ಪರಿಚ್ಛೇದ ೨ ೧೩೯ ಲೇಶವೂ ಅವಕಾಶವನ್ನು ಕೊಡುತ್ತಿರಲಿಲ್ಲ, ಇವರ ಗುಣಾತಿಶಯ ಗಳನ್ನು ಹೋಲಿಸುವಾಗ, ಇವರಲ್ಲಿ ಒಬ್ಬರಿಗೊಬ್ಬರನ್ನು ಹೋಲಿಸಬೇಕಾ ಗಿತ್ತೇ ಹೊರತು, ಇವರ ಜತೆಯಲ್ಲಿ ಹೋಲಿಸುವುದಕ್ಕೆ ಬೇರೆ ಜನಗಳು ಸಿಕ್ಕುತಿರಲಿಲ್ಲ. ಒಂದಾನೊಂದುದಿವಸ, ಡಯೋನಿಸೆಸ್ ಎಂಬ ಪ್ರಭುವಿನ ನಿರಂಕುಶಪ್ರವರ್ತನದಿಂದ ಪ್ರಜೆಗಳಿಗೆ ಉಂಟಾದ ಅನಿರ್ವಚನೀಯವಾದ ಕಷ್ಟಗಳನ್ನು, ಡೇರ್ಮ ಎಂಬವನು ಉದ್ಘಾಟಿಸಿದನು, ಆ ಪ್ರಭುವಿಗೆ ಇವನ ವಿಷಯದಲ್ಲಿ ದುರಾಗ್ರಹವುಂಟಾಯಿತು. ಇವನನ್ನು ಹಿಡತರಿಸಿ « ನಿನಗೆ ಮರಣದಂಡನೆಯನ್ನು ಮಾಡಿರುತ್ತೇನೆ ; ಶಿರಚ್ಛೇದವನ್ನು ಮಾಡಿ ಸಿಕೊಳ್ಳುವುದಕ್ಕೆ ಸಿದ್ಧನಾಗು.” ಎಂದು ಹೇಳಿದನು. ಆಗ ಇವನು « ನನ್ನ ಹೆಂಡತಿ ಮಕ್ಕಳು ದ್ವೀಪಾಂತರದಲ್ಲಿರುತ್ತಾರೆ. ಮರ ದಿವಸ ಅವಧಿಯನ್ನು ಕೊಟ್ಟರೆ, ನಾನು ಹೋಗಿ ನನ್ನ ಗೃಹಕೃತ್ಯಗಳನ್ನೆಲ್ಲ ಕ್ರಮ ಪಡಿಸಿ ಬರುತ್ತೇನೆ ; ಅನಂತರ ಶಿರಚ್ಚೇದವನ್ನು ಮಾಡಬಹುದು ” ಎಂದು ಪ್ರಾರ್ಧಿಸಿದನು, ಅದಕ್ಕೆ ಡಯೋನಿಸೆಸ್ ರಾಜನು “ ಕೈವವಾದ ಕಾಲಕ್ಕೆ ಸರಿಯಾಗಿ ನೀನು ಬಾರದಿದ್ದರೆ ನಿನಗೆ ಬದುಲಾಗಿ ಶಿರಚ್ಛೇದ ಮಾಡಿಸಿಕೊಳ್ಳುತ್ತೇನೆಂದು ಒಪ್ಪತಕ್ಕ ಒಬ್ಬನನ್ನು ಬಾವಿಾನಾಗಿ ತಂದು ಕೊಟ್ಟರೆ, ಮರುದಿವಸ ಅವಧಿ ಕೊಡಲ್ಪಡುವುದು.” ಎಂದು ಹೇಳಿ. ದನು. ಅಂಧ ಜನಗಳು ಸಿಕ್ಕುವುದು ಅಸಾಧ್ಯವೆಂದು ಭಾವಿಸಿ, ಡೇರ್ಮ ಎಂಬವನು, ದೊರೆಯನ್ನು ಕುರಿತು ( ಅಂಧ ಜಾಮೀನುದಾರರು ನನಗೆ ಸಿಕ್ಕುವುದಿಲ್ಲ, ನಿನ್ನ ಇಷ್ಯ ವಿದ್ದಂತೆ ಮಾಡಿಕೋ. ಎಂದು ಹೇಳಿದನು. ಅವನ ಶಿರಚ್ಛೇದವನ್ನು ಮಾಡಿ ಅವನ ತಲೆಯನ್ನು ತಂದು ತೋರಿಸಬೇ
ಪುಟ:ವಿದ್ಯಾರ್ಥಿ ಕರಭೂಷಣ.djvu/೧೪೭
ಗೋಚರ