಭಿನಿವೇಶವುಳ್ಳ ಸರ್ಕಾರದವರು, ಸತ್ಯಧರ ಪ್ರತಿಪಾದಕಗಳಾದ ಗ್ರಂಧಗಳು ಅವರಿಗೆ ಸುಲಭವಾಗಿ ದೊರೆಯುವಂತೆ ಏರ್ಪಾಡುಗಳನ್ನು ಮಾಡಬೇಕು. ಅಧರಕ್ಕೂ ಅಸತ್ಯಕ್ಕೂ ಆಕರ್ಷಣರೂಪವಾಗಿರತಕ್ಕ ಧ್ವನಿಯುಳ್ಳ ಗ್ರಂಧಗಳನ್ನು ಕೂಡ, ಕೇವಲ ಬಾಲ್ಯಾವಸ್ಥೆಯಲ್ಲಾದರೂ ವಿದ್ಯಾರ್ಥಿಗಳಿಗೆ ದೊರೆಯದಂತೆ ಮಾಡಬೇಕು, ಅಸತ್ಕಾವ್ಯಗಳು ಅತ್ಯಂತ ಅನರ್ಧಕ್ಕೆ ಹೇತುವಾದುವುಗಳು, ಜಾವಾಪಟ್ಟಣದಲ್ಲಿ ವಿಷದ ಹಬೆ ಹೊರಡತಕ್ಕೆ ಒಂದು ಚಿಲುಮೆಯಿರುವುದು, ಇದರ ಸವಿಾಪಕ್ಕೆ ಹೋದವ ರೆಲ್ಲರೂ, ಈ ಹಬೆಯನ್ನು ತೆಗೆದುಕೊಂಡ ಕೂಡಲೆ ದೇಹವನ್ನು ಬಿಡು