ಪುಟ:ವಿದ್ಯಾರ್ಥಿ ಕರಭೂಷಣ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೧ ೬೫ ಷ್ಯನು ಜನ್ಮ ಸಿದ್ಧವಾಗಿರತಕ್ಕ ದುರಭಿಮಾನಗಳನ್ನು ಬಿಡಬೇಕು, ಶಾಸ್ತ್ರ ಗಳನ್ನು ಅಭ್ಯಾಸಮಾಡಿದುದಕ್ಕೆ ಇದೇ ಮುಖ್ಯವಾದ ಯೋಗ್ಯತಾಸಿದ್ದಿ ಯೆನ್ನಿಸುವುದು, ತತ್ವಜ್ಞಾನವನ್ನು ಹೊಂದುವುದಕ್ಕೆ, ಪಂಚೇಂದ್ರಿಯಗಳೇ ಮುಖ್ಯದ್ವಾರಗಳು, ಈ ಯಿಂದ್ರಿಯಗಳಿಗೆ ವಿಷಯಗಳಿರುವುವು. ಈ ವಿಷಯಗಳಲ್ಲಿ, ಒಳ್ಳೆಯ ವಿಷಯ- ಕೆಟ್ಟ ವಿಷಯ-ಇವೆರಡೂ ಇರುವು ದುಂಟು. ಒಳ್ಳೆಯ ವಿಷಯಗಳಿಗೆ ಗಮನಕೊಡುವುದಕ್ಕೂ, ಕೆಟ್ಟ ವಿಷ ಯಗಳಲ್ಲಿ ಸರಾಣ್ಮುಖನಾಗುವುದ ಕ್ಕೂ ಶಕ್ತಿಯನ್ನು ಸಂಪಾದಿಸಿಕೊಳ್ಳು ವದು ಒಹಳ ಆವಶ್ಯಕವು. ಇದು ಸುಲಭವಲ್ಲ , ಇದು ಬಹಳ ಕಷ್ಟಸಾ ಧ್ಯವಾದುದು. ಈ ಶಕ್ತಿಯನ್ನು ಸಂಪಾದಿಸತಕ್ಕವನೇ ಜಿತೇಂದ್ರಿಯನೆನ್ನಿ ಸಿಕೊಳ್ಳುವನು, ವಿದ್ಯಾರ್ಥಿಗಳು ಈ ಶಕ್ತಿಯನ್ನು ಪ್ರಧವತಃ ಸಂಪಾದಿ ಸಿಕೊಳ್ಳಬೇಕು, ಇಂಧ ಶಕ್ತಿಯನ್ನು ಸಂಪಾದಿಸಿಕೊಳ್ಳುವ ಪ್ರಯತ್ನಕ್ಕೆ ಅನೇಕ ಎಫ್ ಗಳು ಬರುವುವು, ವಿಶ್ವಾಮಿತ್ರನ ತಪಸ್ಸಿಗೆ ಎಂತಹ ಅಪ್ರತಿ ಹತವಾದ ವಿಘ್ನ ಗಳು ಬಂದು ವೋ-ಅದನ್ನು ಸರಾಲೋಚಿಸಿದರೆ, ಆ ವಿಘ್ನ ಗಳನ್ನು ಗೆಲ್ಲುವುದರಲ್ಲಿ ಆತನು ಎಷ್ಟು ಪ್ರಯತ್ನ ಮಾಡಿದನೋ-ಅದು ಗೊತ್ತಾಗುವುದು, ಅಲಸ್ಟ್ಯಾಂಡರನೇ ಮೊದಲಾದವರು ಪ್ರಪಂಚವನ್ನೆಲ್ಲ ಗೆದ್ದರೆಂದು ಹೇಳುತ್ತಾರೆ, ನಮ್ಮ ಶ್ರೇಯಸ್ಸಿಗೆ ಕುರಾರಪ್ರಾಯವಾದ ವಿಷಯಸಂಚವನ್ನು ಗೆಲ್ಲ ದವರು, ಮತ್ತೇನನ್ನು ತಾನೆ ಗೆಲ್ಲಬಲ್ಲರು ? ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸಯ್ಯರ್ಯಗಳನ್ನು ಗೆಲ್ಲ ದವರು, ಪ್ರಸಂಚವನ್ನು ಗೆಲ್ಲುವುದು ನಿಜವೇ ? ಅದು ಹೇಗಾದರೂ ಇರಲಿ, ಲಕ್ಷ ಜನಗಳಲ್ಲಿ ಒಬ್ಬನಾದರೂ ಜಿತೇಂದ್ರಿಯನಾದವನಿರುವನು.