ಪರಿಚ್ಛೇದ ೧. ೨೯ ಕ್ರ ಬಂದು ಬಾಗಿಲು ತೆಗೆದು, ಬಂದುದಕ್ಕೆ ಕಾರಣವನ್ನು ಕೇಳಿದನು. ** ನಿನ್ನ ತಿರಸ್ಸನ್ನು ಭೇದಿಸಿ ತೆಗೆದುಕೊಂಡು ಹೋಗುವುದಕ್ಕೋಸ್ಕರ ಬಂದಿದ್ದೇವೆ ಎಂದು ಅವರು ಹೇಳಿದರು, ಆಗ ಅವನು ” ನನ್ನ ತಿರಸ್ಸನ್ನು ಛೇದಿಸಿ ತೆಗೆದುಕೊಂಡು ಹೋಗುವುದರಿಂದ ಯ ಆ ಕೆಲಸವನ್ನು ಮಾಡಬಹುದು , ನಾನು ಸಿದ್ಧನಾಗಿದ್ದೇನೆ. ಇಲ್ಲಿ ಈ ಕೆಲಸವನ್ನು ಮಾಡುವುದಕ್ಕಿಂತ, ಬೇರೆಯ ಕಡೆಯಲ್ಲಿ ಮಾಡುವುದು ತನ, ನನ್ನ ಜನಗಳಿಗೆ ಎಚ್ಚರವಾದರೆ, ನಿಮ್ಮ ಪರಿಣಾಮವಾಗುವುದು ಕಷ್ಟ ನಿಮ್ಮ ಜತೆಯಲ್ಲಿ ನಾನೇ ಬರುತ್ತೇನೆ, ನಿರ್ಮಾನುಷವಾದ ಪ್ರದೇ ಶದಲ್ಲಿ ನನ್ನ ತಲೆಯನ್ನು ಕತ್ತರಿಸಿ ತೆಗೆದುಕೊಂಡು ಹೋಗಬಹುದು ) ಎಂದು ಹೇಳಿದನು. ಅದಕ್ಕೆ ಅವರು ಒಪ್ಪಿ, ಶಿಬಿರದ ಸಮಾಸದಲ್ಲಿದ್ದ ಒಂದು ಕಾಡಿಗೆ ಇವನನ್ನು ಕರೆದುಕೊಂಡು ಹೋದರು. ಅಲ್ಲಿ ಡಿಮಾಸ್ತ್ರ ನೀಸನು ** ಶಿರಚ್ಛೇದನವನ್ನು ಮಾಡಿಸಿಕೊಳ್ಳುವದಕ್ಕೆ ನಾನು ಸಿದ್ಧನಾಗಿ ದ್ದೇನೆ. ಆದರೆ, ನನ್ನನ್ನು ಎಲ್ಲರೂ ಬಹಳ ತಿಳಿದವನೆಂದು ಹೇಳುತ್ತಾರೆ. ನಾನು ಸಾಯುವುದಕ್ಕೆ ಮುಂಚೆ ನನ್ನಿಂದ ಯಾವುದಾದರೊಂದು ಹಿತೋಪದೇಶವನ್ನು ಮಾಡಿಸಿಕೊಳ್ಳುವುದಕ್ಕೆ ನಿಮಗಿಷ್ಟವಿದ್ದರೆ, ಒಂದು ವನ್ಯಾಸಪೂರ್ವಕವಾಗಿ ನಿಮಗೆ ಹಿತೋಪದೇಶಮಾಡುತ್ತೇನೆ ಎಂದು ಹೇಳಿದನು ಅದಕ್ಕವರು, ಎರಡನೆಯ ತಿಪ್ಪನು ಕೊಟ್ಟಿರುವ ಅಬ್ಬೆ ಯನ್ನೂ, ಅವನ ಶಿರಸ್ಸನ್ನು ತೆಗೆದುಕೊಂಡು ಹೋಗಿ ಕೊಡುವುದರಿಂದ ತಮ್ಮಲ್ಲಿ ಪ್ರತಿಯೊಬ್ಬನಿಗೂ ಒರತಕ್ಕ ಪ್ರತಿಫಲದ ಏಷಯವನ್ನೂ ಅವನಿಗೆ ತಿಳಿಯಿಸಿ, ಆಮೇಲೆ ಉಪನ್ಯಾಸಮಾಡುವುದಕ್ಕೆ ಅಪ್ಪಣೆಯನ್ನು ಕೊಟ್ಟರು.
ಪುಟ:ವಿದ್ಯಾರ್ಥಿ ಕರಭೂಷಣ.djvu/೩೭
ಗೋಚರ