wwwmv ಪರಿಚ್ಛೇದ ೪ ೧೮೧ ಬೇಕು, ಅದೇ ಗ್ರಂಧವನ್ನು ಸ್ನೇಹಿತರಾರಾದರೂ ಓದುತ್ತಿದ್ದರೆ, ಗುಣ ದೋಷಗಳನ್ನು ಚರ್ಚೆ ಮಾಡಿ, ಆ ಚರ್ಚೆಯಿಂದ ಪುನರವಲೋಕನವು ಆವಶ್ಯಕವೆಂದು ತೋರಿದರೆ, ಪುನಃ ಅವಲೋಕಿಸಿ, ನಿಜವಾದ ಅಭಿಪ್ರಾಯ ವನ್ನು ನಿರ್ಧರಿಸಿಕೊಂಡು, ಅದನ್ನು ಬರೆದಿಡಬೇಕು, ಈ ರೀತಿಯಲ್ಲಿ ವ್ಯಾಸಂಗಮಾಡುವುದಕ್ಕೆ ಅವಕಾಶವು ಸ್ವಲ್ಪ ಹೆಚ್ಚಾಗಿ ಬೇಕಾಗುತ್ತದೆ ; ಆದರೆ, ಹೀಗೆ ಮಾಡಲ್ಪಟ್ಟ ವ್ಯಾಸಂಗವು ಉಪರಿಸ್ಥವವಾಗಿ ಮಾಡಲ್ಪಟ್ಟ ವ್ಯಾಸಂಗಕ್ಕಿಂತಲೂ ವಿಶೇಷ ಪ್ರಯೋಜನಕಾರಿಯಾಗಿರುತ್ತದೆ. ಗ್ರಂಧಗಳನ್ನು ಬರೆಯಲಪೇಕ್ಷೆಯುಳ್ಳವರು, ಇತರರು ಬರೆದಿರತಕ್ಕ ಗ್ರಂಧಗಳನ್ನು ಸರಿಯಾಗಿ ಅರ್ಧಮಾಡಿಕೊಂಡು ಓದಬೇಕು ಅವು ಕಂಠಸ್ಥ ವಾಗುವವರೆಗೂ ಪ್ರಗತಿಪುನಃ ಓದಿ ಗಟ್ಟಿ ಮಾಡಬೇಕು, ಅವನ್ನು ಆಗಾಗ್ಗೆ ಆವೃತ್ತಿಹಾಕಬೇಕು. ಮಹಾಕವಿಗಳು ಬರೆದ ಗ್ರಂಥಗಳಲ್ಲಿ ಹತ್ತು ಸಾವಿರ ಶ್ಲೋಕಗಳನ್ನು ಯಾರು ಬೇಚಾರಿಲ್ಲದೆ ಗಟ್ಟಿ ಮಾಡಿ ಒಪ್ಪಿಸುವರೋ, ಅವರು ಸ್ವಲ್ಪ ಹೆಚ್ಚು ಕಡಮೆಯಾಗಿ ಆ ಮಹಾಕವಿಗಳಂತೆ ಕವಿತ್ವ ಮಾಡ ತಕ್ಕೆ ಶಕ್ತಿಯನ್ನು ಪಡೆಯುವರು ಸದ್ಯ ಕಾವ್ಯಗಳಲ್ಲಿ ಹೇಗೋ ಹಾಗೆ ಗದ್ಯ ಕಾವ್ಯಗಳಲ್ಲಿಯೂ ಕೂಡ ವಿದ್ಯಾರ್ಥಿಯು ಗಟ್ಟಿ ಮಾಡುವುದರಲ್ಲಿ ತೋರಿಸುವ ಆಸಕ್ತಿಗನುಸಾರವಾಗಿ ಗದ್ಯವನ್ನು ಬರೆಯತಕ್ಕೆ ಶಕ್ತಿ ಬರು ವದು. ಸರಸ್ವತೀಪ್ರಸನ್ನತೆಯಿಂದ ಪ್ರಯತ್ನ ಮಾಡದಿರತಕ್ಕವರಿಗೂ ಕವಿತಾ ಶಕ್ತಿ ಬರುವುದೆಂದು, ಆ ಶಕ್ತಿಯ ಮರ್ಮತಿಳಿಯದವರು ತಿಳಿದುಕೊಂಡಿ ರುವುದುಂಟು ; ಇದು ಶುದ್ಧ ತಪ್ಪ, ವಿದ್ಯೆಯು ಅಭ್ಯಾಸಕ್ಕನುಸಾರ ವಾಗಿರುವುದು. < ವ್ಯಾಸೋಚ್ಛಿಷ್ಟಂ ಜಗತ್ತಯಂ ” ಎಂಬುದಾಗಿ ಕೆಲವು ತ
ಪುಟ:ವಿದ್ಯಾರ್ಥಿ ಕರಭೂಷಣ.djvu/೧೮೯
ಗೋಚರ