ಪುಟ:ವಿದ್ಯಾರ್ಥಿ ಕರಭೂಷಣ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨ ೮೨ ವಿದ್ಯಾರ್ಥಿ ಕರಭೂಷಣ MMow ಆದಾಗ್ಯೂ, ಆವೆಯು ಮೊಲದೊಡನೆ ಜೂಜು ಕಟ್ಟಿ ಓಡುವದಾಗಿ ಹಠ ಮಾಡಿದುದರಿಂದ, ಪಂಚಾಯಿತರು ನಿಯಮಿಸಲ್ಪಟ್ಟರು, ಜೂಜುಬಿಡಲ್ಪ ಟಿತು, ಒಂದು ನಿಮಿಷಾರ್ಧದಲ್ಲಿ ಮೊಲವು ಮುಕ್ಕಾಲುಮರುಸಿ ಪಾಲು ಓಡಿ, ಹಿಂದಿರುಗಿ ನೋಡಿತು. ಆವೆಯು ಬಹಳ ದೂರದಲ್ಲಿ ಬರುತ್ತಿ ದ್ವಿತು, ಈ ಪ್ರಾಣಿ ಯು ನನ್ನೊಡನೆ ಓಡುವದಾಗಿ Tರಹಂಕಾರವಟು ತಾನು ಇಷ್ಟು ಹಿಂದೆ ಬಿದ್ದಿರುವುದನ್ನು ನೋಡಿದಾಗ ಅದಕ್ಕೆ ಇನ್ನೂ ನಾಚುಗೆಯಾಗಲಿಲ್ಲ ವೆಂದು ಪರಿಹಾಸಮಾಡಿ, ಅದು ಬರುವವರೆಗೂ ವಿಶ್ರ ಮಿಸಿಕೊಳ್ಳೋಣವೆಂದು, ಸವಿಾಪದಲ್ಲಿದ್ದ ಒಂದು ಪೊದರಿನಲ್ಲಿ ಮಲಗಿಕೊಂ ಡಿತು. ಓಟದಿಂದುಂಟಾದ ಶ್ರಮದಿಂದ, ಅದಕ್ಕೆ ನಿದ್ರೆ ಬಂದಿತು. ಅದಕ್ಕೆ ಎಚ್ಚರವಾಗುವುದರೊಳಗಾಗಿ, ಆನೆಯ ಮುಂದಕ್ಕೆ ಹೋಗಿ, ಜಯವನ್ನು ಗೊತ್ತುಮಾಡುವ ಗುರುತಿನ ಒಳಿಗೆ ಹೋಗಿರುವುದನ್ನು ನೋಡಿ, ಜೂಜಿನಲ್ಲಿ ಓಡತಕ್ಕವರಿಗೆ ಜಯವಾಗುವುದೆಂದು ಹೇಳುವುದಕ್ಕಾಗುವುದಿಲ್ಲವೆಂಬು ದಾಗಿಯ, ವೇಗದ ಜತೆಗೆ ಜಾಗರೂಕತೆಯ ಇರಬೇಕೆಂಬುದಾಗಿಯೂ, ಅಹಂಕಾರದಿಂದ ಮೈ ಮರೆತಿರಬಾರದೆಂಬುದಾಗಿಯೂ, ವೇಗವಿಲ್ಲದೆ ನಿಧಾನವಾಗಿ ಹೋಗತಕ್ಕವರೂ ಕೂಡ ಉದಾಸೀನತೆಮಾಡದೆ ಮೈಮೇಲೆ ಪ್ರಜ್ಞೆಯನ್ನಿಟ್ಟುಕೊಂಡು ಅವಿಚ್ಛಿನ್ನವಾಗಿ ಪ್ರಯಾಣಮಾಡಿದರೆ- ಈ ಗುಣಾತಿಶಯಗಳಿಲ್ಲದೆ ವೇಗವಾಗಿ ಹೋಗತಕ್ಕವರನ್ನೂ ಕೂಡ ಸೋಲಿಸು ವರೆಂಬುದಾಗಿಯೂ ತಿಳಿದುಕೊಂಡು, ಭಗ್ನ ಮನೋರಧವಾಗಿ, ಎಲ್ಲ ಕಾಡುಮೃಗಗಳ ಪರಿಹಾಸಕ್ಕೂ ಗುರಿಯಾಯಿತು. ಈ ಕಥೆಯು ನಡೆದು ದಲ್ಲ ವಾದಾಗ್ಯೂ, ಜಾಗರೂಕರಾದ ಮನುಷ್ಯರಿಗೂ, ಅಲಸರಾದವರಿಗೂ