೪೪ ವಿದ್ಯಾರ್ಥಿ ಕರಭೂಷಣ ಕೆಲವುಜನ ವಿದ್ಯಾರ್ಥಿಗಳೂ, ವಿದ್ಯಾರ್ಥಿನಿಯರೂ, ಹಿಡಿದ ಕೆಲಸ ವನ್ನು ಮಾಡುವುದರಲ್ಲಿ ಬಹಳ ಶ್ರದ್ಧೆಯನ್ನೂ ಐಕಾಗ್ರವನ್ನೂ ತೋರಿ ಸುವರು. ಕೆಲವುಜನ ವಿದ್ಯಾರ್ಥಿನಿಯರು, ನಾಲ್ಕಯ್ತು ಗೋಲಿಗಳನ್ನೂ ನಿಂಬೆಯ ಹಣ್ಣುಗಳನ್ನೂ ಒಂದೊಂದಾಗಿ ಮೇಲಕ್ಕೆ ಎಸೆಯುತ್ತ, ಎರಡು ಮೂರು ನಿಮಿಷಗಳವರೆಗೂ, ಒಂದು ಗೋಲಿ ಅಥವಾ ಒಂದು ನಿಂಬೆ ಹಣ್ಣು ಕೈಗೆ ತಗುಲುತಿದ್ದರೆ, ಮೂರು ನಾಲ್ಕು ಗೋಲಿ ಅಧವಾ ನಿಂಬೆಯ ಹಣ್ಣುಗಳು ಆಕಾಶದಲ್ಲಿರುವಂತೆ ಹಾರಿಸುವುದರಲ್ಲಿ ನೈಪುಣ್ಯವನ್ನು ತೋರಿ ಸುತ್ತ, ವಿನೋದದಿಂದ ಕಾಲಹರಣ ಮಾಡುವರು ಇದೇ ರೀತಿಯಲ್ಲಿ ನಾನಾವಿಧವಾದ ಆಟಗಳಲ್ಲಿ ಚಿಕ್ಕವರು ಮಾತ್ರವಲ್ಲದೆ ದೊಡ್ಡವರು ಕೂಡ ಅಸಾಧಾರಣವಾದ ಕೌಶಲ್ಯವನ್ನು ತೋರಿಸುತ್ತ ಬಹುಕಾಲವನ್ನು ಕಳೆ ಯುವರು. ಇದೇ ಕಾಲವನ್ನು ಫಲಕಾರಿಗಳಾದ ಶಾಸ್ತ್ರಾಭ್ಯಾಸಗಳನ್ನು ಮಾಡುವುದಕ್ಕೆ ವಿನಿಯೋಗಿಸಿದರೆ, ಹಾಗೆ ವಿನಿಯೋಗಿಸತಕ್ಕವರು ಸಕಲ ಶಾಸ್ತ್ರವಿಶಾರದರಾಗಿ ಸಂಪತ್ತನ್ನೂ ಯಶಸ್ಸನ್ನೂ ಹೊಂದುವುದು ದ.ಲ. ಭವ, ಈ ಆಟಗಳಲ್ಲಿ ಉತ್ಸಾಹವೂ ಅಕ್ಷೇಶವೂ ಸಂತೋಷವೂ ಹುಟ್ಟಲೆಂದು, ಅನೇಕರು ಜೂಜಾಡುವುದರಲ್ಲಿಯೂ ಕೌಶಲ್ಯವನ್ನು ತೋರಿ ಸುವರು. ಈಜೂಜಾಟಗಳಿಂದ ಆಗತಕ್ಕ ಅನರ್ಧಗಳನ್ನು ಅನೇಕರು ಚೆನ್ನಾಗಿ ತಿಳಿದುಕೊಂಡಿರುವುದಿಲ್ಲ, ಅದನ್ನು ಸಮಗ್ರವಾಗಿ ತಿಳಿದುಕೊಳ್ಳಲವೇ ಕ್ಷೆಯುಳ್ಳವರು, ಪಾಂಡವರು ಜೂಜಾಟದಲ್ಲಿ ಸರ್ವಸ್ವವನ್ನೂ ತಮ್ಮನ್ನೂ ತಮ್ಮ ಹೆಂಡತಿಯನ್ನೂ ಕಳೆದುಕೊಂಡು ಹೇಗೆ ಅನಿರ್ವಚನೀಯವಾದ ಕ್ಷೇಶಕ್ಕೆ ಗುರಿಯಾದರೋ ಅದನ್ನು ಪರಾಲೋಚಿಸುವುದುತ್ತಮವು,
ಪುಟ:ವಿದ್ಯಾರ್ಥಿ ಕರಭೂಷಣ.djvu/೫೨
ಗೋಚರ