ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಚೇದ ೪ ೧೭೯ ಗಳೆಂದು, ಕೆಲವು ಔಷಧಗಳನ್ನು ಕೆಲವುಜನ ವೈದ್ಯರು ಪ್ರಕಟಿಸುತ್ತಾರೆ. ಅವರ ಪ್ರಕಟನೆ ನಿಜವೇ ಸುಳ್ಳೇ ಎಂಬುದನ್ನು ಗೊತ್ತು ಮಾಡುವುದಕ್ಕೂ ಉಪಾಯಗಳಿರುತ್ತವೆ. ಅಂಧ ಔಷಧಗಳನ್ನು ತೆಗೆದುಕೊಂಡವರು ಅವು ಗಳಿಂದ ಜನಗಳು ಪ್ರಯೋಜನ ಹೊಂದಿರುವರೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಸಾಧ್ಯವು, ಈರೀತಿಯಾದ ಅನುಭವವುಂಟಾದ ಹೊರತು, ಆ ಔಷಧವನ್ನು ಬುದ್ದಿಶಾಲಿಗಳು ಉಪಯೋಗಿಸುವುದಿಲ್ಲ. ಅನೇಕ ಔಷಧಗಳು, ಅನೇಕ ಹೊಸ ರೋಗಗಳನ್ನು ಹುಟ್ಟಿಸುವುವು ; ರೋಗಗಳನ್ನು ಪರಿಹರಿಸುವುದಕ್ಕೆ ಬದುಲಾಗಿ ಪ್ರಾಣವನ್ನೂ ಅವಹರಿಸು ವುವು. ಆದುದರಿಂದ, ಉದ್ದಿಷ್ಟವಾದ ಔಷಧವು ರೋಗಪರಿಹಾರವಾಡ ದಿದ್ದಾಗ್ಯೂ ಹೊಸ ರೋಗಗಳನ್ನು ಹುಟ್ಟಿಸುವುದಿಲ್ಲ ವೆಂದು ತಿಳಿದಹೊರತು, ವಿಚಾರಪರರಾದವರು ಆ ಔಷಧವನ್ನು ತೆಗೆದುಕೊಳ್ಳುವುದಿಲ್ಲ, ರಸ ಗಂಧಕ ಪಾಷಾಣ ಮಿಶ್ರವಾದ ಔಷಧವನ್ನು ಸೇವಿಸುವುದರಲ್ಲಿ ಹೇಗೆ ಜಾಗರೂಕತೆಯು ಆವಶ್ಯಕವೋ, ಹಾಗೆಯೇ ಗ್ರಂಧಾವಲೋಕನದಲ್ಲಯ ಕೂಡ ಜಾಗರೂಕತೆಯು ಅತ್ಯಾವಶ್ಯಕವ, ಸತ್ಕಾವ್ಯಾಲಾಪದಿಂದ ಶ್ರೇಯಸ್ಸನ್ನೂ, ಅಸತ್ಯಾನ್ಯಾಲಾಪದಿಂದ ಅಶ್ರೇಯಸ್ಸನ್ನೂ ಹೊಂದು ವುದು ಜಗತ್ತ್ವ ಸಿದ್ಧವಾಗಿರುವುದು, ಆದುದರಿಂದ, ಪ್ರತಿಯೊಬ್ಬರೂ ಅಸ ದ್ಭಂಧಗಳ ಅವಲೋಕನದಿಂದ ಬುದ್ದಿ ಕೊಡುವಂತೆ ಮಾಡಿಕೊಳ್ಳದಿರುವು ದುತ್ತು ಮವು. ಪುಸ್ತಕಗಳನ್ನೋದುವ ಕ್ರಮವನ್ನು ಎಲ್ಲರೂ ತಿಳಿದು ಕೊಳ್ಳಬೇಕು. ಇದನ್ನು ಚೆನ್ನಾಗಿ ತಿಳಿದುಕೊಳ್ಳಬೇಕಾದರೆ, ಊಟಮಾಡತಕ್ಕವರು ಹೇಗೆ