ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೧ ದೂರದೃಷ್ಟಿಯನ್ನು ನಾಲ್ವತ್ತು ಸಾವಿರದಷ್ಟು ಹೆಚ್ಚಿಸತಕ್ಕ ದುರ್ಬಿನುಗಳು ಈಗ ನಿಮ್ಮಿತವಾಗಿರುವುವು, ಬರೀ ಕಣ್ಣಿಗೆ ಕಾಣತಕ್ಕ ನಕ್ಷತ್ರಗಳಿಗಿಂತಲೂ, ಗ್ರಹಗಳಿಗಿಂತಲೂ, ದುರ್ಬಿನಿನಲ್ಲಿ ನೋಡತಕ್ಕವರ ಕಣ್ಣಿಗೆ, ಹೆಚ್ಚಾಗಿ ಕೋಟ್ಯಂತರ ನಕ್ಷತ್ರಗಳೂ ಗ್ರಹಗಳೂ ಕಾಣುತ್ತವೆ. ಈ ಅಖಂಡ ಬ್ರಹ್ಮಾಂಡಕ್ಕೆ ಕೊನೆ ಮೊದಲೊಂದೂ ಗೊತ್ತಾಗುವುದಿಲ್ಲ, ಆದ್ದರಿಂದಲೇ, ಈ ಬ್ರಹ್ಮಾಂಡವು ಆದ್ಯಂತರಹಿತವಾದುದೆಂಬುದಾಗಿಯೂ, ಇದಕ್ಕೆ ಒಡೆ ಯನಾಗಿಯೂ ಇದರಲ್ಲಿ ವ್ಯಾಪ್ತನಾಗಿಯ ಇರತಕ್ಕೆ ಜಗದೀಶ್ವರನು. ಅನಂತನೆಂಬುದಾಗಿಯ, ಬುದ್ಧಿಶಾಲಿಗಳು ತಿಳಿಯುವರು ಈ ಸೃಷ್ಟಿ ಕ್ರಮವನ್ನು ನೋಡಿದರೆ, ಮನುಷ್ಯನು ಈ ಬ್ರಹ್ಮಾಂಡದಲ್ಲಿ ಒಂದು ಪಿಪೀ ಲಿಕೆಯಂತೆ ಪರಿಣಮಿಸುವನು, ಇವನ ಜ್ಞಾನವೂ ಒದ್ದಿ ಯ ಅಲ್ಪವಾ ಗಿದ್ದಾಗ್ಯೂ, ಜ್ಞಾನವಿಹೀನರಾದವರು ತಾವು ಸರ್ವಜ್ಞರೆಂದು ವಿಜೃಂಭಿ ಸುವರು. ಇಂಧ ವಿಜೃಂಭಣೆಗೆ, ಅಲ್ಪವಿದ್ಯೆಯ ಅಲ್ಪಜ್ಞಾನವೂ ಕಾರಣ ವಾಗಿರುವುವು ನಿಷ್ಕ ಷ್ಟ ವಾದ ಜ್ಞಾನಕ್ಕೆ, ಆಚರಣೆಯೇ ಲಕ್ಷಣವು ಜ್ಞಾನಶಾಲಿಗಳೆಂದು ವಿಜೃಂಭಿಸತಕ್ಕವರಲ್ಲಿ, ಅವರು ಪಡೆದಿರತಕ್ಕ ಅಲ್ಪ ಜ್ಞಾನವು ಎಷ್ಟು ಮಟ್ಟಿಗೆ ಆಚರಣೆಯಲ್ಲಿರುವುದೋ ಅದನ್ನು ಪರಿಶೀಲಿಸಿದರೆ, ಎಂಧವರಿಗಾದರೂ ಬಹಳ ವಿಷಾದವಾಗದಿರಲಾರದು, ಸರ್ವವಿದ್ಯಾ ವಿಶಾರದರೆಂದು ತಿಳಿದು ಕೊಂಡಿರತಕ್ಕ ಜನಗಳೂ ಕೂಡ ಇಂದ್ರಿಯಪರವ ಶರಾಗಿ ತಮ್ಮ ಜ್ಞಾನಕ್ಕೆ ಅನನುರೂಪವಾದ ಕೆಲಸಗಳನ್ನು ಮಾಡಿ ಪತಿತ ರಾಗುತ್ತಲಿರುವುದನ್ನು, ನಾವು ಪ್ರತಿದಿನದಲ್ಲಿಯೂ ನೋಡುತ್ತಲಿದ್ದೇವೆ. ವೈರಾಗ್ಯಚಕ್ರವರ್ತಿಗಳ ವೇಷವನ್ನು ಧರಿಸಿ, ಅದಕ್ಕನನುರೂಪವಾದ ಕೆಲ